13.1 C
Munich
Thursday, March 9, 2023

Rahul Gandhi extremely dangerous for unity foreigners don’t know him, Kiren Rijiju | Rahul Gandhi: ರಾಹುಲ್ ಗಾಂಧಿ ಭಾರತದ ಏಕತೆಗೆ ಅತ್ಯಂತ ಅಪಾಯಕಾರಿ, ಪಪ್ಪು ಬಗ್ಗೆ ವಿದೇಶಿಗರಿಗೆ ಗೊತ್ತಿಲ್ಲ: ಕಿರಣ್ ರಿಜಿಜು

ಓದಲೇಬೇಕು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತದ ಏಕತೆಗೆ ಅಪಾಯಕಾರಿಯಾಗಿದ್ದಾರೆ, ಅವರ ಬಗ್ಗೆ ವಿದೇಶಿಗರಿಗೆ ತಿಳಿದಿಲ್ಲ ಎಂದು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.ಲಂಡನ್​ನಲ್ಲಿ ರಾಹುಲ್ ಗಾಂಧಿ ಹೇಳಿಕೆಯನ್ನು ಟೀಕಿಸಿರುವ ಅವರು, ಸ್ವಘೋಷಿತ ಕಾಂಗ್ರೆಸ್​ ರಾಜಕುಮಾರ ಎಲ್ಲಾ ಮಿತಿಗಳನ್ನು ದಾಟಿದ್ದಾರೆ ಆದರೆ ವಿದೇಶಿಗರಿಗೆ ಪಪ್ಪು ಎಂದು ತಿಳಿದಿಲ್ಲ ಎಂದಿದ್ದಾರೆ.

ಕಿರಣ್ ರಿಜಿಜು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭಾರತದ ಏಕತೆಗೆ ಅಪಾಯಕಾರಿಯಾಗಿದ್ದಾರೆ, ಅವರ ಬಗ್ಗೆ ವಿದೇಶಿಗರಿಗೆ ತಿಳಿದಿಲ್ಲ ಎಂದು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.ಲಂಡನ್​ನಲ್ಲಿ ರಾಹುಲ್ ಗಾಂಧಿ ಹೇಳಿಕೆಯನ್ನು ಟೀಕಿಸಿರುವ ಅವರು, ಸ್ವಘೋಷಿತ ಕಾಂಗ್ರೆಸ್( Congress)​ ರಾಜಕುಮಾರ ಎಲ್ಲಾ ಮಿತಿಗಳನ್ನು ದಾಟಿದ್ದಾರೆ ಆದರೆ ವಿದೇಶಿಗರಿಗೆ ಪಪ್ಪು ಎಂದು ತಿಳಿದಿಲ್ಲ ಎಂದಿದ್ದಾರೆ. ರಾಹುಲ್ ಗಾಂಧಿಯ ಮೂರ್ಖ ಹೇಳಿಕೆಗೆಲ್ಲಾ ಪ್ರತಿಕ್ರಿಯಿಸುವ ಅಗತ್ಯವಿಲ್ಲ, ಆದರೆ ಬೇಸರದ ಸಂಗತಿ ಎಂದರೆ ಅವರ ಭಾರತ ವಿರೋಧಿ ಹೇಳಿಕೆಗಳನ್ನು ಭಾರತ ವಿರೋಧಿ ಪಡೆಗಳು ದುರುಪಯೋಗಪಡಿಸಿಕೊಂಡಿವೆ. ಭಾರತದ ಪ್ರತಿಷ್ಠೆಯನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ರಿಜಿಜು ಹೇಳಿದರು.

ಭಾರತದ ಏಕೈಕ ಮಂತ್ರ ಏಕ ಭಾರತ ಶ್ರೇಷ್ಠ ಭಾರತ ಎಂದು ಆದರೆ ವಿದೇಶಿ ನೆಲದಲ್ಲಿ ದೇಶವನ್ನು ಅವಮಾನಿಸಿದ್ದಾರೆ.
ಹರಿವಂಶ್ ಮಾತನಾಡಿ, ರಾಹುಲ್ ಗಾಂಧಿ ಮಾಡಿರುವ ಆರೋಪವೆಲ್ಲವೂ ಆಧಾರರಹಿತ ಹಾಗೂ ಸುಳ್ಳು, ನಾನು ಕಳೆದ 9 ವರ್ಷಗಳಿಂದ ಸಂಸತ್ತಿನಲ್ಲಿದ್ದು, ಇಲ್ಲಿಯವರೆಗೆ ಯಾರ ಬಾಯಿಂದಲೂ ಇಂತಹ ಮಾತು ಕೇಳಿಲ್ಲ. ನನಗೆ ತಿಳಿದಂತೆ ಸಂಸತ್ತಿನ ಒಳಗೆ ಅಥವಾ ಸಂಸತ್ತಿನ ಹೊರಗೆ ಯಾರೂ ಈ ರೀತಿ ಹೇಳಿಕೆ ನೀಡಿಲ್ಲ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಏನು ಹೇಳಿದ್ದರು
ಭಾರತದ ಸಂಸತ್ತಿನಲ್ಲಿ ಪ್ರತಿಪಕ್ಷ ನಾಯಕರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ, ನಾವು ಸರ್ಕಾರದ ವಿರುದ್ಧ ಧ್ವನಿ ಎತ್ತಲು ಹೋದರೆ ನಮ್ಮ ಮೈಕ್​ಗಳನ್ನು ಆಫ್​ ಮಾಡಲಾಗುತ್ತಿತ್ತು ಎಂದು ಹೇಳಿದ್ದರು.

ವಿಪಕ್ಷ ರಾಜಕಾರಣಿಗಳ ಫೋನ್‌ಗಳನ್ನು ಕದ್ದಾಲಿಸಲು ಭಾರತ ಸರ್ಕಾರ ಪೆಗಾಸಸ್‌ ಸ್ಪೈವೇರ್‌ನ್ನು ಬಳಸಿಕೊಂಡಿತ್ತು. ನಾನೂ ಕೂಡ ಈ ಬೇಹುಗಾರಿಕೆಯ ಬಲಿಪಶು. ಪೆಗಾಸಸ್‌ ಮೂಲಕ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಒತ್ತಡ ಹೇರಿ, ಕೇಂದ್ರ ಸರ್ಕಾರ ಪ್ರತಿಪಕ್ಷ ನಾಯಕರ ಫೋನ್‌ ಕದ್ದಾಲಿಸಿದೆ. ಅಲ್ಲದೇ ವಿಪಕ್ಷಗಳ ಧ್ವನಿಯನ್ನು ಅಡಗಿಸಲು ಹಲವಾರು ಕ್ರಿಮಿನಲ್‌ ಮೊಕದ್ದಮೆಗಳನ್ನು ಹಾಕಲಾಗಿದೆ. ನನ್ನ ಮೇಲೂ ಹಲವು ಸುಳ್ಳು ಮೊಕದ್ದಮೆಗಳು ದಾಖಲಾಗಿವೆ ಎಂದು ರಾಹುಲ್‌ ಗಾಂಧಿ ಹೇಳಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!