5.4 C
Munich
Sunday, March 26, 2023

Oscar Award winning Naatu Naatu song composer MM Keeravani Kannada movies | MM Keeravani: ಕನ್ನಡ ಚಿತ್ರರಂಗಕ್ಕೂ ಇದೆ ಎಂಎಂ ಕೀರವಾಣಿ ಕೊಡುಗೆ; ಆಸ್ಕರ್​ ಗೆದ್ದ ಸಂಗೀತ ನಿರ್ದೇಶಕನಿಗೆ ಕರುನಾಡ ನಂಟು

ಓದಲೇಬೇಕು

MM Keeravani Kannada movies: ಎಂ.ಎಂ. ಕೀರವಾಣಿ ಅವರು ಕನ್ನಡದಲ್ಲಿ ಮೊದಲು ಸಂಗೀತ ನೀಡಿದ್ದು ‘ಅಳಿಮಯ್ಯ’ ಚಿತ್ರಕ್ಕೆ. ನಂತರ ಅನೇಕ ಸಿನಿಮಾಗಳಿಗೆ ಅವರು ಸಂಗೀತ ನಿರ್ದೇಶನ ಮಾಡಿದರು.

ಎಂಎಂ ಕೀರವಾಣಿ, ಚಂದ್ರಬೋಸ್

ಸಂಗೀತ ನಿರ್ದೇಶಕ ಎಂಎಂ ಕೀರವಾಣಿ (MM Keeravani) ಅವರ ಖ್ಯಾತಿ ಜಗದಗಲ ಹಬ್ಬಿದೆ. ವಿದೇಶದಲ್ಲೂ ಅವರ ಗುಣಗಾನ ಮಾಡಲಾಗುತ್ತಿದೆ. ಅದಕ್ಕೆ ಕಾರಣ ಆಗಿರುವುದು ‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ (Naatu Naatu) ಹಾಡು. ಈ ಗೀತೆಗೆ ಆಸ್ಕರ್​ ಪ್ರಶಸ್ತಿ ಸಿಕ್ಕಿದೆ. ಲಾಸ್​ ಏಂಜಲಿಸ್​ನ ಡಾಲ್ಬಿ ಥಿಯೇಟರ್​ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ಹಾಡಿಗೆ ಅಕಾಡೆಮಿ ಅವಾರ್ಡ್ (Oscar Awards 2023) ಘೋಷಣೆ ಆಗುತ್ತಿದ್ದಂತೆಯೇ ಭಾರತದಾದ್ಯಂತ ಹರ್ಷೋದ್ಘಾರ ಮೊಳಗಿತು. ಎಲ್ಲರೂ ಎಂಎಂ ಕೀರವಾಣಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಅಂದಹಾಗೆ, ಅವರು ಬರೀ ತೆಲುಗು ಸಿನಿಮಾಗಳಿಗೆ ಮಾತ್ರ ಸಂಗೀತ ನೀಡಿಲ್ಲ. ತೆಲುಗಿನ ಜೊತೆಗೆ ಹಿಂದಿ, ತಮಿಳು ಮತ್ತು ಕನ್ನಡದ ಚಿತ್ರಗಳಿಗೂ ಕೆಲಸ ಮಾಡಿದ್ದಾರೆ. ಆ ಮೂಲಕ ಚಂದನವನಕ್ಕೂ ಅವರು ಕೊಡುಗೆ ನೀಡಿದ್ದಾರೆ.

ಸ್ಯಾಂಡಲ್​ವುಡ್​ ಸಿನಿಮಾಗಳಿಗೆ ಎಂಎಂ ಕೀರವಾಣಿ ಸಂಗೀತ:

ಚಿತ್ರರಂಗದಲ್ಲಿ ಎಂಎಂ ಕೀರವಾಣಿ ಅವರ ಅನುಭವ ಅಪಾರ. 1990ರಿಂದಲೂ ಅವರು ಸಕ್ರಿಯರಾಗಿದ್ದಾರೆ. ಹಲವಾರು ಸೂಪರ್​ ಹಿಟ್​ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಕನ್ನಡದಲ್ಲಿ ಅವರು ಮೊದಲು ಸಂಗೀತ ನೀಡಿದ್ದು ‘ಅಳಿಮಯ್ಯ’ ಚಿತ್ರಕ್ಕೆ. ಆ ಸಿನಿಮಾದಲ್ಲಿ ಅರ್ಜುನ್​ ಸರ್ಜಾ, ಶ್ರುತಿ, ಲೋಕೇಶ್​ ಮುಂತಾದವರು ನಟಿಸಿದ್ದರು. ಆ ಸಿನಿಮಾಗೆ ನಿರ್ದೇಶನ ಮಾಡಿದ್ದು ಅರ್ಜುನ್​ ಸರ್ಜಾ ಸಹೋದರ ಕಿಶೋರ್​ ಸರ್ಜಾ.

ಇದನ್ನೂ ಓದಿ: Naatu Naatu Song: ‘ಮುಂದಿನ ಕಾಲಕ್ಕೂ ನೆನಪಿನಲ್ಲಿ ಉಳಿಯುವಂಥದ್ದು ನಾಟು ನಾಟು ಹಾಡು’: ಆಸ್ಕರ್​ ಗೆದ್ದಿದ್ದಕ್ಕೆ ಮೋದಿ ಪ್ರಶಂಸೆ

ಇದನ್ನೂ ಓದಿಕನ್ನಡದ ‘ಅಪ್ಪಾಜಿ’, ‘ಭೈರವ’, ‘ಸ್ವಾತಿ’, ‘ಕರ್ನಾಟಕ ಸುಪುತ್ರ’, ‘ದೀಪಾವಳಿ’, ‘ಜಮೀನ್ದಾರ್ರು’ ಮುಂತಾದ ಸಿನಿಮಾಗಳಿಗೆ ಸಂಗೀತ ನೀಡಿದ್ದು ಎಂಎಂ ಕೀರವಾಣಿ ಅವರೇ. ತೆಲುಗಿನಿಂದ ಕನ್ನಡಕ್ಕೆ ರಿಮೇಕ್​ ಆದ ‘ಮರ್ಯಾದೆ ರಾಮಣ್ಣ’ ಹಾಗೂ ‘ವೀರ ಮದಕರಿ’ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದು ಕೂಡ ಎಂಎಂ ಕೀರವಾಣಿ. ಇತ್ತೀಚಿನ ವರ್ಷಗಳಲ್ಲಿ ಅವರು ಕನ್ನಡದ ಸಿನಿಮಾಗಳಿಗೆ ಸಂಗೀತ ನೀಡುವುದು ಕಡಿಮೆ ಆಗಿದೆ.

ರಾಜಮೌಳಿ-ಕೀರವಾಣಿ ಹಿಟ್​ ಕಾಂಬಿನೇಷನ್​:

2001ರಲ್ಲಿ ರಾಜಮೌಳಿ ಮೊದಲ ಬಾರಿಗೆ ನಿರ್ದೇಶನ ಮಾಡಿದ ‘ಸ್ಟೂಡೆಂಟ್​ ನಂ.1’ ಸಿನಿಮಾದಿಂದ ಹಿಡಿದು 2022ರಲ್ಲಿ ತೆರೆಕಂಡ ‘ಆರ್​ಆರ್​ಆರ್​’ ಚಿತ್ರದವರೆಗೆ ಎಲ್ಲ ಸಿನಿಮಾಗಳಿಗೂ ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಮೌಳಿ ಅವರ ಗೆಲುವಿನಲ್ಲಿ ಕೀರವಾಣಿ ಅವರ ಕೊಡುಗೆಯೂ ಮಹತ್ವದ್ದಾಗಿದೆ ಎಂದರೆ ತಪ್ಪಿಲ್ಲ.

ಇದನ್ನೂ ಓದಿ:  ಆಸ್ಕರ್ ಗೆದ್ದ ಎಂಎಂ ಕೀರವಾಣಿಯ ಬೆಸ್ಟ್ ಹಾಡುಗಳು ಇವೇ ನೋಡಿ

ಆಸ್ಕರ್​ ಪ್ರಶಸ್ತಿ ಗೆದ್ದಿರುವ ಎಂಎಂ ಕೀರವಾಣಿ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಅಭಿನಂದನೆ ತಿಳಿಸಿದ್ದಾರೆ. ‘‘ಜಾಗತಿಕ ಮಟ್ಟದಲ್ಲಿ ನಾಟು ನಾಟು ಹಾಡು ಜನಪ್ರಿಯತೆ ಪಡೆದುಕೊಂಡಿದೆ. ಇದು ಮುಂದಿನ ಕಾಲಕ್ಕೂ ನೆನಪಿನಲ್ಲಿ ಉಳಿಯುವಂತಹ ಹಾಡು. ಪ್ರತಿಷ್ಠಿತ ಪ್ರಶಸ್ತಿ ಗೆದ್ದಿದ್ದಕ್ಕಾಗಿ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ, ಗೀತರಚನಕಾರ ಚಂದ್ರಬೋಸ್​ ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು. ಭಾರತಕ್ಕೆ ಸಂತಸ ಮತ್ತು ಹೆಮ್ಮೆ’ ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!