Radhika Pandit Birthday: ಹುಟ್ಟುಹಬ್ಬದ ದಿನ ಬೆಂಗಳೂರಿನ ನಿವಾಸದಲ್ಲಿ ಇರುವುದಿಲ್ಲ ಎಂಬುದನ್ನು ರಾಧಿಕಾ ಪಂಡಿತ್ ಈ ಮೊದಲೇ ಹೇಳಿದ್ದರು. ಹೀಗಾಗಿ, ಯಶ್ ಮನೆ ಎದುರು ಅಷ್ಟಾಗಿ ಫ್ಯಾನ್ಸ್ ನೆರೆದಿಲ್ಲ.
Mar 07, 2023 | 11:08 AM





ತಾಜಾ ಸುದ್ದಿ
Updated on: Mar 07, 2023 | 11:08 AM
Mar 07, 2023 | 11:08 AM
ಯಶ್ ಹಾಗೂ ರಾಧಿಕಾ ಪಂಡಿತ್ ಮದುವೆ ಆಗಿ ಹಲವು ವರ್ಷಗಳು ಕಳೆದಿವೆ. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇಂದು (ಮಾರ್ಚ್ 7) ರಾಧಿಕಾ ಪಂಡಿತ್ಗೆ ಬರ್ತ್ಡೇ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ.
ಹುಟ್ಟುಹಬ್ಬದ ದಿನ ಬೆಂಗಳೂರಿನ ನಿವಾಸದಲ್ಲಿ ಇರುವುದಿಲ್ಲ ಎಂಬುದನ್ನು ರಾಧಿಕಾ ಪಂಡಿತ್ ಈ ಮೊದಲೇ ಹೇಳಿದ್ದರು. ಹೀಗಾಗಿ, ಯಶ್ ಮನೆ ಎದುರು ಅಷ್ಟಾಗಿ ಫ್ಯಾನ್ಸ್ ನೆರೆದಿಲ್ಲ.
ಯಶ್ ಹಾಗೂ ರಾಧಿಕಾ ಪಂಡಿತ್ ಕಿರುತೆರೆಯಲ್ಲಿ ಕೆಲಸ ಮಾಡಿದವರು. ನಂತರ ಹಿರಿತೆರೆಗೆ ಕಾಲಿಟ್ಟರು. ಇವರು ಒಟ್ಟಾಗಿ ನಟಿಸಿದ ‘ಮೊಗ್ಗಿನ ಮನಸು’ ಸೂಪರ್ ಹಿಟ್ ಆಯಿತು.
ಯಶ್ ಅವರಿಗಿಂತ ರಾಧಿಕಾ ಪಂಡಿತ್ ಸುಮಾರು ಎರಡು ವರ್ಷ ಹಿರಿಯವರು. ಯಶ್ ಜನಿಸಿದ್ದು 1986 ಜನವರಿ 8. ರಾಧಿಕಾ ಪಂಡಿತ್ ಜನಿಸಿದ್ದು ಮಾರ್ಚ್ 7, 1984ರಂದು. ಅಂದರೆ ಯಶ್ಗಿಂತ ರಾಧಿಕಾ 1 ವರ್ಷದ 10 ತಿಂಗಳು ಹಿರಿಯವರು. ಇವರ ಸಂಸಾರ ಅನೇಕರಿಗೆ ಮಾದರಿ.
ರಾಧಿಕಾ ಪಂಡಿತ್ ಅವರು ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಈ ಬಗ್ಗೆ ಫ್ಯಾನ್ಸ್ಗೆ ಬೇಸರ ಇದೆ. ಅವರು ಹೊಸ ಸಿನಿಮಾ ಘೋಷಣೆ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.