ಪಾಕಿಸ್ತಾನದಲ್ಲಿ ಪೊಲೀಸ್ ಚೌಕಿ ಮೇಲೆ ದಾಳಿ ನಡೆಸಿ ಇಬ್ಬರು ಪೊಲೀಸರನ್ನು ಅಪಹರಿಸಿರುವ ಘಟನೆ ನಡೆದಿದೆ.
ಸಿಂಧ್‌ನ ಕಂಡ್‌ಕೋಟ್ ತೆಹ್ಸಿಲ್ ಬಳಿಯ ದುರಾನಿ ಮೆಹರ್‌ನ ಕಛಾ ಪ್ರದೇಶದಲ್ಲಿ ಡಕಾಯಿತರು ಶನಿವಾರ ಪೊಲೀಸ್ ಚೆಕ್‌ಪೋಸ್ಟ್ ಮೇಲೆ ದಾಳಿ ಮಾಡಿ ಇಬ್ಬರು ಪೊಲೀಸರನ್ನು ಅಪಹರಿಸಿದ್ದಾರೆ.
ಸಾಂದರ್ಭಿಕ ಚಿತ್ರ-ಪಾಕಿಸ್ತಾನ ಪೊಲೀಸ್
ಪಾಕಿಸ್ತಾನದಲ್ಲಿ ಪೊಲೀಸ್ ಚೌಕಿ ಮೇಲೆ ದಾಳಿ ನಡೆಸಿ ಇಬ್ಬರು ಪೊಲೀಸರನ್ನು ಅಪಹರಿಸಿರುವ ಘಟನೆ ನಡೆದಿದೆ.
ಸಿಂಧ್‌ನ ಕಂಡ್‌ಕೋಟ್ ತೆಹ್ಸಿಲ್ ಬಳಿಯ ದುರಾನಿ ಮೆಹರ್‌ನ ಕಛಾ ಪ್ರದೇಶದಲ್ಲಿ ಡಕಾಯಿತರು ಶನಿವಾರ ಪೊಲೀಸ್ ಚೆಕ್‌ಪೋಸ್ಟ್ ಮೇಲೆ ದಾಳಿ ಮಾಡಿ ಇಬ್ಬರು ಪೊಲೀಸರನ್ನು ಅಪಹರಿಸಿದ್ದಾರೆ ಎಂದು ಪಾಕಿಸ್ತಾನ ಮೂಲದ ARY ನ್ಯೂಸ್ ವರದಿ ಮಾಡಿದೆ.
ಮಾಹಿತಿಗಳ ಪ್ರಕಾರ, ದುರಾನಿ ಮೆಹರ್‌ನ ಕಛಾ ಪ್ರದೇಶದ ಪೊಲೀಸ್ ಪೋಸ್ಟ್ ಮೇಲೆ ಡಕಾಯಿತರು ದಾಳಿ ಮಾಡಿದ ನಂತರ ಇಬ್ಬರು ಪೊಲೀಸರಾದ ಸಜ್ಜದ್ ಜಖ್ರಾನಿ ಮತ್ತು ಗಫಾರ್ ಅವರನ್ನು ಶನಿವಾರ ಅಪಹರಿಸಿದ್ದರು.
ದರೋಡೆಕೋರರು ತಮ್ಮ ವಶದಲ್ಲಿರುವ ಇಬ್ಬರು ವ್ಯಕ್ತಿಗಳ ವಿಡಿಯೋವನ್ನು ಬಿಡುಗಡೆ ಮಾಡಿ, ಈ ಹಿಂದೆ ಪೊಲೀಸರು ಬಂಧಿಸಿದ್ದ 13 ವರ್ಷದ ಶಂಕಿತ ವಾಜಿದ್ನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಬಲೂಚಿಸ್ತಾನದ ಖುಜ್ದಾರ್ ಜಿಲ್ಲೆಯಲ್ಲಿ ನಡೆದ ರಿಮೋಟ್ ನಿಯಂತ್ರಿತ ಸ್ಫೋಟದಲ್ಲಿ ಇಬ್ಬರು ಪೊಲೀಸರು ಮೃತಪಟ್ಟಿದ್ದರು. ಇಬ್ಬರು ಗಾಯಗೊಂಡಿದ್ದರು. ಸ್ಫೋಟ ಸಂಭವಿಸುವಾಗ ಎಸ್ಪಿ ಖುಜ್ದಾರ್ ದಳವು ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ