5.4 C
Munich
Sunday, March 26, 2023

Planetary Conjunction cosmic dance Jupiter, Venus and moon To Come Closest to earth On March 1 Read more in Kannada | Cosmic Dance ಮಿಸ್ ಮಾಡಬೇಡಿ! ಅನಂತ ಆಗಸದಲ್ಲಿ ಅಂದು ಸಂಭವಿಸಲಿದೆ ಕಾಸ್ಮಿಕ್ ನೃತ್ಯ! ಗುರು ಮತ್ತು ಶುಕ್ರ ಅತ್ಯಂತ ಹತ್ತಿರ ಬರಲಿವೆ! ಎಲ್ಲಿ, ಯಾವಾಗ, ಹೇಗೆ ವೀಕ್ಷಿಸಬೇಕು?

ಓದಲೇಬೇಕು

Jupiter, Venus and Moon Planetary Conjunction: ಇದು ಗುರು ಮತ್ತು ಶುಕ್ರ ನಡುವಿನ ಕಾಸ್ಮಿಕ್ ನೃತ್ಯವಾಗಲಿದೆ ಮತ್ತು ಚಂದ್ರ ಸಹ ಸ್ವಲ್ಪ ಸಮಯದವರೆಗೆ ಆ ನೃತ್ಯದಲ್ಲಿ ಸೇರಿಕೊಳ್ಳುತ್ತಾನೆ! ಗೊಂದಲ ಸೃಷ್ಟಿಯಾಯಿತೇ? ಇನ್ನಷ್ಟು ತಿಳಿಯಲು ಮುಂದೆ ಓದಿ.

ಗುರು ಮತ್ತು ಶುಕ್ರ ಗ್ರಹಗಳ ಸಂಯೋಗ ಎಲ್ಲಿ, ಹೇಗೆ ವೀಕ್ಷಿಸಬೇಕು?

ಅನಂತ ಆಗಸದಲ್ಲಿ ತುಂಬಾ ತುಂಬಾ ಎತ್ತರದಲ್ಲಿ ನಮ್ಮ ತಲೆಯ ಮೇಲೆ ನಕ್ಷತ್ರಗಳು, ಗ್ರಹಗಳು ಮತ್ತು ಇತರೆ ಎಲ್ಲಾ ಕಾಸ್ಮಿಕ್ ಅಂಶಗಳು ವಿಜ್ಞಾನ ಪ್ರೇಮಿಗಳನ್ನು ನಿರಂತರವಾಗಿ ಸೆಳೆಯುತ್ತಲೇ ಇರುತ್ತವೆ. ಬ್ರಹ್ಮಾಂಡವು ಅಚ್ಚರಿಯ ಸಂಗತಿಗಳು ಮತ್ತು ಫಳಫಳನೆ ಹೊಳೆಯುವ ವಸ್ತುಗಳನ್ನು ಹೊಂದಿರುವ ದೊಡ್ಡ ನಿಗೂಢ ಚೆಂಡು. ಗ್ರಹಗಳ ಚಲನೆಗಳು, ಚಕ್ರಗಳು ಖಗೋಳಶಾಸ್ತ್ರದ ಉತ್ಸಾಹಿಗಳಿಗೆ ಭವ್ಯ ದಿನಗಳನ್ನು ಸೃಷ್ಟಿಸುತ್ತಲೇ ಇರುತ್ತವೆ. ಈ ಬಾರಿ ಫೆಬ್ರವರಿ 21 ರಿಂದ ಎರಡು ಅತ್ಯಂತ ಪ್ರಕಾಶಮಾನವಾದ ಗ್ರಹಗಳಾದ ಶುಕ್ರ ( Jupiter) ಮತ್ತು ಗುರುಗಳ (Venus ) ನಡುವೆ ಕಾಸ್ಮಿಕ್ ನೃತ್ಯ (Cosmic Dance) ಪ್ರಾರಂಭವಾಗುತ್ತದೆ (Planetary Conjunction ). ಅವೆರಡೂ ಮಾರ್ಚ್ 1 ರಂದು ಪರಸ್ಪರ ಹತ್ತಿರ ಬರುತ್ತವೆ. ಅಪರೂಪದ ಹಸಿರು ಧೂಮಕೇತು (Green Comet) ಕೊನೆಯ ಬಾರಿಗೆ ವಿದಾಯ ಹೇಳಿದ 50,000 ವರ್ಷಗಳ ನಂತರ ಈ ವಿಸ್ಮಯ ಹಿಂತಿರುಗಿದೆ. ಹೌದು ಇದೇ ಫೆಬ್ರವರಿ 1, 2 ಹಾಗೂ 3 ರಂದು ಬೆಳಗ್ಗೆ 3 ಗಂಟೆಗೆ ಭೂಮಿಯ ಅತ್ಯಂತ ಸಮೀಪಕ್ಕೆ ಹಸಿರು ಧೂಮಕೇತು ಬಂದಿತ್ತು. ಅಂತಹುದೇ ಚಮತ್ಕಾರ ಇದೇ ಫೆಬ್ರವರಿ ತಿಂಗಳಲ್ಲಿ ಇನ್ನೂ ಮುಂದುವರಿದಿದ್ದು, ಮತ್ತೊಂದು ಘಟನೆ ಇದೇ ಮಾರ್ಚ್‌ನಲ್ಲಿ ಅನಂತ ಆಗಸದಲ್ಲಿ (Sky) ಸಂಭವಿಸಲಿದೆ.

ಈ ನೃತ್ಯದ ಬಗ್ಗೆ ಬೆಳಕು ಚೆಲ್ಲುವ ಕೆಲವು ಕುತೂಹಲಕಾರಿ ಕಾಸ್ಮಿಕ್ ಸಂಗತಿಗಳು ನಿಮಗಾಗಿ ಇಲ್ಲಿವೆ: ಕಾಸ್ಮಿಕ್ ಡ್ಯಾನ್ಸ್ ಹಾಗೆಂದರೇನು?
ಈ ತಿಂಗಳ ಆರಂಭದ ವೇಳೆಗೆ ಎರಡು ಪ್ರಕಾಶಮಾನವಾದ ಗ್ರಹಗಳು ಸುಮಾರು 29 ಡಿಗ್ರಿಗಳಷ್ಟು ದೂರದಲ್ಲಿದ್ದವು. ನಿಧಾನವಾಗಿ ಅವು ನೃತ್ಯ ಲಾಸ್ಯದಲ್ಲಿ ತೊಡಗಿ (ಅದೇನು ನಾವು ನೀವು ನೋಡಿರುವ ಡ್ಯಾನ್ಸಾ ಎಂದು ಅದನ್ನು ಅಕ್ಷರಶಃ ಪರಿಗಣಿಸಬೇಡಿ!) ಅವು ಹತ್ತಿರತ್ತಿರ ಬರಲು ಪ್ರಾರಂಭಿಸಿದವು. ಮತ್ತು ಮಾರ್ಚ್ 1 ರ ವೇಳೆಗೆ ಇನ್ನೂ ಮುಂದುವರಿದು ಒಟ್ಟಿಗೇ ಸೇರಿಕೊಳ್ಳುತ್ತವೆ! ಫೆಬ್ರವರಿ 20 ರಂದು ದೂರವು ಸರಿಸುಮಾರು ಒಂಬತ್ತು ಡಿಗ್ರಿಗಳಿಗೆ ಕುಗ್ಗಿದೆ. ಫೆಬ್ರವರಿ 27 ರ ಹೊತ್ತಿಗೆ, ದೂರವು 2.3 ಡಿಗ್ರಿಗಳಷ್ಟು ಕಡಿಮೆಯಾಗುತ್ತದೆ ಮತ್ತು ಅಂತಿಮವಾಗಿ ಮಾರ್ಚ್ 1 ರಂದು, ಗುರು ಮತ್ತು ಶುಕ್ರ ಎರಡೂ 0.5 ಡಿಗ್ರಿಗಳ ಅಂತರದಲ್ಲಿ ಮಾತ್ರ ಹತ್ತಿರವಾಗುತ್ತವೆ… ಈ ವಿಸ್ಮಯವನ್ನು ತಪ್ಪದೇ ನೋಡಿ ಆನಂದಿಸಿ.

ಹೀಗೆ ಅವರೆಡೂ ಹತ್ತಿರ ಬಂದಂತೆ ಶುಕ್ರ ಗ್ರಹ -4 ಪ್ರಮಾಣದಲ್ಲಿ ಮತ್ತು ಗುರು -2.1 ನಲ್ಲಿ ಹೊಳೆಯುವುದರೊಂದಿಗೆ ಪ್ರಕಾಶಮಾನವಾಗಿ ಕಂಗೊಳಿಸುತ್ತವೆ. ಅದು ಸೀರಿಯಸ್ಸಾಗಿ ಸಿರಿಯಸ್‌ಗಿಂತ (Sirius) ಎರಡು ಪಟ್ಟು ಪ್ರಕಾಶಮಾನವಾಗಿರುತ್ತದೆ. ಅದು ಅಂದು ಅತ್ಯಂತ ಪ್ರಕಾಶಮಾನವಾದ ನಕ್ಷತ್ರವಾಗಲಿದೆ.

Also Read:

Green Comet: ಬುಧವಾರ-ಗುರುವಾರ ರಾತ್ರಿ ತಪ್ಪದೆ ಹಸಿರು ಧೂಮಕೇತು ನೋಡಿ, 50 ಸಾವಿರ ವರ್ಷಗಳಿಗೊಮ್ಮೆ ಆಗಸದಲ್ಲಿ ಈ ಕೌತುಕ ಕಾಣಿಸುತ್ತದೆ!

Space.com ಪ್ರಕಾರ. ಮಂಗಳವಾರ ಸಂಜೆ (ಫೆ. 21) ಸೂರ್ಯಾಸ್ತದ ನಂತರ ಸರಿಸುಮಾರು ಒಂದು ಗಂಟೆಯ ನಂತರ ಪಶ್ಚಿಮ-ನೈಋತ್ಯ ದಿಗಂತದ ಕಡೆಗೆ ನೋಡಿದಾಗ ಅರ್ಧಚಂದ್ರ ಆಕರ್ಷಕವಾಗಿ ವೃದ್ಧಿಸುತ್ತಿರುವುದನ್ನು ನೋಡಿರುತ್ತೀರಿ- ಅಂದು ಚಂದ್ರ (Moon) ಕೇವಲ 4 % ಪ್ರಕಾಶಿಸಲ್ಪಟ್ಟಿದೆ – ಆಗ ಚಂದ್ರ ಸುಮಾರು 7 ಡಿಗ್ರಿಗಳಷ್ಟು ಶುಕ್ರನ ಕೆಳಗೆ ತೂಗಾಡುತ್ತಿತ್ತು ಎಂಬುವುದು ಗಮನಾರ್ಹ. ಅದೇ ವೇಳೆ ಗುರುವು ಶುಕ್ರನಿಂದ ಸುಮಾರು 8 ಡಿಗ್ರಿಗಳ ಮೇಲೆ ಎಡಭಾಗದಲ್ಲಿ ಕಾಣಿಸಿಕೊಂಡಿದೆ. ಆದ್ದರಿಂದ, ಅವು ದೀರ್ಘವಾಗಿ ಭೂಮಿಯತ್ತ ಬಾಗಿದ ರೇಖೆಯ ಉದ್ದಕ್ಕೂ ಕಾಣಿಸಿಕೊಂಡಿವೆ. ಪರಸ್ಪರ ಸಮಾನವಾದ ಅಂತರದಲ್ಲಿ ಇದ್ದುದನ್ನು ನೀವು ಗಮನಿಸಿರುತ್ತೀರಿ.

ಗುರು ಮತ್ತು ಶುಕ್ರ ಗ್ರಹಗಳ ಸಂಯೋಗ (Planetary Conjunction) ಎಂದರೇನು?

ಗ್ರಹಗಳು ಹೀಗೆ ಪರಸ್ಪರ ಭೇಟಿಯಾಗುವುದನ್ನು ಸಂಯೋಗ ಎಂದೂ ಕರೆಯಲ್ಪಡುತ್ತದೆ. ಎರಡು ಗ್ರಹಗಳು ಒಟ್ಟಿಗೆ ಕಾಣಿಸಿಕೊಂಡು ಇನ್ನೇನು ಭೂಮಿಯನ್ನು ಸ್ಪರ್ಶಿಸಿಬಿಡುತ್ತದೆ ಎನ್ನುವಂತೆ ಭಾಸವಾಗುತ್ತದೆ. ಆದರೆ ಗಮನಿಸಿ ಅದು ಲಕ್ಷಾಂತರ ಕಿಲೋ ಮೀಟರ್ ಅಂತರದಲ್ಲಿವೆ. ಗ್ರಹಗಳು ತಮ್ಮ ಜೋಡಣೆಯಿಂದಾಗಿ ರಾತ್ರಿ ಆಕಾಶದಲ್ಲಿ ಹಾಗೆ ಕಾಣಿಸಿಕೊಳ್ಳುತ್ತದೆ.

ಗುರು ಮತ್ತು ಶುಕ್ರ ಗ್ರಹಗಳ ಸಂಯೋಗ ಎಲ್ಲಿ ಮತ್ತು ಹೇಗೆ ವೀಕ್ಷಿಸಬೇಕು?

ಸರಿಯಾಗಿ ಮಾರ್ಚ್​​ 1ರ ದಿನ ಸಮೀಪಿಸುತ್ತಿದ್ದು ಎರಡು ಗ್ರಹಗಳು ತಮ್ಮ ನೃತ್ಯದಿಂದ ಆಕಾಶವನ್ನು ಎಲ್ಲಿ ಬೆರಗುಗೊಳಿಸುತ್ತವೆ ಎಂಬುದನ್ನು ವಿಜ್ಞಾನಿಗಳು ಉತ್ತಮವಾಗಿ ತಿಳಿಯಲು ಸಾಧ್ಯವಾಗಿಸಿದ್ದಾರೆ. ಅಂದರೆ, ಮಾರ್ಚ್ 1 ರಂದು ನೀವು ಒಂದು ಬೈನಾಕ್ಯುಲರ್ ಕ್ಷೇತ್ರ ವೀಕ್ಷಣೆಯಲ್ಲಿದ್ದರೆ ಸಾಕು. For better vision ಆಕಾಶವು ಸ್ವಲ್ಪ ಸ್ಪಷ್ಟವಾಗಿ ಗೋಷರಿಸುವುದನ್ನು ಕಾಣಲು ನಗರ ಪ್ರದೇಶ ಬಿಟ್ಟು, ದೂರದ ಹೊರವಲಯಕ್ಕೆ ಹೋಗಬೇಕು. ಅಲ್ಲಿ ನಿಮಗೆ ಬರಿಗಣ್ಣಿಗೇ ಕಾಣುತ್ತದೆ ಈ ಚಮತ್ಕಾರ. ಅಂತಹುದರಲ್ಲಿ ಟೆಲಿಸ್ಕೋಪ್ ಅಥವಾ ಬೈನಾಕ್ಯುಲರ್‌ ಇದ್ದರಂತೂ ಆಕಾಶದಲ್ಲಿ ನಮ್ಮ ಕಣ್ಣೆದುರೇ ಹೊಳೆಯುವ ಈ ಚಮತ್ಕಾರಿ ಘಟನೆಯನ್ನು ನೋಡಿ ಆನಂದಿಸಬಹುದು. ಮಿಸ್ ಮಾಡಬೇಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!