7.6 C
Munich
Friday, March 3, 2023

Putani Express Train: Bengaluru’s Putani express train to be re-launched on March 8 | Putani Express Train: ಬೆಂಗಳೂರಿಗೆ ಮತ್ತೆ ಬಂದ ಪುಟಾಣಿ ಎಕ್ಸ್‌ಪ್ರೆಸ್ ರೈಲು: ಮಾರ್ಚ್ 8ರಂದು ಮರು ಉದ್ಘಾಟನೆ

ಓದಲೇಬೇಕು

ತಾಂತ್ರಿಕ ದೋಷದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ತನ್ನ ಓಡಾಟ ನಿಲ್ಲಿಸಿದ್ದ, ಬೆಂಗಳೂರಿನ ಜನಪ್ರಿಯ ಪುಟಾಣಿ ಎಕ್ಸ್‌ಪ್ರೆಸ್ ಮಾರ್ಚ್ 8 ರಿಂದ ಕಬ್ಬನ್ ಪಾರ್ಕ್‌ನಲ್ಲಿ ಮತ್ತೆ ಓಡಲು ಮುಂದಾಗಿದೆ. 

ಪುಟಾಣಿ ಎಕ್ಸ್‌ಪ್ರೆಸ್ ರೈಲು

Image Credit source: hindustantimes.com

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿಗೆ ಕಬ್ಬನ್​ ಪಾರ್ಕ್ (Cubbon Park) ಒಂದು ಆಕರ್ಷಣೆಯ ತಾಣ. ಇದೇ ಕಬ್ಬನ್​ ಪಾರ್ಕ್​ನಲ್ಲಿ ಮಕ್ಕಳಿಗೆ ಅಂತಾನೇ ಮತ್ತೊಂದು ಪ್ರಪಂಚವಿದೆ. ಅದರಲ್ಲಿ ಮಕ್ಕಳನ್ನು ಹೆಚ್ಚಾಗಿ ಸೆಳೆದದ್ದು ಅಂದರೆ ಪುಟಾಣಿ ರೈಲು (Putani express). ಪ್ರವಾಸಿಗರಿಗೆ ಸಂತೋಷದ ಸವಾರಿ ನೀಡಲು ಹೆಸರುವಾಸಿಯಾಗಿದ್ದ ಈ ಪುಟಾಣಿ ರೈಲು, 2019ರಲ್ಲಿ ತಾಂತ್ರಿಕ ದೋಷದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ತನ್ನ ಓಡಾಟ ನಿಲ್ಲಿಸಿತ್ತು. ಆದರೆ ಬೆಂಗಳೂರಿನ ಜನಪ್ರಿಯ ಪುಟಾಣಿ ಎಕ್ಸ್‌ಪ್ರೆಸ್ ಮಾರ್ಚ್ 8 ರಿಂದ ಕಬ್ಬನ್ ಪಾರ್ಕ್‌ನಲ್ಲಿ ಮತ್ತೆ ಓಡಲು ಮುಂದಾಗಿದೆ.

ಈ ಪುಟಾಣಿ ರೈಲು ಸವಾರಿ ನೀಡಲು ಹೆಸರುವಾಸಿಯಾಗಿದೆ. ಅದರಲ್ಲಿಯೂ ವಿಶೇಷವಾಗಿ ಮಕ್ಕಳಿಗೆ. ಕಬ್ಬನ್ ಪಾರ್ಕ್​ಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಈ ರೈಲು ಜನಪ್ರಿಯವಾಗಿತ್ತು. ಮತ್ತು ಅದರಲ್ಲಿ ಸವಾರಿ ಮಾಡುವುದು ಬೆಂಗಳೂರಿನ ಮಕ್ಕಳ ನೆಚ್ಚಿನ ವಾರಾಂತ್ಯದ ಚಟುವಟಿಕೆಗಳಲ್ಲಿ ಒಂದಾಗಿದೆ. ಆದಾಗ್ಯೂ, 2019ರಲ್ಲಿ ಹಳಿಗಳಿಗೆ ಹಾನಿಯಾದ ಕಾರಣ ಪುಟಾಣಿ ರೈಲು ಸವಾರಿಯನ್ನು ಸ್ಥಗಿತಗೊಳಿಸಲಾಗಿತ್ತು.

ಇದನ್ನೂ ಓದಿ: Namma Metro:ಕೆಆರ್​ಪುರಂ-ವೈಟ್​ಫೀಲ್ಡ್ ಮೆಟ್ರೋ ಮಾರ್ಗಕ್ಕೆ CMRSನಿಂದ ಗ್ರೀನ್​ ಸಿಗ್ನಲ್​​: ಟ್ರಾಫಿಕ್​ ದಟ್ಟಣೆಗೆ ಸಿಗುತ್ತಾ ಮುಕ್ತಿ?

ಪುಟಾಣಿ ಎಕ್ಸ್‌ಪ್ರೆಸ್​ನ್ನು 1968ರಲ್ಲಿ ಅಂದಿನ ಸಚಿವ ರಾಮಕೃಷ್ಣ ಹೆಗಡೆಯವರ ಪತ್ನಿ ಶಕುಂತಳಾ ಹೆಗ್ಡೆ ಅವರು ಮೊದಲ ಬಾರಿಗೆ ಉದ್ಘಾಟಿಸಿದ್ದರು. ಅಗಲಗೊಂಡಿರುವ ಟ್ರ್ಯಾಕ್‌ಗಳನ್ನು ಸರಿಪಡಿಸಲಾಗುತ್ತಿದೆ ಮತ್ತು ರೈಲಿಗೆ ಮರು-ಪೇಂಟಿಂಗ್ ಕೆಲಸಗಳು ಸಹ ಪ್ರಕ್ರಿಯೆಯಲ್ಲಿವೆ. ಶನಿವಾರದ ವೇಳೆಗೆ 900 ಮೀಟರ್ ಟ್ರ್ಯಾಕ್ ಸಿದ್ಧವಾಗಲಿದೆ. ಮರುಉದ್ಘಾಟನೆಗೂ ಮುನ್ನ ನಾವು ಪ್ರಾಯೋಗಿಕ ಓಟ ನಡೆಸುತ್ತೇವೆ. ಪುಟಾನಿ ಎಕ್ಸ್‌ಪ್ರೆಸ್​ನ್ನು ಟ್ರ್ಯಾಕ್‌ಗಳಿಗೆ ಮರಳಿ ತರಲು ನಾವು ಸಜ್ಜಾಗಿದ್ದೇವೆ ಎಂದು SWRನ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: Bengaluru: ಅಮಿತ್​ ಶಾ ದೇವನಹಳ್ಳಿಗೆ ಭೇಟಿ, ಬೆಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರ ವ್ಯತ್ಯಯ

ಜೈವಿಕ ಇಂಧನದಲ್ಲಿ ಚಲಿಸುವ ಈ ಪುಟಾಣಿ ರೈಲು, ಚಿಕ್ಕ ಇಂಜಿನ್​ ಇರುವ ಐದು ತೆರೆದ ಬೋಗಿಗಳನ್ನು ಹೊಂದಿದ್ದು, ಮಕ್ಕಳು ಮತ್ತು ವಯಸ್ಕರಿಗೆ ವಿಶೇಷವಾಗಿದೆ. ಈ ಪುಟಾಣಿ ಎಕ್ಸಪ್ರೆಸ್​ ಹಳೆಯ ಬೆಂಗಳೂರಿನ ಒಂದು ಭಾಗವಾಗಿತ್ತು. ಇತರೆ ರಾಜ್ಯಗಳಿಂದಲೂ ಜನರು ಪುಟಾಣಿ ರೈಲು ಸವಾರಿ ಮಾಡಲು ಬರುತ್ತಿದ್ದರು. ಯಾವಾಗ ಬಂದರೂ, ಜವಾಹರ್​​ ಬಾಲಭವನದಲ್ಲಿ
ಸರತಿ ಸಾಲು ಕಾಣಬೇಕಿತ್ತು. ಸದ್ಯ ಪುಟಾಣಿ ಎಕ್ಸ್‌ಪ್ರೆಸ್​ ಮತ್ತೆ ಆರಂಭವಾಗುತ್ತಿರುವುದು ಮಕ್ಕಳಲ್ಲಿ ಖುಷಿ ತಂದಿದ್ದು, ಸವಾರಿ ಮಾಡಲು ಸಜ್ಜಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!