5.8 C
Munich
Wednesday, March 8, 2023

Radhika Pandit is Still bothered about Yash Beard Actress replied | Radhika Pandit: ಯಶ್ ಗಡ್ಡದಿಂದ ರಾಧಿಕಾ ಪಂಡಿತ್​ಗೆ ಎಷ್ಟು ಸಮಸ್ಯೆ ಆಗ್ತಿದೆ? ಉತ್ತರಿಸಿದ ನಟಿ

ಓದಲೇಬೇಕು

ರಾಧಿಕಾ ಪಂಡಿತ್​ಗೆ ಯಶ್ ಗಡ್ಡದ ಬಗ್ಗೆ ಪ್ರಶ್ನೆ ಬಂದಿದೆ. ‘ಈಗಲೂ ಯಶ್ ಗಡ್ಡ ನಿಮಗೆ ಕಿರಿಕಿರಿ ಅನಿಸುತ್ತಿದೆಯೇ’ ಎಂದು ಅಭಿಮಾನಿ ಪ್ರಶ್ನೆ ಮಾಡಿದ್ದರು. ಇದಕ್ಕೆ ರಾಧಿಕಾ ಉತ್ತರ ನೀಡಿದ್ದಾರೆ.

ಯಶ್-ರಾಧಿಕಾ

ನಟ ಯಶ್ (Yash) ಅವರು ‘ಕೆಜಿಎಫ್ ಚಾಪ್ಟರ್ 1’ ಚಿತ್ರದ ಶೂಟಿಂಗ್ ಶುರುವಾದಾಗಿನಿಂದ ಉದ್ದ ಗಡ್ಡ ಹಾಗೂ ಉದ್ದನೆಯ ತಲೆಕೂದಲಿನಲ್ಲಿ ಮಿಂಚುತ್ತಿದ್ದಾರೆ. ‘ಕೆಜಿಎಫ್’ ಶೂಟಿಂಗ್ ಮುಗಿದ ಬಳಿಕ ಒಮ್ಮೆ ಇದಕ್ಕೆ ಕತ್ತರಿ ಹಾಕಿದ್ದರು. ನಂತರ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಚಿತ್ರಕ್ಕಾಗಿ ಯಶ್ ಗಡ್ಡ-ಕೂದಲು ಬಿಟ್ಟರು. ಈ ಸಿನಿಮಾ ತೆರೆಗೆ ಬಂದು ವರ್ಷ ಕಳೆಯುತ್ತಾ ಬಂದರೂ ಯಶ್ ಲುಕ್ ಬದಲಾಗಿಲ್ಲ. ಹಾಗಾದರೆ ಇದರಿಂದ ರಾಧಿಕಾ ಪಂಡಿತ್​ಗೆ ಕಿರಿಕಿರಿ ಉಂಟಾಗುತ್ತಿದೆಯೇ? ಆ ಬಗ್ಗೆ ಅವರು ಉತ್ತರ ನೀಡಿದ್ದಾರೆ.

ರಾಧಿಕಾ ಪಂಡಿತ್ ಹಾಗೂ ಯಶ್ ಪ್ರೀತಿಸಿ ಮದುವೆ ಆದರು. ಇವರು ಸಂತೋಷದಿಂದ ಸಂಸಾರ ನಡೆಸುತ್ತಿದ್ದಾರೆ. ಯಶ್-ರಾಧಿಕಾ ದಂಪತಿ ಅನೇಕರಿಗೆ ಮಾದರಿ. ಸುಖಸಂಸಾರದ ಗುಟ್ಟು ಏನು ಎಂಬ ಬಗ್ಗೆ ಅನೇಕರು ರಾಧಿಕಾ ಪಂಡಿತ್ ಬಳಿ ಪ್ರಶ್ನೆ ಮಾಡಿದ್ದಿದೆ. ಈಗ ರಾಧಿಕಾ ಪಂಡಿತ್ ಅವರು ಯಶ್ ಗಡ್ಡದ ಬಗ್ಗೆ ಮಾತನಾಡಿದ್ದಾರೆ.

ಆಸ್ಕ್​ ಮಿ ಎನಿಥಿಂಗ್​ನಲ್ಲಿ ಬಂತು ಪ್ರಶ್ನೆ

ರಾಧಿಕಾ ಪಂಡಿತ್ ಅವರು ಮಾರ್ಚ್ 7ರಂದು ಬರ್ತ್​ಡೇ ಆಚರಿಸಿಕೊಂಡರು. ಈ ವರ್ಷ ಬೆಂಗಳೂರಿನಲ್ಲಿ ಇರುವುದಿಲ್ಲ ಎಂದು ಅವರು ಈ ಮೊದಲೇ ಹೇಳಿದ್ದರು. ಇದು ಫ್ಯಾನ್ಸ್​ಗೆ ಬೇಸರ ತಂದಿತ್ತು. ರಾಧಿಕಾ ಅವರು ನಿವಾಸದಲ್ಲೇ ಇದ್ದಿದ್ದರೆ ಅವರ ಮನೆ ಬಳಿ ತೆರಳಿ ಕೇಕ್ ಕತ್ತರಿಸಿ ಹಬ್ಬ ಮಾಡಬಹುದಿತ್ತು ಅನ್ನೋದು ಫ್ಯಾನ್ಸ್ ಆಲೋಚನೆ ಆಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಅಭಿಮಾನಿಗಳ ಬೇಸರ ಹೋಗಿಸೋದಕ್ಕೆ ರಾಧಿಕಾ ಪಂಡಿತ್ ಒಂದು ಆ್ಯಕ್ಟಿವಿಟಿ ನಡೆಸಿದ್ದರು.

ಇದನ್ನೂ ಓದಿ



ಇದನ್ನೂ ಓದಿ: ಯಶ್​ಗಿಂತ ರಾಧಿಕಾ ಪಂಡಿತ್ ಎಷ್ಟು ವರ್ಷ ದೊಡ್ಡವರು? ಇಲ್ಲಿದೆ ವಯಸ್ಸಿನ ಅಂತರದ ಮಾಹಿತಿ

ಇನ್​ಸ್ಟಾಗ್ರಾಮ್​ನಲ್ಲಿ ‘ಆಸ್ಕ್​ ಮಿ ಎನಿಥಿಂಗ್’ ಸೆಷನ್ ಆರಂಭಿಸಿದ್ದರು. ಫ್ಯಾನ್ಸ್ ಪ್ರಶ್ನೆ ಕೇಳಬೇಕು. ಇದಕ್ಕೆ ರಾಧಿಕಾ ಉತ್ತರ ನೀಡುತ್ತಾರೆ. ಪ್ರಶ್ನೆ ಕೇಳಿದವರು ಯಾರು ಎಂಬುದು ಗುಪ್ತವಾಗಿಯೇ ಇರುತ್ತದೆ. ರಾಧಿಕಾ ಪಂಡಿತ್​ಗೆ ಯಶ್ ಗಡ್ಡದ ಬಗ್ಗೆ ಪ್ರಶ್ನೆ ಬಂದಿದೆ. ‘ಈಗಲೂ ಯಶ್ ಗಡ್ಡ ನಿಮಗೆ ಕಿರಿಕಿರಿ ಅನಿಸುತ್ತಿದೆಯೇ’ ಎಂದು ಅಭಿಮಾನಿ ಪ್ರಶ್ನೆ ಮಾಡಿದ್ದರು. ಇದಕ್ಕೆ ರಾಧಿಕಾ ಉತ್ತರ ನೀಡಿದ್ದಾರೆ. ‘ಈಗ ಆ ರೀತಿ ಇಲ್ಲ. ಬಹಳ ಸಮಯ ಆಗಿರುವುದರಿಂದ ಅದಕ್ಕೆ ಹೊಂದಿಕೊಂಡಿದ್ದೇನೆ’ ಎಂದಿದ್ದಾರೆ ಅವರು. ಯಶ್​ನಿಂದ ಸಿಕ್ಕ ಮೊದಲ ಗಿಫ್ಟ್​ ಏನು ಎಂದೂ ಕೇಳಲಾಗಿದೆ. ಇದಕ್ಕೆ ಕೊತ್ತುಂಬರಿ ಸೊಪ್ಪು ಕಟ್ಟಿನ ಜೊತೆ ಇರುವ ಫೋಟೋನ ಅವರು ಪೋಸ್ಟ್ ಮಾಡಿದ್ದಾರೆ.

ಗಡ್ಡದಿಂದ ಕಿರಿಕಿರಿ ಆಗುತ್ತದೆ ಎಂದಿದ್ದ ರಾಧಿಕಾ

ಯಶ್ ಅವರು ‘ಕೆಜಿಎಫ್​’ ಚಿತ್ರಕ್ಕಾಗಿ ಗಡ್ಡ ಬಿಟ್ಟಿದ್ದರು. ಈ ಗಡ್ಡದಿಂದ ರಾಧಿಕಾಗೆ ಕಿರಿಕಿರಿ ಆಗಿತ್ತು. ಯಶ್​ ಗಡ್ಡಕ್ಕೆ ಕತ್ತರಿ ಹಾಕುವಾಗ ರಾಧಿಕಾ ಪಂಡಿತ್ ಹೆಚ್ಚು ಸಂಭ್ರಮಿಸಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್​ಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದರು.

ಚಿತ್ರರಂಗಕ್ಕೆ ಮರಳಲು ಕೋರಿಕೆ

ರಾಧಿಕಾ ಪಂಡಿತ್ ಅವರು ಚಿತ್ರರಂಗಕ್ಕೆ ಮರಳಬೇಕು ಎಂಬುದು ಅನೇಕರ ಕೋರಿಕೆ. ಅದು ಯಾವಾಗ ಈಡೇರುತ್ತದೆ ಎಂಬುದು ಸದ್ಯಕ್ಕಂತೂ ಈಡೇರುವ ಸೂಚನೆ ಸಿಗುತ್ತಿಲ್ಲ. ಇದರ ಜೊತೆ ಯಶ್ ಅವರ ಹೊಸ ಸಿನಿಮಾ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!