11.4 C
Munich
Thursday, March 30, 2023

PM Narendra Modi praised his party leader Temjen Imna Along in Nagaland | ತೆಮ್ಜೆನ್ ಇಮ್ನಾ ಅಲಾಂಗ್ ಅವರ ಅಭಿಪ್ರಾಯಗಳು ನಿಜವಾದ ಈಶಾನ್ಯವನ್ನು ಪ್ರತಿನಿಧಿಸುತ್ತವೆ: ನಾಗಾಲ್ಯಾಂಡ್ ಸಚಿವರ ಬಗ್ಗೆ ಮೋದಿ ಮೆಚ್ಚುಗೆ

ಓದಲೇಬೇಕು

Temjen Imna Along ದಿಮಾಪುರ್‌ನಲ್ಲಿ ಅಲಾಂಗ್ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,  ”ನಮ್ಮ ರಾಜ್ಯ ಬಿಜೆಪಿ ಅಧ್ಯಕ್ಷ ತೆಮ್ನಾ ಇಮ್ನಾ ಹೇಳುವ ವಿಷಯಗಳು ದೇಶಾದ್ಯಂತ ಪ್ರತಿಧ್ವನಿಸುತ್ತವೆ. ಅದು ಆನಂದವುಳ್ಳದ್ದಾಗಿದೆ ಎಂದಿದ್ದಾರೆ

ನಾಗಾಲ್ಯಾಂಡ್ ನಲ್ಲಿ ಮೋದಿ

ಅವರ ಅಭಿಪ್ರಾಯಗಳು ಜಗತ್ತಿಗೆ ನಿಜವಾದ ಈಶಾನ್ಯವನ್ನು ಪ್ರತಿನಿಧಿಸುತ್ತವೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ 
(Narendra Modi)ಅವರು ಶುಕ್ರವಾರ ತಮ್ಮ ಪಕ್ಷದ ನಾಯಕ ತೆಮ್ಜೆನ್ ಇಮ್ನಾ ಅಲಾಂಗ್ (Temjen Imna Along) ಅವರನ್ನು ಶ್ಲಾಘಿಸಿದ್ದಾರೆ. ಅಲಾಂಗ್ ಅವರ ತವರು ರಾಜ್ಯವಾದ ನಾಗಾಲ್ಯಾಂಡ್‌ನಲ್ಲಿ(Nagaland) ರ್ಯಾಲಿಯನ್ನು ಉದ್ದೇಶಿಸಿ ಮೋದಿ ಮಾತನಾಡುತ್ತಿದ್ದರು. ನಾಗಾಲ್ಯಾಂಡ್ ಬಿಜೆಪಿ ಮುಖ್ಯಸ್ಥರು ತಮ್ಮ ಅದ್ಭುತ ಹಾಸ್ಯಪ್ರಜ್ಞೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ತಮಾಷೆಯ ಪೋಸ್ಟ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಪ್ರಮುಖ ಜೀವನ ಸಲಹೆ, ಅವರ ವೈಯಕ್ತಿಕ ಜೀವನ ಮತ್ತು ಅವರ ರಾಜ್ಯದ ಸೌಂದರ್ಯದ ಬಗ್ಗೆ ಸದಾ ಅಪ್ಡೇಟ್ ನೀಡುತ್ತಿರುತ್ತಾರೆ.

ದಿಮಾಪುರ್‌ನಲ್ಲಿ ಅಲಾಂಗ್ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,  ”ನಮ್ಮ ರಾಜ್ಯ ಬಿಜೆಪಿ ಅಧ್ಯಕ್ಷ ತೆಮ್ನಾ ಇಮ್ನಾ ಹೇಳುವ ವಿಷಯಗಳು ದೇಶಾದ್ಯಂತ ಪ್ರತಿಧ್ವನಿಸುತ್ತವೆ. ಅದು ಆನಂದವುಳ್ಳದ್ದಾಗಿದೆ ಎಂದಿದ್ದಾರೆ. ಅವರು ಡಿಜಿಟಲ್ ವೇದಿಕೆಯಲ್ಲಿ ನಾಗಾಲ್ಯಾಂಡ್ ಮತ್ತು ಇಡೀ ಈಶಾನ್ಯವನ್ನು ಸುಂದರವಾಗಿ ಪ್ರತಿನಿಧಿಸುತ್ತಾರೆ. ನಾನು ಕೂಡ ಅವರ ಎಲ್ಲಾ ಪೋಸ್ಟ್‌ಗಳನ್ನು ನೋಡಲು ಯಾವಾಗಲೂ ಪ್ರಯತ್ನಿಸುತ್ತೇನೆ ಎಂದು ಪ್ರಧಾನಿ ಹೇಳಿದರು.

ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದ ಅಲಾಂಗ್ ಅವರು ಪ್ರಧಾನಿ ಮೋದಿಯವರ ಭಾಷಣವನ್ನು ರೀಟ್ವೀಟ್ ಮಾಡಿದ್ದರು. ಇದು ಪ್ರಾರಂಭವಾಗುವ ಕೆಲವೇ ಗಂಟೆಗಳ ಮೊದಲು, ನಾಗಾಲ್ಯಾಂಡ್ ಸಚಿವರು ಟ್ವಿಟರ್‌ನಲ್ಲಿ ”ಗುರೂಜಿ” ರಾಜ್ಯದಲ್ಲಿರುವುದರಿಂದ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಟ್ವೀಟ್‌ನಲ್ಲಿ ಅವರು ಬಿಜೆಪಿ ಸ್ಕಾರ್ಫ್ ಧರಿಸಿ ನಗುತ್ತಿರುವ ಚಿತ್ರ ಪೋಸ್ಟ್ ಮಾಡಿದ್ದಾರೆ.

ತಮ್ಮ ಭಾಷಣದಲ್ಲಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಕಾಂಗ್ರೆಸ್ ಪಕ್ಷ ಈಶಾನ್ಯವನ್ನು ಎಟಿಎಂ ಆಗಿ ಬಳಸಿದೆ. ಆದರೆ ಬಿಜೆಪಿಯು ಈ ಪ್ರದೇಶದ ಎಂಟು ರಾಜ್ಯಗಳನ್ನು ‘ಅಷ್ಟಲಕ್ಷ್ಮಿ’ (ಲಕ್ಷ್ಮಿ ದೇವಿಯ ಎಂಟು ರೂಪಗಳು) ಎಂದು ಪರಿಗಣಿಸುತ್ತದೆ ಮತ್ತು ಅದರ ಶಾಂತಿ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ.

ನಿಮ್ಮ ಸ್ವಂತ ಜನರ ಮೇಲೆ ಅಪನಂಬಿಕೆಯಿಂದ ದೇಶವನ್ನು ನಡೆಸಲಾಗುವುದಿಲ್ಲ ಆದರೆ ಅವರ ಸಮಸ್ಯೆಗಳನ್ನು ಗೌರವಿಸಿ ಮತ್ತು ಪರಿಹರಿಸುವ ಮೂಲಕ ಮಾತ್ರ ಅದನ್ನು ಮಾಡಲಾಗುತ್ತದೆ. ಈ ಹಿಂದೆ, ಈಶಾನ್ಯವು ವಿಭಜನೆಯ ರಾಜಕೀಯವನ್ನು ಹೊಂದಿತ್ತು, ನಾವು ಈಗ ಅದನ್ನು ದೈವಿಕ ಆಡಳಿತವಾಗಿ ಪರಿವರ್ತಿಸಿದ್ದೇವೆ. ಬಿಜೆಪಿಯು ಜನರನ್ನು ಧರ್ಮ ಅಥವಾ ಪ್ರದೇಶ ಮತ್ತು ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ.

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ನಾಗಾಲ್ಯಾಂಡ್ ನಲ್ಲಿ ಅಧಿಕಾರ ನಡೆಸಲು ಶಾಂತಿ, ಪ್ರಗತಿ ಮತ್ತು ಸಮೃದ್ಧಿ ಎಂಬ ಮೂರು ಮಂತ್ರಗಳನ್ನು ಅಳವಡಿಸಿಕೊಂಡಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!