1.8 C
Munich
Thursday, March 2, 2023

PIRI-100 List: Bengaluru Sees Increase In Prices of Luxury Residences, See World’s Costliest Cities | PIRI-100: ದುಬಾರಿ ವಸತಿ; ದಿಲ್ಲಿಯನ್ನೂ ಮೀರಿಸಿದ ಬೆಂಗಳೂರು; ಎಷ್ಟಿದೆ ರೇಟು?

ಓದಲೇಬೇಕು

Luxury Home Rates Worldwide: ಪ್ರೈಮ್ ಇಂಟರ್ನ್ಯಾಷನಲ್ ರೆಸಿಡೆನ್ಷಿಯಲ್ ಇಂಡೆಕ್ಸ್ 2022 ಪಟ್ಟಿಯಲ್ಲಿ ಭಾರತದ ಮುಂಬೈ, ದೆಹಲಿ ಮತ್ತು ಬೆಂಗಳೂರು ನಗರಗಳು ಮೇಲೇರಿವೆ. ಬೆಂಗಳೂರಿನಲ್ಲಿ ಐಷಾರಾಮಿ ವಸತಿ ಬೇಕೆಂದರೆ, 10 ಲಕ್ಷ ಡಾಲರ್ ಹಣಕ್ಕೆ ಸರಾಸರಿ ಸುಮಾರು 4 ಸಾವಿರ ಚದರಡಿಗಿಂತ ತುಸು ಹೆಚ್ಚು ಜಾಗ ಸಿಗುತ್ತದೆ.

ಐಷಾರಾಮಿ ವಸತಿ

ಬೆಂಗಳೂರು: ಭಾರತದ ಆರ್ಥಿಕತೆ ಬೆಳೆದಂತೆಲ್ಲಾ ಇಲ್ಲಿನ ಮಣ್ಣಿಗೆ ಚಿನ್ನದ ಬೆಲೆ ಬಂದಿದೆ. ಪ್ರಮುಖ ನಗರಗಳಲ್ಲಿ ಈಗ ಭೂಮಿ ಕೊಳ್ಳುವುದು, ಫ್ಲಾಟ್ ಕೊಳ್ಳುವುದು ಬಹಳ ದುಬಾರಿ. ಅದರಲ್ಲೂ ಈ ನಗರಗಳಲ್ಲಿ ಐಷಾರಾಮಿ ಮನೆಗಳಿಗೆ ಬೇಡಿಕೆ ವಿಪರೀತ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಲಕ್ಷುರಿ ಫ್ಲ್ಯಾಟ್ ಬೇಕೆಂದರೆ ಕೋಟಿಗಟ್ಟಲೆ ಹಣ ತೆರಬೇಕು. ವಿಶ್ವಾದ್ಯಂತ ಲಕ್ಷುರಿ ಮನೆಗಳ ಬೆಲೆ ಅವಲೋಕಿಸುವ ಪ್ರೈಮ್ ಇಂಟರ್ನ್ಯಾಷನಲ್ ರೆಸಿಡೆನ್ಷಿಯಲ್ ಇಂಡೆಕ್ಸ್ (PIRI 100) ಪಟ್ಟಿಯಲ್ಲಿ ಭಾರತದ ಮುಂಬೈ, ಬೆಂಗಳೂರು ಮತ್ತು ದೆಹಲಿ ನಗರಗಳು ಮೇಲೇರಿವೆ.

ನೈಟ್ ಫ್ರ್ಯಾಂಕ್​ನ ದಿ ವೆಲ್ತ್ ರಿಪೋರ್ಟ್ 2023(Knight Frank’s The Wealth Report 2023) ಭಾಗವಾಗಿ PIRI 100 ಪಟ್ಟಿ ಬಿಡುಗಡೆ ಮಾಡಲಾಗಿದೆ. ಯೂರೋಪ್​ನ ಮೊನಾಕೋ ದೇಶದ ರಾಜಧಾನಿ ಮೊನಾಕೋ ಸಿಟಿ ಈ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಪಡೆದಿದೆ. ಮೊನಾಕೋದಲ್ಲಿ ನೀವು 1 ಮಿಲಿಯನ್ ಡಾಲರ್ (8.26 ಕೋಟಿ ರೂಪಾಯಿ) ಹಣದಲ್ಲಿ ಕೇವಲ 17 ಸ್ಕ್ವಯರ್ ಮೀಟರ್​ನಷ್ಟು (183 ಚದರಡಿ) ಮಾತ್ರ ಐಷಾರಾಮಿ ಜಾಗ ಪಡೆಯಬಹುದು.

ಈ ಪಿರಿ-100 ಪಟ್ಟಿಯಲ್ಲಿ ಬೆಂಗಳೂರು 63ನೇ ಸ್ಥಾನದಲ್ಲಿದೆ. 2021ರಲ್ಲಿ ಬೆಂಗಳೂರು 91ನೇ ಸ್ಥಾನದಲ್ಲಿತ್ತು. 2022ರಲ್ಲಿ ಒಮ್ಮೆಗೇ 28 ಸ್ಥಾನ ಜಂಪ್ ಮಾಡಿದೆ. ಒಂದು ವರ್ಷದಲ್ಲಿ ಬೆಂಗಳೂರಿನಲ್ಲಿ ಐಷಾರಾಮಿ ವಸತಿಗಳ ಬೆಲೆ ಶೇ. 3ರಷ್ಟು ಹೆಚ್ಚಾಗಿದೆ. ಈಗ ಬೆಂಗಳೂರಿನಲ್ಲಿ ಪ್ರಮುಖ ವಸತಿ ಪ್ರದೇಶಗಳ ಬೆಲೆ ಬಹಳ ಹೆಚ್ಚಾಗಿದೆ. ನೈಟ್ ಫ್ರಾಂಕ್ ವರದಿ ಪ್ರಕಾರ, ಬೆಂಗಳೂರಿನಲ್ಲಿ 1 ಮಿಲಿಯನ್ ಡಾಲರ್ ಹಣದಲ್ಲಿ 385 ಚದರ ಮೀಟರ್ (4,144 ಚದರಡಿ) ಜಾಗ ಮಾತ್ರ ದೊರೆಯುತ್ತದೆ. ಮುಂಬೈನಲ್ಲಿ ಈ ಹಣಕ್ಕೆ 113 ಚದರ ಮೀಟರ್ ಜಾಗವನ್ನು ಮಾತ್ರ ಖರೀದಿಸಲು ಸಾಧ್ಯ. ಪಿರಿ ಪಟ್ಟಿಯಲ್ಲಿ ಮುಂಬೈ 18ನೇ ಸ್ಥಾನದಲ್ಲಿದೆ. ಭಾರತೀಯ ನಗರಗಳ ಪೈಕಿ ಮುಂಬೈ ಅತಿ ದುಬಾರಿ ಎನಿಸಿದೆ.

ಅತಿ ದುಬಾರಿ ಐಷಾರಾಮಿ ವಸತಿ ಪ್ರದೇಶಗಳು ಮತ್ತು 1 ಮಿಲಿಯನ್ ಡಾಲರ್​ಗೆ ದೊರೆಯುವ ಜಾಗ:

ಮೊನಾಕೋ ನಗರ: 17 ಚದರ ಮೀಟರ್

ಹಾಂಕಾಂಗ್: 21 ಚದರ ಮೀಟರ್

ನ್ಯೂಯಾರ್ಕ್: 33 ಚದರ ಮೀಟರ್

ಇದನ್ನೂ ಓದಿNishad Singh: ಕ್ರಿಪ್ಟೋ ಪ್ರಪಂಚ ಅಲುಗಾಡಿಸಿದ ಎಫ್​ಟಿಎಕ್ಸ್ ಹಗರಣ; ತಪ್ಪೊಪ್ಪಿಕೊಂಡ ನಿಶಾದ್ ಸಿಂಗ್; ಯಾರು ಈ ಭಾರತೀಯ?

ಭಾರತೀಯ ನಗರಗಳು

ಮುಂಬೈ: 113 ಚದರ ಮೀಟರ್

ದೆಹಲಿ: 226 ಚದರ ಮೀಟರ್

ಬೆಂಗಳೂರು: 385 ಚದರ ಮೀಟರ್

2021ರ ವರ್ಷಕ್ಕೆ ಹೋಲಿಸಿದರೆ ಐಷಾರಾಮಿ ವಸತಿಗಳ ಬೆಲೆ 2022ರಲ್ಲಿ ಅತಿ ಹೆಚ್ಚಳಗೊಂಡ ನಗರಗಳಲ್ಲಿ ದುಬೈ ಅಗ್ರಸ್ಥಾನ ಪಡೆದಿದೆ. ಇಲ್ಲಿನ ಲಕ್ಸುರಿ ಹೋಮ್​ಗಳ ಬೆಲೆ ಶೇ. 44.2ರಷ್ಟು ಹೆಚ್ಚಾಗಿದೆ. ಆಸ್ಪೆನ್, ರಿಯಾದ್, ಟೋಕಿಯೋ, ಮಿಯಾಮಿ, ಪ್ರೇಗ್, ಆಲ್ಗಾರ್ವೆ, ಬಹಾಮಸ್, ಅಥೆನ್ಸ್ ಮತ್ತು ಪೋರ್ಟೋ ನಗರಗಳು ನಂತರದ ಸ್ಥಾನ ಪಡೆದಿವೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!