4.5 C
Munich
Thursday, February 23, 2023

Pak Man Says I am ready to live under Modi’s rule. Modi is a great man viral video | ಸರ್ವಶಕ್ತನು ಪ್ರಧಾನಿಯಾಗಿ ನಮಗೆ ಮೋದಿಯನ್ನು ನೀಡಲಿ, ಅವರು ಮಹಾನ್ ವ್ಯಕ್ತಿ ಎಂದು ಹೇಳಿದ ಪಾಕಿಸ್ತಾನಿ; ವಿಡಿಯೊ ವೈರಲ್

ಓದಲೇಬೇಕು

ನಾನು ಮೋದಿಯವರ ಅಧಿಕಾರದಲ್ಲಿ ಬದುಕಲು ಸಿದ್ಧ, ಮೋದಿ ಒಬ್ಬ ಮಹಾನ್ ವ್ಯಕ್ತಿ, ಅವರು ಕೆಟ್ಟ ಮನುಷ್ಯ ಅಲ್ಲ, ಭಾರತೀಯರಿಗೆ ಟೊಮ್ಯಾಟೊ ಮತ್ತು ಚಿಕನ್ ಕೈಗೆಟುಕುವ ದರದಲ್ಲಿ ಸಿಗುತ್ತಿದೆ

ವೈರಲ್ ವಿಡಿಯೊದಲ್ಲಿನ ದೃಶ್ಯ

ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಶೆಹಬಾಜ್ ಷರೀಫ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪಾಕಿಸ್ತಾನಿಯೊಬ್ಬರು ತಮ್ಮ ದೇಶದಲ್ಲಿ ಮೋದಿ (Narendra Modi) ಆಡಳಿತವಿರುತ್ತಿದ್ದರೆ ಸಮಂಜಸವಾದ ಬೆಲೆಯಲ್ಲಿ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತಿತ್ತು ಎಂದು ಹೇಳಿರುವ ವಿಡಿಯೊವನ್ನು ಯುಟ್ಯೂಬರ್  (Pakistani Youtuber) ಸನಾ ಅಮ್ಜದ್ ಪೋಸ್ಟ್ ಮಾಡಿದ್ದಾರೆ. ಮಾಜಿ ಪತ್ರಕರ್ತೆ, ಸನಾ ಅಮ್ಜದ್ ಹಲವಾರು ಪಾಕಿಸ್ತಾನಿ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದವರು. ಅವರು ಪೋಸ್ಟ್ ಮಾಡಿದ ಈ ವಿಡಿಯೊ ವೈರಲ್ ಆಗಿದ್ದು, ವಿಡಿಯೊದಲ್ಲಿ ಹೀಗೆ ಹೇಳುವುದು ಕೇಳಿಸುತ್ತಿದೆ.’ಪಾಕಿಸ್ತಾನ್ ಸೆ ಜಿಂದಾ ಭಾಗೋ ಚಾಹೆ ಇಂಡಿಯಾ ಚಲೇ ಜಾವೋ” (ಪಾಕಿಸ್ತಾನದಿಂದ ಓಡಿ ಹೋಗಿ, ಭಾರತದಲ್ಲಿ ಆಶ್ರಯ ಪಡೆಯಿರು) ಘೋಷಣೆಯನ್ನು ಏಕೆ ಬೀದಿಗಳಲ್ಲಿ ಕೂಗಲಾಗುತ್ತದೆ ಎಂದು  ನಿರೂಪಕಿ ಕೇಳುತ್ತಿದ್ದಾರೆ. ಅದಕ್ಕೆ ವ್ಯಕ್ತಿಯೊಬ್ಬರು ಪಾಕಿಸ್ತಾನದಲ್ಲಿ ಹುಟ್ಟಬಾರದೆಂದು ಬಯಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ನಮ್ಮ ಸಹವರ್ತಿ ದೇಶವಾಸಿಗಳು ಸಮಂಜಸವಾದ ಬೆಲೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಮತ್ತು ಪ್ರತಿ ರಾತ್ರಿ ತಮ್ಮ ಮಕ್ಕಳಿಗೆ ಆಹಾರವನ್ನು ನೀಡಲು ಸಾಧ್ಯವಾಗಬಹುದಾಗಿರುವುದರಿಂದ ವಿಭಜನೆ ಸಂಭವಿಸದೇ ಇದ್ದರೆ ಒಳ್ಳೆಯದಿತ್ತು ಎಂದು ನಾನು ಬಯಸುತ್ತೇನೆ ಎಂದು ಪಾಕಿಸ್ತಾನದ ವ್ಯಕ್ತಿ ಹೇಳಿದ್ದಾರೆ.

ಪಾಕಿಸ್ತಾನವು ಭಾರತದಿಂದ ವಿಭಜನೆ ಆಗಬಾರದಿತ್ತು ಎಂದು ನಾನು ಬಯಸುತ್ತೇನೆ. ಹಾಗಾಗಿದ್ದರೆ ನಾವು ಟೊಮೆಟೊವನ್ನು ಪಿಕೆಆರ್ 20/ಕೆಜಿಗೆ, ಚಿಕನ್ ಅನ್ನು ಪಿಕೆಆರ್ 150/ಕೆಜಿಗೆ ಮತ್ತು ಪೆಟ್ರೋಲ್ ಅನ್ನು ಲೀಟರ್‌ಗೆ ಪಿಕೆಆರ್ 50 ಕ್ಕೆ ಖರೀದಿಸುತ್ತೇವೆ ಎಂದು ಅವರು ಹೇಳಿರುವುದು ವಿಡಿಯೊದಲ್ಲಿದೆ.

“ನಾವು ಇಸ್ಲಾಮಿಸ್ಟ್ ರಾಷ್ಟ್ರವನ್ನು ಪಡೆದಿರುವುದು ದುರದೃಷ್ಟಕರ ಆದರೆ ನಾವು ಇಲ್ಲಿ ಇಸ್ಲಾಂ ಅನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ” ಎಂದು ಅವರು ಹೇಳಿದರು.

ಇದನ್ನೂ ಓದಿ: Pakistan Economic Crisis: ಸೈನಿಕರಿಗೆ ಆಹಾರ ನೀಡಲು ಸಾಧ್ಯವಾಗುತ್ತಿಲ್ಲ, ಅಕ್ಷರಶಃ ತತ್ತರಿಸಿದ ಪಾಕಿಸ್ತಾನ

ನರೇಂದ್ರ ಮೋದಿಯನ್ನು ಬಿಟ್ಟು ಬೇರೆ ಯಾರೂ ಇಲ್ಲ ಎಂದ ಅವರು ಮೋದಿ ನಮಗಿಂತ ಉತ್ತಮರು, ಅವರ ಜನರು ಅವರನ್ನು ತುಂಬಾ ಗೌರವಿಸುತ್ತಾರೆ ಮತ್ತು ಅನುಸರಿಸುತ್ತಾರೆ, ನಮಗೆ ನರೇಂದ್ರ ಮೋದಿ ಇದ್ದರೆ, ಇಲ್ಲಿ ನವಾಜ್ ಷರೀಫ್ ಅಥವಾ ಬೆನಜೀರ್ ಅಥವಾ ಇಮ್ರಾನ್ ದಿವಂಗತ ಮಾಜಿ ಮಿಲಿಟರಿ ಆಡಳಿತಗಾರ ಜನರಲ್ (ಪರ್ವೇಜ್) ಮುಷರಫ್ ಕೂಡಾ ಬೇಕಾಗಿರಲಿಲ್ಲ. ನಮಗೆ ಬೇಕಾಗಿರುವುದು ಪ್ರಧಾನಿ ಮೋದಿ, ಏಕೆಂದರೆ ಅವರು ಮಾತ್ರ ದೇಶದ ಎಲ್ಲ ಶಕ್ತಿಗಳನ್ನು ನಿಭಾಯಿಸಬಲ್ಲರು. ಭಾರತವು ಪ್ರಸ್ತುತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ, ಆದರೆ ನಾವು ಎಲ್ಲಿಯೂ ಇಲ್ಲ

“ನಾನು ಮೋದಿಯವರ ಅಧಿಕಾರದಲ್ಲಿ ಬದುಕಲು ಸಿದ್ಧ, ಮೋದಿ ಒಬ್ಬ ಮಹಾನ್ ವ್ಯಕ್ತಿ, ಅವರು ಕೆಟ್ಟ ಮನುಷ್ಯ ಅಲ್ಲ, ಭಾರತೀಯರಿಗೆ ಟೊಮ್ಯಾಟೊ ಮತ್ತು ಚಿಕನ್ ಕೈಗೆಟುಕುವ ದರದಲ್ಲಿ ಸಿಗುತ್ತಿದೆ, ರಾತ್ರಿಯಲ್ಲಿ ನಿಮ್ಮ ಮಕ್ಕಳಿಗೆ ತಿನ್ನಲು ಸಾಧ್ಯವಾಗದಿದ್ದಾಗ, ನೀವು ಬದುಕಿದ್ದ ದೇಶವನ್ನು ಹಾಳುಮಾಡಲು ಶುರು ಮಾಡುತ್ತೀರಿ ಎಂದು ಅವರು ಹೇಳಿದ್ದಾರೆ.

“ಮೋದಿಯನ್ನು ನಮಗೆ ನೀಡಿ. ಅವರು ನಮ್ಮ ದೇಶವನ್ನು ಆಳಲಿ ಎಂದು ನಾನು ಸರ್ವಶಕ್ತನನ್ನು ಪ್ರಾರ್ಥಿಸುತ್ತೇನೆ” ಎಂದು ಕಣ್ಣಲ್ಲಿ ನೀರು ತುಂಬಿ ಅವರು ಹೇಳಿದ್ದಾರೆ. ಉಭಯ ದೇಶಗಳ ನಡುವೆ ಯಾವುದೇ ಹೋಲಿಕೆ ಇಲ್ಲದ ಕಾರಣ ಪಾಕಿಸ್ತಾನಿಗಳು ತಮ್ಮನ್ನು ಭಾರತದೊಂದಿಗೆ ಹೋಲಿಸಿಕೊಳ್ಳುವುದನ್ನು ನಿಲ್ಲಿಸಬೇಕಾಗಿದೆ ಎಂದು ಅವರು ಹೇಳಿದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!