1.7 C
Munich
Wednesday, March 8, 2023

Prakash Raj Oppose Hindi Imposition and Gave Warn to Shashank Shekhar Jha | ‘ನನ್ನ ಕನ್ನಡವನ್ನು ಅವಮಾನಿಸಿ ನಿಮ್ಮ ಭಾಷೆಯನ್ನು ಹೇರಿದರೆ ನಿಂತು ಹೋರಾಡುತ್ತೇನೆ’; ಎಚ್ಚರಿಕೆ ನೀಡಿದ ಪ್ರಕಾಶ್ ರಾಜ್

ಓದಲೇಬೇಕು

ನನ್ನ ಭಾಷೆಯನ್ನು ಹೇರುವುದಿಲ್ಲ. ಆದರೆ ನನ್ನ ಕನ್ನಡವನ್ನು ಅವಮಾನಿಸಿ ನಿಮ್ಮ ಭಾಷೆಯನ್ನು ಹೇರಿದರೆ ನಿಂತು ಹೋರಾಡುತ್ತೇನೆ ಎಂದು ಪ್ರಕಾಶ್ ರಾಜ್ ಬರೆದುಕೊಂಡಿದ್ದಾರೆ.

ಪ್ರಕಾಶ್ ರಾಜ್

ಪ್ರಕಾಶ್ ರಾಜ್ (Prakash Raj) ಅವರು ನಟನೆಯ ಜೊತೆಗೆ ತಮ್ಮ ಸಿದ್ಧಾಂತಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ. ತಮಗೆ ಅನಿಸಿದ ವಿಚಾರಗಳನ್ನು ಅವರು ನೇರವಾಗಿ ಹಂಚಿಕೊಳ್ಳುತ್ತಾರೆ. ನರೇಂದ್ರ ಮೋದಿ (Narendra Modi) ನೇತೃತ್ವದ ಬಿಜೆಪಿ ಸರ್ಕಾರವನ್ನು ಅವರು ಟೀಕಿಸಿ ಸಾಕಷ್ಟು ಬಾರಿ ಸುದ್ದಿ ಆಗಿದ್ದೂ ಇದೆ. ಅವರಿಗೆ ಸಾಕಷ್ಟು ಭಾಷಾಭಿಮಾನ ಇದೆ. ಕರ್ನಾಟಕದ ಮೇಲಿನ ಹಿಂದಿ ಹೇರಿಕೆ ವಿರುದ್ಧ ಅವರು ಸಾಕಷ್ಟು ಬಾರಿ ಧ್ವನಿ ಎತ್ತಿದ್ದಾರೆ. ಈಗ ಪ್ರಕಾಶ್ ರಾಜ್ ಮತ್ತೊಮ್ಮೆ ಗುಡುಗಿದ್ದಾರೆ. ‘ನನ್ನ ಕನ್ನಡವನ್ನು ಅವಮಾನಿಸಿ ನಿಮ್ಮ ಭಾಷೆಯನ್ನು ಹೇರಿದರೆ ನಿಂತು ಹೋರಾಡುತ್ತೇನೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ನಕಾಶೆ ಒಳಗೆ ‘ನಂಗೆ ಹಿಂದಿ ಬರಲ್ಲ ಹೋಗ್ರಪ್ಪ’ ಎಂದು ಬರೆದುಕೊಂಡಿರುವ ಶರ್ಟ್​ನ ಪ್ರಕಾಶ್ ರಾಜ್ ಧರಿಸಿದ್ದಾರೆ. ಈ ಫೋಟೋನ ಸುಪ್ರೀಂಕೋರ್ಟ್ ವಕೀಲ ಶಶಾಂಕ್ ಶೇಖರ್ ಖಾ ಅವರು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇದಕ್ಕೆ ಕ್ಯಾಪ್ಶನ್ ನೀಡಿರುವ ಅವರು, ‘ತಮಿಳುನಾಡು ಪೊಲೀಸರೇ ಪ್ರಕಾಶ್ ರಾಜ್ ವಿರುದ್ಧ ಎಫ್​ಐಆರ್​ ದಾಖಲು ಮಾಡಿಕೊಂಡಿದ್ದೀರೇ’ ಎಂದು ಪ್ರಶ್ನೆ ಮಾಡಿದ್ದಾರೆ. ಈ ಟ್ವೀಟ್​​ ವಿರುದ್ಧ ಪ್ರಕಾಶ್ ರಾಜ್ ಸಿಟ್ಟಾಗಿದ್ದಾರೆ.

ಇದನ್ನೂ ಓದಿ



‘ನನ್ನ ಬೇರು.. ನನ್ನ ಮೂಲ ನನ್ನ ಕನ್ನಡ.. ನನ್ನ ತಾಯನ್ನು ಗೌರವಿಸದೆ ನಿನ್ನ ಹಿಂದಿಯನ್ನು ಹೇರಿದರೆ ನಾವು ಹೀಗೇ ಪ್ರತಿಭಟಿಸುತ್ತೇವೆ.. ಹೆದರೊಲ್ಲ, ಅಷ್ಟೇ’ ಎಂದು ಪ್ರಕಾಶ್ ರಾಜ್ ಅವರು ಶಶಾಂಕ್ ಶೇಖರ್​ ಟ್ವೀಟ್​ಗೆ ಉತ್ತರಿಸಿದ್ದಾರೆ. ನಂತರ ಮತ್ತೊಂದು ಟ್ವೀಟ್ ಮಾಡಿ ಎಚ್ಚರಿಕೆ ನೀಡುವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಅದಾನಿ-ಹಿಂಡನ್​​ಬರ್ಗ್ ಪ್ರಕರಣ: ಪ್ರಧಾನಿ ನರೇಂದ್ರ ಮೋದಿ ಚಿತ್ರ ಹಂಚಿಕೊಳ್ಳುವ ಮೂಲಕ ಪ್ರಶ್ನೆ ಮಾಡಿದ ನಟ ಪ್ರಕಾಶ್ ರಾಜ್

‘ನಾನು ಏಳು ಭಾಷೆಗಳನ್ನು ಬಲ್ಲೆ. ಒಂದು ಭಾಷೆಯನ್ನು ಕಲಿತು ಮಾತನಾಡುವುದು ಎಂದರೆ ಆ ಭಾಷೆಯ ಜನರನ್ನು ಗೌರವಿಸುವುದು. ನಾನು ಹೋಗುವಲ್ಲೆಲ್ಲಾ ಆಯಾ ಭಾಷೆಯಲ್ಲಿ ಸಂವಾದಿಸುತ್ತೇನೆ. ನನ್ನ ಭಾಷೆಯನ್ನು ಹೇರುವುದಿಲ್ಲ. ಆದರೆ ನನ್ನ ಕನ್ನಡವನ್ನು ಅವಮಾನಿಸಿ ನಿಮ್ಮ ಭಾಷೆಯನ್ನು ಹೇರಿದರೆ ನಿಂತು ಹೋರಾಡುತ್ತೇನೆ’ ಎಂದು ಪ್ರಕಾಶ್ ರಾಜ್ ಬರೆದುಕೊಂಡಿದ್ದಾರೆ. ಜೊತೆಗೆ ಹಿಂದಿ ಹೇರಿಕೆ ನಿಲ್ಲಿಸಿ ಎನ್ನುವ ಹ್ಯಾಶ್​​ಟ್ಯಾಗ್ ಹಾಕಿದ್ದಾರೆ.

ಪ್ರಕಾಶ್ ರಾಜ್ ಹೇಳಿಕೆಗೆ ಅನೇಕರು ಬೆಂಬಲ ಸೂಚಿಸಿದ್ದಾರೆ. ಅವರು ಬಳಕೆ ಮಾಡಿದ ಪದ ಪ್ರಯೋಗದ ಬಗ್ಗೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನೂ ಕೆಲವರು ಪ್ರಕಾಶ್ ರಾಜ್ ಅವರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Prakash Raj: ‘ಬೇಷರಂ ರಂಗ್​’ ವಿವಾದ; ‘ಇದನ್ನೆಲ್ಲ ಎಲ್ಲಿಯವರೆಗೆ ಸಹಿಸಬೇಕು’ ಅಂತ ಪ್ರಶ್ನೆ ಮಾಡಿದ ಪ್ರಕಾಶ್​ ರಾಜ್​

ಪ್ರಕಾಶ್ ರಾಜ್ ಅವರು ವಿಲನ್ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಇದರ ಜೊತೆಗೆ ಪೋಷಕ ಪಾತ್ರಗಳ ಮೂಲಕವೂ ಅವರು ಇಷ್ಟ ಆಗುತ್ತಾರೆ. ಯಾವುದೇ ಚಿತ್ರರಂಗಕ್ಕೆ ತೆರಳಿದರೂ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡುತ್ತಾರೆ. ಅವರು ಈಗಲೂ ದೊಡ್ಡ ಮಟ್ಟದ ಬೇಡಿಕೆ ಉಳಿಸಿಕೊಂಡಿದ್ದಾರೆ. ಪ್ರತಿ ಚಿತ್ರಕ್ಕೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಇತ್ತೀಚೆಗೆ ರೀಲೀಸ್ ಆದ ಅವರ ನಟನೆಯ ತಮಿಳು ಸಿನಿಮಾ ‘ವಾರಿಸು’ ಯಶಸ್ಸು ಕಂಡಿದೆ. ದಳಪತಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!