ನವಾರಿ ಸೀರೆಯುಟ್ಟು ಯುವತಿಯೊಬ್ಬಳು ಮೋಟಾರ್ಸೈಕಲ್ನಲ್ಲಿ ವಿಶ್ವಪರ್ಯಟನೆಗೆ ಹೊರಟಿದ್ದಾರೆ. ವೃತ್ತಿ ಜೀವನದ ಜತೆಗೆ ತಮ್ಮ ಹವ್ಯಾಸವನ್ನು ಮುಂದುವರೆಸುವುದು ವ್ಯಕ್ತಿಯ ವ್ಯಕ್ತಿತ್ವವನ್ನು ಇಮ್ಮಡಿಗೊಳಿಸುತ್ತದೆ.
Image Credit source: Free Press Journal
ನವಾರಿ ಸೀರೆಯುಟ್ಟು ಯುವತಿಯೊಬ್ಬಳು ಮೋಟಾರ್ಸೈಕಲ್ನಲ್ಲಿ ವಿಶ್ವಪರ್ಯಟನೆಗೆ ಹೊರಟಿದ್ದಾರೆ. ವೃತ್ತಿ ಜೀವನದ ಜತೆಗೆ ತಮ್ಮ ಹವ್ಯಾಸವನ್ನು ಮುಂದುವರೆಸುವುದು ವ್ಯಕ್ತಿಯ ವ್ಯಕ್ತಿತ್ವವನ್ನು ಇಮ್ಮಡಿಗೊಳಿಸುತ್ತದೆ. ಭಾರತದ ಸಂಸ್ಕೃತಿ ಪರಂಪರೆಯನ್ನು ಸಾರಲು ಮುಂಬೈನ 27 ವರ್ಷದ ಯುವತಿ ರಮೀಳಾ 9 ಗಜದ ನವಾರಿ ಸೀರೆಯನ್ನು ತೊಟ್ಟು ವಿಶ್ವದಾದ್ಯಂತ ಸಂಚರಿಸಲು ಸಿದ್ಧರಾಗಿದ್ದಾರೆ. ನಾನು 20 ದೇಶಗಳಿಗೆ ಭೇಟಿ ನೀಡಲಿದ್ದೇನೆ, ಒಂದು ಲಕ್ಷ ಕಿಲೋಮೀಟರ್ ಕ್ರಮಿಸಲಿದ್ದೇನೆ, ನಾನು ಹೋಗುವ ಪ್ರತಿ ಸ್ಥಳದಲ್ಲೂ ಭಾರತೀಯ ಹಾಗೂ ಮಹಾರಾಷ್ಟ್ರದ ಸಂಸ್ಕೃತಿಯನ್ನು ಪಸರಿಸುವುದು ನನ್ನ ಉದ್ದೇಶ ಎಂದು ರಮೀಳಾ ಹೇಳಿದ್ದಾರೆ.
ರಮೀಳಾ ಅವರು 16 ವರ್ಷ ವಯಸ್ಸಿನವರಾಗಿದ್ದಾಗಿನಿಂದಲೂ ಒಬ್ಬರೇ ಪ್ರಯಾಣಿಸುತ್ತಿದ್ದರು. ಅವರ ತಂದೆ ತಾಯಿ ಪ್ರತಿ ವರ್ಷವೂ ಬೇರೆ ಬೇರೆ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ನಮ್ಮ ದೇಶದ ದೂರ ದೂರದ ಊರುಗಳಿಗೆ ಭೇಟಿ ನೀಡಿದ್ದೇನೆ.
ಭಾರತದ ಸಂಸ್ಕೃತಿ, ಸಂಪ್ರದಾಯ, ವೈವಿಧ್ಯತೆಗಳನ್ನು ಸಾರುವ ಪ್ರಯತ್ನದಲ್ಲಿದ್ದೇನೆ ಎಂದು ಹೇಳಿದ್ದಾರೆ.
ಆಕೆ ತನ್ನ ಜತೆಗೆ 7 ಸೀರೆಗಳನ್ನು ಮಾತ್ರ ತೆಗೆದುಕೊಂಡು ಹೋಗುತ್ತಿದ್ದಾಳೆ. ಮಧ್ಯಪ್ರದೇಶದ ಮಹೇಶ್ವರಿ ರೇಷ್ಮೆ ಸೀರೆ, ಮಹಾರಾಷ್ಟ್ರದ ಪೈಥೈನಿ ಸೇರಿದಂತೆ ಅನೇಕ ಸೀರೆಗಳನ್ನು ತೆಗೆದುಕೊಂಡು ಹೋಗಲಿದ್ದಾರೆ.ಮುಂಬೈನಿಂದ ಮಾರ್ಚ್ 9 ರಂದು ಬೆಳಗಿನ ಜಾವ 4.30ಕ್ಕೆ ಹೊರಡಲಿದ್ದಾರೆ.
ಜನವರಿಯಲ್ಲಿ ಮಹಾರಾಷ್ಟ್ರದ 8 ವರ್ಷದ ಬಾಲಕಿಯೊಬ್ಬಳು ನವಾರಿ ಸೀರೆಯುಟ್ಟು ಪರ್ವತ ಏರಿದ್ದಳು. ಸುಮಾರು 400 ರಿಂದ 450 ಅಡಿ ಎತ್ತರದ ಪರ್ವತದಲ್ಲಿ ಜಿಪ್ ಲೈನಿಂಗ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಸುಮಾರು 365 ದಿನಗಳ ಪ್ರಯಾಣದ ನಂತರ ಮಾರ್ಚ್ 8, 2024 ರಂದು ಭಾರತಕ್ಕೆ ಹಿಂತಿರುಗುತ್ತದೆ.
ಅಲ್ಲದೆ, ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಭಾರತೀಯ ಮಹಿಳೆಯರಲ್ಲಿ ಧೈರ್ಯ, ದೃಢತೆ ಮತ್ತು ಪರಿಶ್ರಮದ ಸಂದೇಶವನ್ನು ಸಾರಲು ಈ ವಿಶ್ವ ಪ್ರವಾಸವನ್ನು ಪ್ರಾರಂಭಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ