7.5 C
Munich
Tuesday, March 7, 2023

Pakistan Agrees To IMF Conditions Petrol No Stock In Punjab | Pakistan Crisis: ಪೆಟ್ರೋಲ್ ಖಾಲಿ ಖಾಲಿ; ಐಎಂಎಫ್ ಷರುತ್ತುಗಳಿಗೆ ಬಾಗಿದ ಪಾಕಿಸ್ತಾನ

ಓದಲೇಬೇಕು

No Stock In Petrol Bunks: ಪಾಕಿಸ್ತಾನದಲ್ಲಿ ತಲೆದೋರಿರುವ ತೀವ್ರ ಹಣಕಾಸು ಬಿಕಟ್ಟಿಗೆ ನಿದರ್ಶನ ಎಂಬಂತೆ ಅಲ್ಲಿನ ಪಂಜಾಬ್ ಪ್ರಾಂತ್ಯದ ಬಹುತೇಕ ಪೆಟ್ರೋಲ್ ಬಂಕ್​ಗಳು ಭಣಗುಟ್ಟುತ್ತಿವೆ. ಕೊಳ್ಳುವವರು ಇಲ್ಲವೆಂದಲ್ಲ, ಪೆಟ್ರೋಲ್ ಸಂಗ್ರಹ ಇಲ್ಲದೇ ಬಂಕ್​ಗಳು ಖಾಲಿ ಆಗಿವೆ.

ಪೆಟ್ರೋಲ್ ಹಾಗೂ ಡೀಸೆಲ್

ಲಾಹೋರ್: ಪಾಕಿಸ್ತಾನದಲ್ಲಿ ತಲೆದೋರಿರುವ ತೀವ್ರ ಹಣಕಾಸು ಬಿಕಟ್ಟಿಗೆ (Pakistan Economic Crisis) ನಿದರ್ಶನ ಎಂಬಂತೆ ಅಲ್ಲಿನ ಪಂಜಾಬ್ ಪ್ರಾಂತ್ಯದ ಬಹುತೇಕ ಪೆಟ್ರೋಲ್ ಬಂಕ್​ಗಳು ಭಣಗುಟ್ಟುತ್ತಿವೆ. ಕೊಳ್ಳುವವರು ಇಲ್ಲವೆಂದಲ್ಲ, ಪೆಟ್ರೋಲ್ ಸಂಗ್ರಹ ಇಲ್ಲದೇ ಬಂಕ್​ಗಳು ಖಾಲಿ ಆಗಿವೆ. ಶ್ರೀಲಂಕಾದಲ್ಲಿ ಕೆಲ ತಿಂಗಳ ಹಿಂದೆ ಉದ್ಭವಿಸಿದ್ದ ಪರಿಸ್ಥಿತಿ ಈಗ ಪಾಕಿಸ್ತಾನದಲ್ಲಿ ಅಕ್ಷರಶಃ ಮನೆಮಾಡಿದಂತಿದೆ. ಪಂಜಾಬ್ ಪ್ರದೇಶದ (Punjab Province of Pakistan) ಜನಜೀವನ ಪರದಾಟ ನಡೆಸುತ್ತಿದೆ. ಕೆಲ ಕಡೆಯತೂ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಪೆಟ್ರೋಲ್ ಸರಬರಾಜೇ ಆಗಿಲ್ಲ.

ಪಂಜಾಬ್ ಪ್ರಾಂತ್ಯದ ಸರ್ಕಾರ ತನ್ನ ಬಳಿ ಸಾಕಷ್ಟು ಪೆಟ್ರೋಲ್, ಡೀಸೆಲ್ ದಾಸ್ತಾನು ಇದೆ ಎಂದು ಹೇಳುತ್ತಿದ್ದರೂ ಪೆಟ್ರೋಲ್ ಬಂಕ್​ಗಳಲ್ಲಿ ಪೆಟ್ರೋಲ್ ಸಿಗುತ್ತಿಲ್ಲದಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಪಾಕಿಸ್ತಾನದ ಬಂಕ್ ಮಾಲೀಕರು ಪೆಟ್ರೋಲ್ ಕೊರತೆ ಉದ್ಭವಕ್ಕೆ ತೈಲ ಮಾರುಕಟ್ಟೆ ಕಂಪನಿಗಳನ್ನು ದೂಷಿಸುತ್ತಿದ್ದಾರೆ. ಆದರೆ, ಪೆಟ್ರೋಲ್ ದರ ಏರಿಕೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಪೆಟ್ರೋಲ್ ಬಂಕ್​ಗಳು ಅಕ್ರಮವಾಗಿ ಪೆಟ್ರೋಲ್ ಸಂಗ್ರಹ ಮಾಡುತ್ತಿದ್ದಾರೆ. ಹೀಗಾಗಿ, ಪೆಟ್ರೋಲ್ ಸಿಗುತ್ತಿಲ್ಲ ಎಂಬುದು ಅಲ್ಲಿನ ಆಯಿಲ್ ಮಾರ್ಕೆಟಿಂಗ್ ಕಂಪನಿಗಳ ಪ್ರತ್ಯಾರೋಪ.

ಪೆಟ್ರೋಲ್ ಹಾಹಾಕಾರ ಸದ್ಯ ಪಂಜಾಬ್ ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಿದ್ದಂತಿದೆ. ಬೇರೆ ರಾಜ್ಯಗಳಲ್ಲಿ ಪೆಟ್ರೋಲ್ ಸರಬರಾಜು ಇದೆ. ಪಾಕಿಸ್ತಾನದಲ್ಲಿ ಹಣದುಬ್ಬರ ತೀವ್ರವಾಗಿದ್ದರೂ ಪೆಟ್ರೋಲ್ ಬೆಲೆ ಭಾರತದಕ್ಕಿಂತ ಕಡಿಮೆಯೇ ಇದೆ. ಅಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 250 ಪಾಕಿಸ್ತಾನೀ ರೂ ಇದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 80-85 ರೂ ಆಗುತ್ತದೆ.

ಐಎಂಎಫ್​ಗೆ ಬಾಗಿದ ಪಾಕಿಸ್ತಾನ

ಅದೇನೇ ಇದ್ದರೂ ಪಾಕಿಸ್ತಾನ ತೀರಾ ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲಿ ಕುಂಟುತ್ತಾ ಸಾಗುತ್ತಿರುವುದು ಹೌದು. ಅದರ ವಿದೇಶ ವಿನಿಯಮ ಮೀಸಲು ನಿಧಿ (ಫಾರೆಕ್ಸ್ ರಿಸರ್ವ್) ತೀರಾ ಕೃಶಗೊಂಡಿದೆ. ಅದಕ್ಕೀಗ ಅಂತಾರಾಷ್ಟ್ರೀಯ ನೆರವು ತೀರಾ ಅಗತ್ಯ ಬಿದ್ದಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಗೆ ಸಾಲದ ಕಂತು ಕಟ್ಟಲೂ ಅದರ ಬಳಿ ಹಣ ಇಲ್ಲದಾಗಿದೆ. ಅದರ ದುರದೃಷ್ಟಕ್ಕೆ 2019ರಲ್ಲಿ ಪಾಕಿಸ್ತಾನಕ್ಕೆ ಐಎಂಎಫ್​ನಿಂದ 6.5 ಬಿಲಿಯನ್ ಡಾಲರ್ ಸಾಲ ಮಂಜೂರಾದರೂ, ಹಣ ಮಾತ್ರ ಈಗಲೂ ಪೂರ್ಣವಾಗಿ ಬಿಡುಗಡೆ ಆಗಿಲ್ಲ. ಕಳೆದ ಡಿಸೆಂಬರ್​ನಿಂದ ಹಣ ಬಿಡುಗಡೆ ಸ್ಥಗಿತಗೊಂಡಿದೆ.

ಇದನ್ನೂ ಓದಿ: Pakistan Economic Crisis: ಪಾಕಿಸ್ತಾನಕ್ಕೆ ಆರ್ಥಿಕ ಸಂಕಷ್ಟ, ಹಣಕಾಸು ನೆರವಿನ ಕುರಿತು ನಿರ್ಧಾರಕ್ಕೆ ಬರಲು ಸಮಯ ಬೇಕು ಎಂದ ಐಎಂಎಫ್

ಪಾಕಿಸ್ತಾನ ಬಹಳ ಸ್ಪಷ್ಟವಾದ ಹಣಕಾಸು ನೀತಿ ರೂಪಿಸಬೇಕು. ಸಬ್ಸಿಡಿ ಇತ್ಯಾದಿ ಕ್ರಮ ಕೈಗೊಳ್ಳುವುದನ್ನು ನಿಲ್ಲಿಸಬೇಕು. ಸರ್ಕಾರ ಆರ್ಥಿಕ ಶಿಸ್ತು ಪಾಲಿಸಬೇಕು, ವಿತ್ತೀಯ ಕೊರತೆ ಇತ್ಯಾದಿ ಆಗದಂತೆ ನೋಡಿಕೊಳ್ಳಬೇಕು. ಇವೆಲ್ಲವೂ ಐಎಂಎಫ್ ವಿಧಿಸಿರುವ ಹಲವು ಷರುತ್ತುಗಳ ಪಟ್ಟಿಯಲ್ಲಿವೆ. ಪೆಟ್ರೋಲ್ ಮತ್ತಿತರ ಕೆಲ ಅಗತ್ಯ ವಸ್ತುಗಳಿಗೆ ಅಲ್ಲಿನ ಸರ್ಕಾರ ಬಹಳಷ್ಟು ಸಬ್ಸಿಡಿ ನೀಡುತ್ತದೆ. ಅದನ್ನು ತೆಗೆದರೆ ಜನರು ಬಂಡೇಳಬಹುದು ಎಂಬುದು ಸರ್ಕಾರದ ಭೀತಿ. ಆದರೆ, ಈಗ ಅದು ಕೈಗೊಳ್ಳದೇ ಬೇರೆ ದಾರಿ ಇಲ್ಲ. ಹೀಗಾಗಿ, ಐಎಂಎಫ್​ನ ಷರತ್ತುಗಳಿಗೆ ಪಾಕಿಸ್ತಾನ ಸಮ್ಮತಿಸಿದ್ದು, ಸಾಲ ತನಗೆ ದಕ್ಕುವ ನಿರೀಕ್ಷೆಯಲ್ಲಿದೆ.

ಐಎಂಎಫ್ ಷರತ್ತುಗಳು ಪಾಕಿಸ್ತಾನ ಸರ್ಕಾರಕ್ಕೆ ಒಂದು ರೀತಿಯಲ್ಲಿ ಅನುಕೂಲವನ್ನೇ ಮಾಡಿಕೊಟ್ಟಿದೆ. ಸಬ್ಸಿಡಿ ಮಾಡಲು ಐಎಂಎಫ್​ನ ಕಾರಣವನ್ನು ಜನರಿಗೆ ನೀಡುವ ಧೈರ್ಯ ಸಚಿವರಿಗೆ ಬರುತ್ತದೆ. ಜೊತೆಗೆ ಸರ್ಕಾರ ಬೊಕ್ಕಸಕ್ಕೂ ಹಣ ಹರಿದುಬರುತ್ತದೆ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!