4.6 C
Munich
Monday, March 27, 2023

Radhika Pandit says she will not celebrate her birthday in home | Radhika Pandit: ರಾಧಿಕಾ ಪಂಡಿತ್​ ನಿರ್ಧಾರದಿಂದ ಅಭಿಮಾನಿಗಳಿಗೆ ಬೇಸರ ಆಗಬಹುದು; ಮೊದಲೇ ತಿಳಿಸಿದ ನಟಿ

ಓದಲೇಬೇಕು

Radhika Pandit Birthday: ರಾಧಿಕಾ ಪಂಡಿತ್​ ಅವರ ನಿರ್ಧಾರಕ್ಕೆ ಅಭಿಮಾನಿಗಳು ಬಗೆಬಗೆಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ರಾಧಿಕಾ ಎಲ್ಲಿಗೆ ತೆರಳುತ್ತಿದ್ದಾರೆ ಎಂಬುದು ಸದ್ಯಕ್ಕೆ ರಿವೀಲ್​ ಆಗಿಲ್ಲ.

ರಾಧಿಕಾ ಪಂಡಿತ್

ನಟಿ ರಾಧಿಕಾ ಪಂಡಿತ್​ (Radhika Pandit) ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಪ್ರತಿ ವರ್ಷ ಫ್ಯಾನ್ಸ್​ ಜೊತೆ ರಾಧಿಕಾ ಪಂಡಿತ್​ ಹುಟ್ಟುಹಬ್ಬ (Radhika Pandit Birthday) ಆಚರಿಸಿಕೊಳ್ಳುತ್ತಾರೆ. ಆದರೆ ಈ ವರ್ಷ ಅವರು ಮನೆಯಲ್ಲಿ ಇರುವುದಿಲ್ಲ. ಈ ವಿಚಾರವನ್ನು ಜನ್ಮದಿನಕ್ಕೂ ಒಂದು ದಿನ ಮುನ್ನ ಅವರು ತಿಳಿಸಿದ್ದಾರೆ. ಮಾರ್ಚ್​ 7ರಂದು ರಾಧಿಕಾ ಪಂಡಿತ್​ ಜನ್ಮದಿನ. ಆ ಪ್ರಯುಕ್ತ ಅಭಿಮಾನಿಗಳು (Radhika Pandit Fans) ಅವರ ಮನೆ ಬಳಿ ಜಮಾಯಿಸುತ್ತಾರೆ. ಹಾಗಾಗಿ ಮುಂಚಿತವಾಗಿಯೇ ರಾಧಿಕಾ ಪಂಡಿತ್​ ಅವರು ಮಾಹಿತಿ ನೀಡಿದ್ದಾರೆ. ಈ ವರ್ಷ ಮನೆಯಿಂದ ದೂರ ತೆರಳಿ ಬರ್ತ್​ಡೇ ಆಚರಿಸಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ನಟನೆಯಿಂದ ರಾಧಿಕಾ ಪಂಡಿತ್​ ದೂರ ಉಳಿದುಕೊಂಡಿದ್ದಾರೆ. ಆದರೆ ಅವರು ಅಭಿಮಾನಿಗಳ ಸಂಪರ್ಕ ಕಡಿದುಕೊಂಡಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ದಿನಚರಿ ಬಗ್ಗೆ ಆಗಾಗ ಅಪ್​ಡೇಟ್​ ನೀಡುತ್ತಾರೆ. ಮಕ್ಕಳ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಹಾಗೆಯೇ ಅವರು ಈ ವರ್ಷದ ತಮ್ಮ ಬರ್ತ್​ಡೇ ಪ್ಲ್ಯಾನ್​ ಬಗ್ಗೆ ತಿಳಿಸಿದ್ದಾರೆ. ಇದರಿಂದ ಕೆಲವರಿಗೆ ಬೇಸರ ಆಗಿದೆ.

ಇದನ್ನೂ ಓದಿ: Radhika Pandit: ಸಂಬಂಧಿಯ ಮದುವೆಯಲ್ಲಿ ಮಿಂಚಿದ ರಾಧಿಕಾ ಪಂಡಿತ್, ಆಯ್ರಾ, ಯಥರ್ವ್​

ಇದನ್ನೂ ಓದಿ‘ಇದೇ ಮೊದಲ ಬಾರಿಗೆ ಮನೆಯಿಂದ ದೂರ ಹೋಗಿ ಬರ್ತ್​ಡೇ ಆಚರಿಸಿಕೊಳ್ಳಲಿದ್ದೇನೆ. ನನ್ನ ಪ್ರೀತಿಯ ಅಭಿಮಾನಿಗಳಿಗೆ ಇದರಿಂದ ಬೇಸರ ಆಗಬಹುದು ಎಂಬುದು ನನಗೆ ತಿಳಿದಿದೆ. ಹಾಗಾಗಿ ಇಲ್ಲಿ ಒಂದು ಆ್ಯಕ್ಟಿವಿಟಿ ಪ್ಲ್ಯಾನ್​ ಮಾಡಿದ್ದೇನೆ. ಆ ಮೂಲಕ ನಿಮ್ಮ ಜೊತೆ ಸಂಪರ್ಕದಲ್ಲಿ ಇರಬಹುದು’ ಎಂದು ರಾಧಿಕಾ ಪಂಡಿತ್​ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಪ್ರೇಮಿಗಳ ದಿನ ಆಚರಿಸಿದ ಯಶ್​-ರಾಧಿಕಾ ಪಂಡಿತ್; ಪ್ರೈವೇಟ್​ ಜೆಟ್​ನಲ್ಲಿ ಪ್ರಯಾಣ

ರಾಧಿಕಾ ಪಂಡಿತ್​ ಹಂಚಿಕೊಂಡಿರುವ ಈ ಪೋಸ್ಟ್​ಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಮುಂಚಿತವಾಗಿ ಎಲ್ಲರೂ ಬರ್ತ್​ಡೇ ವಿಶ್​ ತಿಳಿಸುತ್ತಿದ್ದಾರೆ. ರಾಧಿಕಾ ಎಲ್ಲಿಗೆ ತೆರಳುತ್ತಿದ್ದಾರೆ ಎಂಬುದು ಸದ್ಯಕ್ಕೆ ರಿವೀಲ್​ ಆಗಿಲ್ಲ. ತಮ್ಮ ನೆಚ್ಚಿನ ನಟಿಯ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಅನೇಕ ಕಡೆಗಳಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದಾರೆ.

ಯಶ್​ ಮತ್ತು ರಾಧಿಕಾ ಪಂಡಿತ್​ ಅವರು ಕನ್ನಡ ಚಿತ್ರರಂಗದಲ್ಲಿ ಕ್ಯೂಟ್​ ಕಪಲ್​ ಎನಿಸಿಕೊಂಡಿದ್ದಾರೆ. ಕಿರುತೆರೆಯಿಂದ ಒಟ್ಟಿಗೆ ಶುರುವಾದ ಅವರ ಜರ್ನಿ, ಸಿನಿಮಾಗಳಲ್ಲೂ ಮುಂದುವರಿಯಿತು. ಬಳಿಕ ರಿಯಲ್​ ಲೈಫ್​ನಲ್ಲಿಯೂ ಅವರಿಬ್ಬರು ಜೋಡಿಯಾದರು. ಈ ದಂಪತಿಗೆ ಆರ್ಯಾ ಮತ್ತು ಯಥರ್ವ್​ ಎಂಬ ಮಕ್ಕಳು ಇದ್ದಾರೆ. ಮಕ್ಕಳ ಆರೈಕೆಯಲ್ಲಿ ರಾಧಿಕಾ ಪಂಡಿತ್​ ಬ್ಯುಸಿ ಆಗಿದ್ದಾರೆ.

ರಾಧಿಕಾ ಪಂಡಿತ್​ ಅವರು ಮೊದಲಿನಂತೆಯೇ ನಟನೆಯಲ್ಲಿ ಆ್ಯಕ್ಟೀವ್​ ಆಗಬೇಕು ಎಂಬುದು ಅಭಿಮಾನಿಗಳ ಆಸೆ. ಆದಷ್ಟು ಬೇಗ ಅವರು ಹೊಸ ಚಿತ್ರ ಒಪ್ಪಿಕೊಳ್ಳಲಿ ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!