2.1 C
Munich
Monday, March 27, 2023

Pakistan-Bengaluru love story : Twice to the story of Pakistan-Bengaluru lovers, do you know that Pak girl came to Bangalore for her boy? | Pak-Bengaluru love Story: ಪಾಕಿಸ್ತಾನ- ಬೆಂಗಳೂರು ಲವ್ ಸ್ಟೋರಿಗೆ ಟ್ವಿಸ್, ತನ್ನ ಹುಡುಗನಿಗಾಗಿ ಪಾಕ್ ಬೆಡಗಿ ಬೆಂಗಳೂರಿಗೆ ಬಂದಿದ್ದೇಗೆ ಗೊತ್ತಾ?

ಓದಲೇಬೇಕು

ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ ಮದುವೆಯಾಗಲು ಪಾಕಿಸ್ತಾನದಿಂದ ಬೆಂಗಳೂರಿಗೆ ಬಂದು, ಪೊಲೀಸರ ಕೈಗೆ ಸಿಕ್ಕಿಬಿದ್ದಿ ರೋಚಕ ಕಥೆಗೆ ದೊಡ್ಡ ಸಾಕ್ಷಿ ಸಿಕ್ಕಿದೆ.

ಪಾಕಿಸ್ತಾನ- ಬೆಂಗಳೂರು ಲವ್ ಸ್ಟೋರಿ

ಪಾಕಿಸ್ತಾನ: ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ ಮದುವೆಯಾಗಲು ಪಾಕಿಸ್ತಾನದಿಂದ ಬೆಂಗಳೂರಿಗೆ ಬಂದು, ಪೊಲೀಸರ ಕೈಗೆ ಸಿಕ್ಕಿಬಿದ್ದಿ ರೋಚಕ ಕಥೆಗೆ ದೊಡ್ಡ ಸಾಕ್ಷಿ ಸಿಕ್ಕಿದೆ. ಆದರೆ ಆಕೆ ಹೇಗೆ ಪಾಕಿಸ್ತಾನದಿಂದ ಬೆಂಗಳೂರಿಗೆ ಬಂದಿದ್ದಾಳೆ ಎಂಬುದನ್ನು ಆಕೆ ಚಿಕ್ಕಪ್ಪ ವಿವರವಾಗಿ ಹೇಳಿದ್ದಾರೆ. ಪಾಕಿಸ್ತಾನಿ ಹುಡುಗಿಯೊಬ್ಬಳು ಭಾರತೀಯ ವ್ಯಕ್ತಿಯನ್ನು ಭೇಟಿಯಾಗಲು ಮತ್ತು ಮದುವೆಯಾಗಲು ಬೆಂಗಳೂರಿಗೆ ಬಂದಿದ್ದಾಳೆ. ಓಕೆ ಭಾರತಕ್ಕೆ ಬರಲು ತನ್ನ ಆಭರಣಗಳನ್ನು ಮಾರಿ ದುಬೈಗೆ ವಿಮಾನ ಟಿಕೆಟ್ ಪಡೆಯಲು ಸ್ನೇಹಿತರಿಂದ ಹಣವನ್ನು ಪಡೆದಿದ್ದಾಳೆ ಎಂದು ಹೇಳಿದರು, ಕಠ್ಮಂಡುವಿನಿಂದ ಅವಳು ಭಾರತಕ್ಕೆ ಬಂದಿದ್ದಾಳೆ. ಈ ಹುಡುಗಿಯನ್ನು ಇಕ್ರಾ ಜೀವನಿ ಎಂದು ಗುರುತಿಸಲಾಗಿದೆ. ಕಳೆದ ತಿಂಗಳು ಆಕೆಯನ್ನು ಬೆಂಗಳೂರಿನಲ್ಲಿ ವಶಪಡಿಸಿಕೊಳ್ಳಲಾಗಿದೆ. ಅಲ್ಲಿ ಆಕೆ ಹಿಂದೂ ವ್ಯಕ್ತಿ ಮುಲಾಯಂ ಸಿಂಗ್ ಯಾದವ್ ಎಂಬ ವ್ಯಕ್ತಿಯೊಂದಿಗೆ ಜೊತೆಯಾಗಿ ಇಬ್ಬರು ವಾಸಿಸುತ್ತಿದ್ದರು ಎಂದು ಹೇಳಲಾಗಿದೆ. ಈಗ ಮುಲಾಯಂ ಸಿಂಗ್ ಯಾದವ್ ಜೈಲಿನಲ್ಲಿದ್ದಾನೆ. ಭಾನುವಾರ ವಾಘಾ ಗಡಿಯಲ್ಲಿ ಆಕೆಯನ್ನು ಪಾಕಿಸ್ತಾನದ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ಬೆಂಗಳೂರಿನ ಹುಡುಗ ಮತ್ತು ಪಾಕಿಸ್ತಾನದ ಈ ಹುಡುಗಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ಪ್ರೀತಿಸಲು ಶುರು ಮಾಡಿದ್ದಾರೆ. ನಂತರ ಮದುವೆಯಾಗಲು ನಿರ್ಧರಿಸಿದ್ದಾರೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹೆಸರು ಹೇಳಲು ಇಚ್ಛಿಸದ ಕುಟುಂಬದ ಮೂಲಗಳು, ಇಕ್ರಾ ತನ್ನ ತಂದೆ, ಚಿಕ್ಕಪ್ಪ ಮತ್ತು ತಾಯಿ ಲಾಹೋರ್‌ಗೆ ತೆರಳಿದ ನಂತರ ಭಾರತೀಯ ಅಧಿಕಾರಿಗಳು ಅವಳನ್ನು ತಮ್ಮ ಪಾಕಿಸ್ತಾನಿ ಸಹವರ್ತಿಗಳಿಗೆ ಹಸ್ತಾಂತರಿಸಿದ ನಂತರ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಹೇಳಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಕಾಲೇಜಿಗೆ ಹೋದ ಇಕ್ರಾ ಅಲ್ಲಿಂದ ನಾಪತ್ತೆಯಾಗಿದ್ದಾಳೆ ಎಂದು ತಿಳಿದ ನಂತರ ಈ ಘಟನೆ ಒಂದು ರೀತಿಯ ತಿರುವುಗಳನ್ನು ಪಡೆದುಕೊಂಡಿತ್ತು. ಈ ಬಗ್ಗೆ ಚಿಂತೆಗೆ ಸಿಲುಕಿದ ಕುಟುಂಬ ಪೊಲೀಸರಿಗೆ ದೂರು ನೀಡಿದ್ದಾರೆ. ಅವಳು ಒಬ್ಬಳೇ ಹೇಗೆ ಭಾರತಕ್ಕೆ ಹೋಗಲು ಧೈರ್ಯ ಮಾಡಿದ್ದಾಳೆ ಎಂದು ನಮಗೆ ಇನ್ನೂ ತಿಳಿದಿಲ್ಲ. ಅವಳು ತುಂಬಾ ನಾಚಿಕೆ ಸ್ವಭಾವದ ಹುಡುಗಿ ಎಂದು ಆಕೆಯ ಮನೆಯವರು ಹೇಳಿದ್ದಾರೆ.

ಕಳೆದ ನಾಲ್ಕು ತಿಂಗಳಲ್ಲಿ ನಡೆದ ಘಟನೆಯ ಆಘಾತದಿಂದ ಕುಟುಂಬ ಇನ್ನೂ ಚೇತರಿಸಿಕೊಂಡಿಲ್ಲ ಎಂದು ಕುಟುಂಬದ ಮೂಲವೊಂದು ತಿಳಿಸಿದೆ. 16 ವರ್ಷದ ಇಕ್ರಾ ಕರಾಚಿಯಿಂದ ದುಬೈಗೆ ನಂತರ ಕಠ್ಮಂಡುವಿಗೆ ಮತ್ತು ಅಲ್ಲಿಂದ ಭಾರತಕ್ಕೆ ಹೇಗೆ ಪ್ರಯಾಣ ಬೆಳೆಸಿದರು ಎಂಬುದು ಇನ್ನೂ ಪ್ರಶ್ನೆಯಾಗಿ ಉಳಿದಿವೆ.  ಇಬ್ಬರ ನಡುವೆ ಗೆಮಿಂಗ್ ಆ್ಯಪ್ ಮೂಲಕ ಪ್ರೇಮ ಬೆಳೆದಿದೆ. ವಾಸ್ತವವಾಗಿ 26 ವರ್ಷದ ಮುಲಾಯಂ ಸಿಂಗ್ ಯಾದವ್, ಬೆಂಗಳೂರಿನಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದು, ಆನ್‌ಲೈನ್ ಲುಡೋ ಆಟಗಳನ್ನು ಆಡುವಾಗ ಇಕ್ರಾ ಭೇಟಿಯಾಗಿದ್ದಾನೆ. ಭಾರತಕ್ಕೆ ವೀಸಾ ಪಡೆಯಲು ಸಾಧ್ಯವಾಗದ ಕಾರಣ ಇಕ್ರಾ ದುಬೈಗೆ ಮತ್ತು ನಂತರ ಕಠ್ಮಂಡುಗೆ ಹೋಗಿದ್ದಾಳೆ ಎಂದು ಆಕೆಯ ಚಿಕ್ಕಪ್ಪ ಅಫ್ಜಲ್ ಜೀವಾನಿ ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ್ ಟು ಇಂಡಿಯಾ ಲವ್ ಸ್ಟೋರಿ: ಇಕ್ರಾ-ಮುಲಾಯಂ ಪ್ರೀತಿ ಕಥೆಯಲ್ಲಿ ಅನುಮಾನ, ಈ ಜೋಡಿ ಗಡಿ ಪ್ರವೇಶಿಸಿದ್ದು ಹೇಗೆ?

ಯಾದವ್ ಅವಳನ್ನು ಕರೆದೊಯ್ದ ಪ್ರದೇಶದಲ್ಲಿ ನೆರೆಹೊರೆಯವರು ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ನೋಡಿದ ನಂತರ ಪೊಲೀಸರಿಗೆ ದೂರು ನೀಡಿದ ನಂತರ ಆಕೆಯನ್ನು ಬಂಧಿಸಿ, ಆಕೆಯನ್ನು ನಂತರ ಕೇಂದ್ರ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ಹಿಂದೂಗಳ ಮನೆಯಲ್ಲಿ ನಮಾಜ್ ಮಾಡುವ ಹುಡುಗಿಯನ್ನು ನೋಡಿದ ನೆರೆಹೊರೆಯವರು ಅಲ್ಲಿ ರವಾ ಎಂಬ ಹಿಂದೂ ಹೆಸರಿನಲ್ಲಿ ವಾಸಿಸುತ್ತಿದ್ದರಿಂದ ಜನರು ಅನುಮಾನಗೊಂಡು ಪೊಲೀಸರಿಗೆ ತಿಳಿಸಿದ್ದಾರೆ. ದೂರಿನ ನಂತರ ಭಾರತೀಯ ಪೊಲೀಸರು ಇಕ್ರಾಳನ್ನು ಪತ್ತೆ ಮಾಡಿ, ಈ ಬಗ್ಗೆ ದೃಢಪಡಿಸಿಕೊಂಡು ಆಕೆಯನ್ನು ಬಂಧಿಸಲಾಗಿತ್ತು. ಆದರೆ ಆಕೆಯನ್ನು ಆಶ್ರಯ ಮನೆಯಲ್ಲಿ ಇರಿಸಲಾಯಿತು, ಅಲ್ಲಿ ಆಕೆ ಭಾರತಕ್ಕೆ ಹೇಗೆ ಬಂದಳು ಎಂಬುದರ ಕುರಿತು ಪೊಲೀಸರು ಮತ್ತು ಗುಪ್ತಚರ ಜನರು ಪ್ರಶ್ನಿಸಿದರು. ಯಾದವ್ ತನ್ನ ಹೆಸರನ್ನು ರವಾ ಎಂದು ಬದಲಾಯಿಸಿದ ನಂತರ ಇಕ್ರಾಗೆ ಆಧಾರ್ ಕಾರ್ಡ್ ಅನ್ನು ಸಹ ಮಾಡಿದರು ಮತ್ತು ನಂತರ ಅವಳು ಭಾರತೀಯ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದಳು.

ಆಂತಕದಲ್ಲಿ ಮನೆಯವರಿಗೆ ಆಕೆಯನ್ನು ಒಪ್ಪಿಸಿದಕ್ಕಾಗಿ ಮತ್ತು ನಮ್ಮ ಆಂತಕವನ್ನು ದೂರು ಮಾಡಿದಕ್ಕೆ ನಾವು ಪಾಕಿಸ್ತಾನ ಮತ್ತು ಭಾರತ ಸರ್ಕಾರಗಳಿಗೆ ಕೃತಜ್ಞರಾಗಿರುತ್ತೇವೆ ಎಂದು ಅಫ್ಜಲ್ ಹೇಳಿದರು. ಈ ಬಗ್ಗೆ ಅರಿತು ಆಕೆ ಹಲವು ಬಾರಿ ಕ್ಷಮೆ ಕೇಳಿದ್ದಾಳೆ. ಆನ್‌ಲೈನ್ ಲುಡೋ ಗೇಮ್‌ಗಳನ್ನು ಆಡುತ್ತಿರುವಾಗ ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರು ಭೇಟಿಯಾಗಿ, ಭಾರತೀಯ ವ್ಯಕ್ತಿ ಮುಸ್ಲಿಂ ಹುಡುಗನಂತೆ ನಟಿಸಿ ತನ್ನ ಮಗಳನ್ನು ವಂಚಿಸಿದ್ದಾನೆ ಎಂದು ಅವರು ಹೇಳಿದ್ದಾರೆ. ದಕ್ಷಿಣ ಸಿಂಧ್ ಪ್ರಾಂತ್ಯದ ಹೈದರಾಬಾದ್ ನಗರದ ಶಾಹಿ ಬಜಾರ್‌ನಲ್ಲಿ ವ್ಯಾಪಾರ ಹೊಂದಿರುವ ಜೀವನಿ ಕುಟುಂಬ, ಬೆಂಗಳೂರಿಗೆ ಬಂದು ಯಾದವ್ ಅವರನ್ನು ಭೇಟಿಯಾದ ನಂತರ ಇಕ್ರಾ ತಾನು ಮಾಡಿದ ತಪ್ಪಿನ ಬಗ್ಗೆ ಅರಿತು ಅವಳು ತನ್ನ ತಾಯಿಗೆ ಎಲ್ಲವನ್ನೂ ತಿಳಿಸಲು ವಾಟ್ಸಾಪ್‌ನಲ್ಲಿ ಕರೆ ಮಾಡಲು ಪ್ರಾರಂಭಿಸಿದ್ದಾಳೆ.

ಕುಟುಂಬದವರು ಕರೆ ಕುರಿತು ಮಾಹಿತಿ ನೀಡಿದ್ದಾರೆ. ಈ ಮೂಲಕ ಪಾಕಿಸ್ತಾನದ ವಿದೇಶಾಂಗ ಕಚೇರಿಯೊಂದಿಗೆ ಸಂಪರ್ಕಿಸಿದ ನಂತರ ಅವರು ತಮ್ಮ ಭಾರತೀಯ ವ್ಯಕ್ತಿಯನ್ನು ಸಂಪರ್ಕಿಸಿ ಹುಡುಗಿಯನ್ನು ಪತ್ತೆ ಮಾಡಲು ಸಹಾಯ ಮಾಡಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!