-0.6 C
Munich
Thursday, March 2, 2023

Pakistani Actress Hania Aamir Danced To RRR Movie Natu Natu Song, Video Viral | RRR: ನಾಟು-ನಾಟು ಹಾಡಿಗೆ ಮೈಮರೆತು ಕುಣಿದ ಪಾಕ್ ನಟಿ, ವಿಡಿಯೋ ವೈರಲ್

ಓದಲೇಬೇಕು

ಪಾಕಿಸ್ತಾನದ ನಟಿ ಹನಿಯಾ ಆಮಿರ್, ರಾಜಮೌಳಿ ನಿರ್ದೇಶನದ ಆರ್​ಆರ್​ಆರ್ ಸಿನಿಮಾದ ನಾಟು ನಾಟು ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿದ್ದು ವಿಡಿಯೋ ವೈರಲ್ ಆಗುತ್ತಿದೆ. ಹನಿಯಾ, ಮದುವೆ ಕಾರ್ಯಕ್ರಮವೊಂದರಲ್ಲಿ ಯುವಕನೊಬ್ಬನ ಜೊತೆ ಸೇರಿ ನಾಟು ನಾಟು ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ತಮ್ಮದೇ ರೀತಿಯಲ್ಲಿ ಎಂಜಾಯ್ ಮಾಡುತ್ತಾ ಹನಿಯಾ ಮಾಡಿರುವ ನೃತ್ಯ ನೆಟ್ಟಿಗರ ಮನ ಗೆದ್ದಿದೆ.

ನಟಿ ಹನಿಯಾ ಆಮಿರ್

ಕಲೆಗೆ ದೇಶ, ಭಾಷೆಯ ಗಡಿಯಿಲ್ಲ. ಈ ಸೋಷಿಯಲ್ ಮೀಡಿಯಾ (Social Media), ಪ್ಯಾನ್ ವರ್ಲ್ಡ್ ಕಾಲದಲ್ಲಂತೂ ಈ ಮಾತು ನಿತ್ಯ ಸತ್ಯ. ಇದಕ್ಕೆ ತಾಜಾ ಉದಾಹರಣೆಯೆಂದರೆ, ನೆರೆಯ ಪಾಕಿಸ್ತಾನದ  (Pakistan) ನಟಿಯೊಬ್ಬರು ಅಲ್ಲಿನ ಮದುವೆ ಕಾರ್ಯಕ್ರಮವೊಂದರಲ್ಲಿ ಭಾರತದ ಅದರಲ್ಲಿಯೂ ದಕ್ಷಿಣ ಭಾರತದ ಸಿನಿಮಾ ಹಾಡೊಂದಕ್ಕೆ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ನಟಿಯ ನೃತ್ಯಕ್ಕೆ ಭೇಷ್ ಎನ್ನುತ್ತಿದ್ದಾರೆ.

ಪಾಕಿಸ್ತಾನದ ನಟಿ ಹನಿಯಾ ಆಮಿರ್, ರಾಜಮೌಳಿ ನಿರ್ದೇಶನದ ಆರ್​ಆರ್​ಆರ್ ಸಿನಿಮಾದ ನಾಟು ನಾಟು ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿದ್ದು ವಿಡಿಯೋ ವೈರಲ್ ಆಗುತ್ತಿದೆ. ಹನಿಯಾ, ಮದುವೆ ಕಾರ್ಯಕ್ರಮವೊಂದರಲ್ಲಿ ಯುವಕನೊಬ್ಬನ ಜೊತೆ ಸೇರಿ ನಾಟು ನಾಟು ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ತಮ್ಮದೇ ರೀತಿಯಲ್ಲಿ ಎಂಜಾಯ್ ಮಾಡುತ್ತಾ ಹನಿಯಾ ಮಾಡಿರುವ ನೃತ್ಯ ನೆಟ್ಟಿಗರ ಮನ ಗೆದ್ದಿದೆ.

ರಾಜಮೌಳಿಯ ಆರ್​ಆರ್​ಆರ್ ಸಿನಿಮಾ ಅಮೆರಿಕ ಸೇರಿದಂತೆ ಹಲವು ದೇಶಗಳ ಸಿನಿ ಪ್ರಿಯರ ಮನಸ್ಸು ಗೆದ್ದಿದೆ. ಪಾಕಿಸ್ತಾನದಲ್ಲಿ ಸಿನಿಮಾ ಅಧಿಕೃತವಾಗಿ ಬಿಡುಗಡೆ ಆಗದಿದ್ದರೂ ಸಹ ಸಿನಿಮಾದ ಹಾಡುಗಳು ಯೂಟ್ಯೂಬ್ ಮೂಲಕ ಪಾಕ್ ಸಿನಿಮಾ ಹಾಗೂ ಸಂಗೀತ ಪ್ರಿಯರನ್ನು ತಲುಪಿವೆ. ಹಾಗಾಗಿಯೂ ಅಲ್ಲಿಯೂ ಸಹ ನಾಟು-ನಾಟು ಫೀವರ್ ಜೋರಾಗಿಯೇ ಇದೆ.

ನಾಟು-ನಾಟು ಹಾಡಿಗೆ ಸ್ಟೆಪ್ಸ್ ಹಾಕಿರುವ ನಟಿ ಹನಿಯಾ ಆಮಿರ್ ಪಾಕಿಸ್ತಾನದ ಜನಪ್ರಿಯ ನಟಿಯರಲ್ಲೊಬ್ಬರು. 2016 ರಿಂದಲೂ ಪಾಕಿಸ್ತಾನದ ಸಿನಿಮಾ ಹಾಗೂ ಟಿವಿ ರಂಗಗಳಲ್ಲಿ ಸಕ್ರಿಯರಾಗಿದ್ದಾರೆ. ಈವರೆಗೆ ಆರು ಸಿನಿಮಾಗಳಲ್ಲಿ ನಟಿಸಿರುವ ಹನಿಯಾ ಆಮಿರ್, ಹತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕೆಲವು ಕಿರುಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಪಾಕ್ ನಟಿಯನ್ನು ಮಾತ್ರವೇ ಅಲ್ಲದೆ ವಿಶ್ವದಾದ್ಯಂತ ಕೋಟ್ಯಂತರ ಜನರನ್ನು ತನ್ನ ತಾಳಕ್ಕೆ ಕುಣಿಸಿದೆ ನಾಟು ನಾಟು ಹಾಡು ಈಗಾಗಲೇ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್, ಕ್ರಿಟಿಕ್ ಚಾಯ್ಸ್ ಅವಾರ್ಡ್, ಹಾಲಿವುಡ್ ಕ್ರಿಟಿಕ್ ಅಸೋಸಿಯೇಷನ್ ಅವಾರ್ಡ್ ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗೆ ಭಾಜವಾಗಿರುವ ಈ ಹಾಡು ಆಸ್ಕರ್​ಗೂ ನಾಮಿನೇಟ್ ಆಗಿದ್ದು ಆಸ್ಕರ್ ಗೆಲ್ಲುವ ಭರವಸೆ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!