PSL 2023: ಕಳೆದ ಸೀಸನ್‌ನಲ್ಲಿ ಒಂದೇ ಒಂದು ಪಂದ್ಯ ಗೆದ್ದಿದ್ದ ಕರಾಚಿ ಕಿಂಗ್ಸ್‌ಗೆ ಈ ಸೀಸನ್ ಕೂಡ ತುಂಬಾ ಕೆಟ್ಟದಾಗಿದೆ. ಕರಾಚಿ ತಂಡ ಈ ಸೀಸನ್‌ನಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆಲ್ಲಲು ಶಕ್ತವಾಗಿದೆ
ವಾಸಿಂ ಅಕ್ರಂ
ಕೊನೆಯವರೆಗೂ ಗೆಲುವಿಗಾಗಿ ಹೋರಾಡಿ ಕೊನೆಯ ಹಂತದಲ್ಲಿ ಮಾಡುವ ಕೆಲವು ಸಿಲ್ಲಿ ತಪ್ಪುಗಳಿಂದ ಅದೇಷ್ಟೋ ತಂಡಗಳು ಸೋಲನುಭವಿಸಿರುವುದನ್ನು ನಾವು ಕಂಡಿದ್ದೇವೆ. ಈಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ತಂಡದ ಪ್ರಮುಖ ಆಟಗಾರರು ಮಾಡಿದ ಯಡವಟ್ಟಿನಿಂದ ಇಡೀ ತಂಡವೇ ಸೋಲಿನ ಹೊರೆ ಹೊರಬೇಕಾಯಿತು. ಕೊನೆಯ ಹಂತದವರೆಗೂ ಗೆದ್ದೆ ಗೆಲ್ಲುತ್ತೇವೆ ಎಂದುಕೊಂಡಿದ್ದ ತಂಡದ ಅಧ್ಯಕ್ಷ, ಪಂದ್ಯವನ್ನು ಸೋತಿದ್ದನ್ನು ನೋಡಿ, ಕ್ರೀಡಾಂಗಣದಲ್ಲೇ ಆಕ್ರೋಶಗೊಂಡ ಘಟನೆ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ (PSL 2023) ನಡೆದಿದೆ. ವಾಸ್ತವವಾಗಿ ಕರಾಚಿ ಕಿಂಗ್ಸ್ ಹಾಗೂ ಮುಲ್ತಾನ್ ಸುಲ್ತಾನ್ ತಂಡದ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಗೆಲುವಿನ ಸನಿಹಕ್ಕೆ ಬಂದಿದ್ದ ಕರಾಚಿ ತಂಡ ಅಂತಿಮ ಹಂತದಲ್ಲಿ ಪಂದ್ಯ ಸೋತಿದ್ದನ್ನು ನೋಡಿದ ತಂಡದ ಅಧ್ಯಕ್ಷ ವಾಸಿಂ ಅಕ್ರಂ (Wasim Akram), ಕೋಪಗೊಂಡಿದಲ್ಲದೆ, ಎದುರಿದ್ದ ಕುರ್ಚಿಗೆ ಒದ್ದು ತಮ್ಮ ಹತಾಶೆಯನ್ನು ಹೊರಹಾಕಿದ್ದಾರೆ. ಲೆಜೆಂಡರಿ ಆಟಗಾರ ಅಕ್ರಂ ಈ ಪರಿ ಕೋಪಗೊಂಡು ಕುರ್ಚಿ ಒದ್ದಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಕೋಪದಿಂದ ಕುರ್ಚಿ ಒದ್ದ ಅಕ್ರಮ್
ವಾಸ್ತವವಾಗಿ ಈ ಪಂದ್ಯದಲ್ಲಿ ಮುಲ್ತಾನ್ ಸುಲ್ತಾನ್ ತಂಡ ಕರಾಚಿ ಕಿಂಗ್ಸ್ ತಂಡವನ್ನು ಕೇವಲ 3 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಲ್ತಾನ್ ತಂಡ ಮೊಹಮ್ಮದ್ ರಿಜ್ವಾನ್ ಶತಕದ ನೆರವಿನಿಂದಾಗಿ ಎದುರಾಳಿಗೆ ಬರೊಬ್ಬರಿ 196 ರನ್ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಕರಾಚಿ ತಂಡ ನಿಗದಿತ 20 ಓವರ್‌ಗಳಲ್ಲಿ 193 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೆಯ ಓವರ್‌ನಲ್ಲಿ ಕರಾಚಿ ಕಿಂಗ್ಸ್‌ಗೆ 22 ರನ್‌ಗಳ ಅಗತ್ಯವಿತ್ತು. ಉತ್ತರವಾಗಿ ಈ ತಂಡ ಕೇವಲ 18 ರನ್ ಗಳಿಸಲಷ್ಟೇ ಶಕ್ತವಾಯಿತು. ಒಂದು ಹಂತದಲ್ಲಿ ಕರಾಚಿ ತಂಡ ಈ ಪಂದ್ಯವನ್ನು ಗೆಲ್ಲುವ ಫೆವರೆಟ್ ಎಂದು ತೋರುತ್ತಿತ್ತು. ಆದರೆ ಕೊನೆಯ ಹಂತದಲ್ಲಿ ಬ್ಯಾಟರ್ಗಳು ಮಾಡಿದ ಯಡವಟ್ಟಿನಿಂದ ಪಂದ್ಯ ಕೈತಪ್ಪಿತು. ಇದೇ ಕಾರಣಕ್ಕೆ ವಾಸಿಂ ಅಕ್ರಮ್ ನಿರಾಸೆಗೊಂಡಿದ್ದು, ಕ್ಯಾಮರಾದ ಮುಂದೆಯೇ ತಮ್ಮ ಅಸಹಾಯಕತೆಯನ್ನು ಪ್ರದರ್ಶಿಸಿದ್ದಾರೆ.
Wasim Akram is VERY angry😤 pic.twitter.com/k0jW5NQlhY
— Haroon (@hazharoon) February 22, 2023
ಕರಾಚಿ ಕಿಂಗ್ಸ್‌ಗೆ ಸೋಲು
ಕಳೆದ ಸೀಸನ್‌ನಲ್ಲಿ ಒಂದೇ ಒಂದು ಪಂದ್ಯ ಗೆದ್ದಿದ್ದ ಕರಾಚಿ ಕಿಂಗ್ಸ್‌ಗೆ ಈ ಸೀಸನ್ ಕೂಡ ತುಂಬಾ ಕೆಟ್ಟದಾಗಿದೆ. ಕರಾಚಿ ತಂಡ ಈ ಸೀಸನ್‌ನಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆಲ್ಲಲು ಶಕ್ತವಾಗಿದೆ. ಅಲ್ಲದೆ ನಾಲ್ಕು ಪಂದ್ಯಗಳಲ್ಲಿ ಸೋಲುವುದರೊಂದಿಗೆ ಕರಾಚಿ ತಂಡ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
IND vs AUS: ಭಾರತಕ್ಕೆ ಬಿಗ್ ಶಾಕ್; ಸೆಮಿಫೈನಲ್ ಪಂದ್ಯಕ್ಕೆ ಪೂಜಾ ಅಲಭ್ಯ! ನಾಯಕಿ ಆಡುವುದು ಅನುಮಾನ
ರಿಜ್ವಾನ್ ಬಿರುಸಿನ ಶತಕ
ವಾಸ್ತವವಾಗಿ ಮುಲ್ತಾನ್ ಸುಲ್ತಾನ್ ತಂಡದ ಗೆಲುವಿಗೆ ಮೊಹಮ್ಮದ್ ರಿಜ್ವಾನ್ ಕಾರಣವೆಂದೇ ಹೇಳಬೇಕು. ಏಕೆಂದರೆ ಪಿಎಸ್ಎಲ್ನಲ್ಲಿ ಚೊಚ್ಚಲ ಶತಕ ಬಾರಿಸಿದ ರಿಜ್ವಾನ್, ಕೇವಲ 64 ಎಸೆತಗಳಲ್ಲಿ ಅಜೇಯ 110 ರನ್ ಗಳಿಸಿದರು. ಇದರಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಕೂಡ ಸೇರಿದ್ದವು. ಇವರೊಂದಿಗೆ ಮತ್ತೊಬ್ಬ ಆಟಗಾರ ಶಾನ್ ಮಸೂದ್ ಕೂಡ 51 ರನ್‌ಗಳ ಇನ್ನಿಂಗ್ಸ್ ಆಡಿದರು. ಕರಾಚಿ ಕಿಂಗ್ಸ್ ತಂಡದ ಪರ ಆಕ್ರಮಣಕಾರಿ ಆರಂಭ ನೀಡಿದ ಜೇಮ್ಸ್ ವಿಂಗ್ ಕೇವಲ 34 ಎಸೆತಗಳಲ್ಲಿ 75 ರನ್ ಚಚ್ಚಿ, ತಂಡದಲ್ಲಿ ಗೆಲುವಿನ ಆಸೆ ಹುಟ್ಟಿಸಿದ್ದರು. ಆದರೆ ಜೇಮ್ಸ್ ರನೌಟ್ ಆದ ಬಳಿಕ ಲಯ ತಪ್ಪಿದ ತಂಡದ ಬ್ಯಾಟಿಂಗ್ ಪಂದ್ಯದ ಸೋಲಿಗೆ ಕಾರಣವಾಯಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ