Sachin Tendulkar: ಏಕದಿನದಲ್ಲಿ ದ್ವಿಶತಕ, ಶತಕ ಸೇರಿಂದತೆ ನೂರಾರು ದಾಖಲೆ ಬರೆದಿರುವ ಸಚಿನ್ ತೆಂಡೂಲ್ಕರ್, ಸರಿಯಾಗಿ 11 ವರ್ಷಗಳ ಹಿಂದೆ ಅಂದರೆ, ಮಾರ್ಚ್ 16, 2012 ರಂದು ಶತಕಗಳ ಶತಕ ಬರೆದು ಇತಿಹಾಸ ನಿರ್ಮಿಸಿದ್ದರು.
Mar 16, 2023 | 11:51 AM







ತಾಜಾ ಸುದ್ದಿ
Updated on:Mar 16, 2023 | 11:51 AM
Mar 16, 2023 | 11:51 AM
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಸಿಡಿಸಿದ ಬ್ಯಾಟ್ಸ್‌ಮನ್ ಯಾರಾದರೂ ಇದ್ದರೆ ಅದು ನಮ್ಮ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮಾತ್ರ. ಏಕದಿನದಲ್ಲಿ ದ್ವಿಶತಕ, ಶತಕ ಸೇರಿಂದತೆ ನೂರಾರು ದಾಖಲೆ ಬರೆದಿರುವ ಸಚಿನ್ ತೆಂಡೂಲ್ಕರ್, ಸರಿಯಾಗಿ 11 ವರ್ಷಗಳ ಹಿಂದೆ ಅಂದರೆ, ಮಾರ್ಚ್ 16, 2012 ರಂದು ಶತಕಗಳ ಶತಕ ಬರೆದು ಇತಿಹಾಸ ನಿರ್ಮಿಸಿದ್ದರು.
ಸಚಿನ್ ತಮ್ಮ 100ನೇ ಶತಕಕ್ಕಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯಬೇಕಾಯಿತು. ಮಾರ್ಚ್ 12 ರಂದು ಭಾರತದಲ್ಲಿ 2011 ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ 99 ನೇ ಅಂತರರಾಷ್ಟ್ರೀಯ ಶತಕವನ್ನು ಬಾರಿಸಿದ್ದ ಸಚಿನ್, ಆ ಬಳಿಕ ಏಷ್ಯಾಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 370 ದಿನಗಳ ನಂತರ ದಾಖಲೆಯ ಶತಕ ಸಿಡಿಸಿದರು.
ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಬಾಂಗ್ಲಾ ವಿರುದ್ಧ ಕಣಕ್ಕಿಳಿದಿದ್ದ ಭಾರತ ಮೊದಲು ಬ್ಯಾಟ್ ಮಾಡಿತ್ತು. ಸಚಿನ್ ಹಾಗೂ ಗೌತಮ್ ಗಂಭೀರ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ಗಂಭೀರ್ ಬೇಗನೆ ಔಟಾದರು, ಆ ಬಳಿಕ ಜೊತೆಯಾದ ಸಚಿನ್ ಹಾಗೂ ವಿರಾಟ್ ಕೊಹ್ಲಿ ಒಟ್ಟಾಗಿ ತಂಡವನ್ನು ತಂಡವನ್ನು 173 ರನ್‌ಗಳಿಗೆ ಕೊಂಡೊಯ್ದಿದ್ದರು. ಆದರೆ ಈ ಹಂತದಲ್ಲಿ ಕೊಹ್ಲಿ 66 ರನ್ ಗಳಿಸಿ ಔಟಾದರು.
ಬಳಿಕ ಸಚಿನ್‌ಗೆ ಸಾಥ್ ನೀಡಿದ ಸುರೇಶ್ ರೈನಾ 76 ರನ್ಗಳ ಜೊತೆಯಾಟವನ್ನು ಹಂಚಿಕೊಂಡರು. ರೈನಾ ಜೊತೆಗಿನ ಜೊತೆಯಾಟದಲ್ಲಿ ಸಚಿನ್ ಶತಕ ಪೂರೈಸಿದ್ದರು. 44ನೇ ಓವರ್ನ ನಾಲ್ಕನೇ ಎಸೆತದಲ್ಲಿ ಸಿಂಗಲ್ ರನ್ ಗಳಿಸುವ ಮೂಲಕ ಸಚಿನ್ 100ನೇ ಶತಕ ಪೂರೈಸಿದರು. ತಮ್ಮ ಇನ್ನಿಂಗ್ಸ್ನಲ್ಲಿ 147 ಎಸೆತಗಳನ್ನು ಎದುರಿಸಿದ ಸಚಿನ್, 12 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 114 ರನ್ ಗಳಿಸಿದರು.
ಆದರೆ ಈ ಪಂದ್ಯದಲ್ಲಿ ಭಾರತ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಐದು ವಿಕೆಟ್ ಕಳೆದುಕೊಂಡು 289 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಐದು ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ತಂಡದ ಪರ ತಮೀಮ್ ಇಕ್ಬಾಲ್ 99 ಎಸೆತಗಳಲ್ಲಿ 70 ರನ್ಗಳ ಗೆಲುವಿನ ಇನ್ನಿಂಗ್ಸ್ ಆಡಿದರು.
ಈ ನೂರನೇ ಶತಕ ಸಚಿನ್‌ಗೆ ಬಹಳ ವಿಶೇಷವಾಗಿದೆ. ಏಕೆಂದರೆ ಈ ಶತಕದ ಬಳಿಕ ಸಚಿನ್ ಅವರ ಬ್ಯಾಟ್ ಮತ್ತೆ ಆಗಸ ನೋಡಲಿಲ್ಲ. ಅಂದರೆ ಸಚಿನ್ ಅವರ ವೃತ್ತಿಜೀವನದ ಕೊನೆಯ ಶತಕ ಇದಾಯಿತು. ಸದ್ಯ ಸಚಿನ್ ಬಾರಿಸಿರುವ ಶತಕಗಳ ಶತಕದ ಸಮೀಪಕ್ಕೆ ಇಲ್ಲಿಯವರೆಗೆ ಯಾರೂ ತಲುಪಿಲ್ಲ.
ಸದ್ಯ ಟೀಂ ಇಂಡಿಯಾದ ವಿರಾಟ್ ಕೊಹ್ಲಿ ಮಾತ್ರ ಸಚಿನ್ ನಂತರದ ಸ್ಥಾನದಲ್ಲಿದ್ದು, ಸದ್ಯ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 75 ಶತಕಗಳನ್ನು ಬಾರಿಸಿದ್ದಾರೆ.