1.8 C
Munich
Tuesday, March 7, 2023

Plane Emergency Exit: US Man Arrested After Allegedly Trying To Open Plane’s Emergency Door, Stab Crew | Plane Emergency Exit: ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆಯಲು ಪ್ರಯತ್ನಿಸಿದ ಪ್ರಯಾಣಿಕ, ತಡೆಯಲು ಹೋದ ಸಿಬ್ಬಂದಿಗೆ ಚಾಕು ಇರಿತ

ಓದಲೇಬೇಕು

ವಿಮಾನದಲ್ಲಿ ಪ್ರಯಾಣಿಕನೊಬ್ಬ ತುರ್ತು ನಿರ್ಗಮನ ಬಾಗಿಲು ತೆರೆಯಲು ಪ್ರಯತ್ನಿಸಿದ ಘಟನೆ ನಡೆದಿದೆ.

ವಿಮಾನದ ತುರ್ತು ನಿರ್ಗಮನ ಬಾಗಿಲು(ಸಾಂದರ್ಭಿಕ ಚಿತ್ರ)

Image Credit source: Business Insider

ವಿಮಾನದಲ್ಲಿ ಪ್ರಯಾಣಿಕನೊಬ್ಬ ತುರ್ತು ನಿರ್ಗಮನ ಬಾಗಿಲು ತೆರೆಯಲು ಪ್ರಯತ್ನಿಸಿದ ಘಟನೆ ನಡೆದಿದೆ. ಯುನೈಟೆಡ್​ ಏರ್​ಲೈನ್ಸ್​ ವಿಮಾನವು ಲಾಸ್​ ಏಂಜಲೀಸ್​ನಿಂದ ಬೋಸ್ಟನ್​ಗೆ ತೆರಳುತ್ತಿತ್ತು. ಪ್ರಯಾಣಿಕರೊಬ್ಬರು ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ತೆರೆಯಲು ಪ್ರಯತ್ನಿಸಿದರು, ಆಗ ವಿಮಾನ ಸಿಬ್ಬಂದಿ ತಡೆಯಲು ಪ್ರಯತ್ನಿಸಿದಾಗ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ.

ಟೊರೆಸ್ ಎಂಬ 33 ವರ್ಷದ ವ್ಯಕ್ತಿಯನ್ನು ಬೋಸ್ಟನ್ ಲೋಗನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು, ಮಾರ್ಚ್​ 9 ರವರೆಗೆ ಕಸ್ಟಡಿಯಲ್ಲಿಡಲು ನ್ಯಾಯಾಲಯ ಆದೇಶಿಸಿದೆ. ಟೊರೆಸ್ ಲಾಸ್ ಏಂಜಲೀಸ್‌ನಿಂದ ಬೋಸ್ಟನ್‌ಗೆ ಯುನೈಟೆಡ್ ಏರ್‌ಲೈನ್ಸ್ ವಿಮಾನವನ್ನು ಹತ್ತಿದ್ದರು. ಲ್ಯಾಂಡಿಂಗ್‌ಗೆ ಸುಮಾರು 45 ನಿಮಿಷಗಳ ಮೊದಲು, ವಿಮಾನ ಸಿಬ್ಬಂದಿಗೆ ಕಾಕ್‌ಪಿಟ್‌ನಲ್ಲಿ ಎಚ್ಚರಿಕೆಯ ಶಬ್ದ ಕೇಳಿಸಿತು, ವಿಮಾನದ ತುರ್ತು ಬಾಗಿಲು ತೆರೆಯಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಯಿತು, ಇದಾದ ನಂತರ ಬಾಗಿಲಿನ ಲಾಕ್ ಹ್ಯಾಂಡಲ್ ತೆರೆಯಲು ಪ್ರಯತ್ನಿಸಿರುವುದನ್ನು ಗಗನಸಖಿ ಗಮನಿಸಿದರು.

ಮತ್ತಷ್ಟು ಓದಿ: Nepal Air Crash: ಯೇತಿ ಏರ್‌ಲೈನ್ಸ್ ವಿಮಾನ ಪತನಕ್ಕೆ ಎಂಜಿನ್ ಸಮಸ್ಯೆ ಕಾರಣ: ವರದಿ

ಈ ಹ್ಯಾಂಡಲ್ ಸುಮಾರು ಕಾಲುಭಾಗದವರೆಗೆ ತೆರೆಯಲ್ಪಟ್ಟಿತ್ತು, ಫ್ಲೈಟ್ ಅಟೆಂಡೆಂಟ್ ತಕ್ಷಣ ಬಾಗಿಲು ಮತ್ತು ತುರ್ತು ಸ್ಲೈಡ್‌ಗಳನ್ನು ಮುಚ್ಚಿ ಕ್ಯಾಪ್ಟನ್ ಮತ್ತು ಫ್ಲೈಟ್ ಸಿಬ್ಬಂದಿಗೆ ವಿಷಯದ ಬಗ್ಗೆ ತಿಳಿಸಿದರು. ಘಟನೆಯ ಬಗ್ಗೆ, ಸಹ ಫ್ಲೈಟ್ ಅಟೆಂಡೆಂಟ್ ಅವರು ಬಾಗಿಲಿನ ಬಳಿ ಟೊರೆಸ್ ಅನ್ನು ನೋಟಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.

ಟೊರೆಸ್ ವಿಮಾನಕ್ಕೆ ಅಪಾಯವನ್ನುಂಟುಮಾಡಿದ್ದಾರೆ ಮತ್ತು ಕ್ಯಾಪ್ಟನ್ ವಿಮಾನವನ್ನು ಆದಷ್ಟು ಬೇಗ ಇಳಿಸಬೇಕು ಎಂದು ಗಗನಸಖಿ ಕ್ಯಾಪ್ಟನ್‌ಗೆ ತಿಳಿಸಿದ್ದರು. ಸ್ವಲ್ಪ ಸಮಯದ ನಂತರ, ಟೊರೆಸ್ ವಿಮಾನದ ಸಿಬ್ಬಂದಿಯೊಬ್ಬರ ಕಡೆಗೆ ನುಗ್ಗಿ ಆಕೆಯ ಕತ್ತಿನ ಮೇಲೆ ಮೂರು ಬಾರಿ ಹಲ್ಲೆ ನಡೆಸಿದ್ದಾನೆ.

ನಂತರ ಪ್ರಯಾಣಿಕರು ಟೊರೆಸ್‌ನನ್ನು ಹಿಡಿದು ವಿಮಾನದ ಸಿಬ್ಬಂದಿಯ ಸಹಾಯದಿಂದ ದಾಳಿ ಮಾಡದಂತೆ ತಡೆದರು.
ವಿಮಾನವು ಬೋಸ್ಟನ್‌ನಲ್ಲಿ ಇಳಿದ ಸ್ವಲ್ಪ ಸಮಯದ ನಂತರ ಟೊರೆಸ್ ಅವರನ್ನು ವಶಕ್ಕೆ ಪಡೆಯಲಾಯಿತು, ಹೇಳಿಕೆಯ ಪ್ರಕಾರ, ಟೊರೆಸ್‌ಗೆ ಜೀವಾವಧಿ ಶಿಕ್ಷೆ ಮತ್ತು ಫ್ಲೈಟ್ ಸಿಬ್ಬಂದಿ ಮತ್ತು ಸಹಾಯಕರ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ US ಡಾಲರ್ 250,000 ದಂಡ ವಿಧಿಸಬಹುದು ಎಂದು ಹೇಳಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!