10.5 C
Munich
Thursday, March 30, 2023

Rahul Gandhi himself cancelled his flight landing here tweets Varanasi airport | ರಾಹುಲ್ ಗಾಂಧಿಯ ವಿಮಾನ ಇಳಿಯಲು ಅನುಮತಿ ನಿರಾಕರಿಸಿಲ್ಲ; ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ವಾರಣಾಸಿ ಏರ್​​ಪೋರ್ಟ್

ಓದಲೇಬೇಕು

Rahul Gandhi: ರಾಹುಲ್ ಗಾಂಧಿ ಪ್ರಯಾಗ್‌ರಾಜ್ ಭೇಟಿ ರದ್ದು, ವಿಮಾನಕ್ಕೆ ಲ್ಯಾಂಡಿಂಗ್ ಅನುಮತಿ ಸಿಕ್ಕಿಲ್ಲ, ಕಾಂಗ್ರೆಸ್ ಸರ್ಕಾರ ರಾಹುಲ್ ಜನಪ್ರಿಯತೆಗೆ ಹೆದರುತ್ತಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿರುವುದಾಗಿ ಭಾರತ್ ಸಮಾಚಾರ್ ಮಾಡಿದ ಟ್ವೀಟ್​​ಗೆ ಪ್ರತಿಕ್ರಿಯಿಸಿದ ವಾರಣಾಸಿ ವಿಮಾನ ನಿಲ್ದಾಣ, ಆಪರೇಟರ್​​ಗಳು ವಿಮಾನವನ್ನು ರದ್ದುಗೊಳಿಸಿದ್ದು ಎಂದಿದೆ.

ರಾಹುಲ್ ಗಾಂಧಿ

ರಾಹುಲ್ ಗಾಂಧಿಯವರ (Rahul Gandhi)  ಚಾರ್ಟರ್ಡ್ ವಿಮಾನಕ್ಕೆ ಸೋಮವಾರ ತಡರಾತ್ರಿ ಇಳಿಯಲು ಅನುಮತಿ ನಿರಾಕರಿಸಲಾಗಿದೆ ಎಂದು ಕಾಂಗ್ರೆಸ್ (Congress) ಹೇಳಿತ್ತು. ಇದಾಗಿ ಕೆಲವೇ ಗಂಟೆಗಳ ನಂತರ ರಾಹುಲ್ ಗಾಂಧಿ ಅವರೇ ಇಲ್ಲಿ ವಿಮಾನ ಇಳಿಯುವುದನ್ನು ರದ್ದುಗೊಳಿಸಿದ್ದಾರೆ ಎಂದು ವಾರಣಾಸಿ ವಿಮಾನ ನಿಲ್ದಾಣ ಪ್ರಾಧಿಕಾರ(Varanasi airport) ಮಂಗಳವಾರ ತಿಳಿಸಿದೆ. “13ನೇ ಫೆಬ್ರವರಿ 2013 ರಂದು 2116 ಗಂಟೆಗೆ AAI ವಾರಣಾಸಿ ವಿಮಾನ ನಿಲ್ದಾಣಕ್ಕೆ ಇಮೇಲ್ ಕಳುಹಿಸುವ ಮೂಲಕ M/s AR ಏರ್‌ವೇಸ್ ವಿಮಾನವನ್ನು ರದ್ದುಗೊಳಿಸಿದೆ” ಎಂದು ವಾರಣಾಸಿ ವಿಮಾನ ನಿಲ್ದಾಣ ಟ್ವೀಟ್‌ ಮಾಡಿದೆ.ರಾಹುಲ್ ಗಾಂಧಿ ಪ್ರಯಾಗ್‌ರಾಜ್ ಭೇಟಿ ರದ್ದು, ವಿಮಾನಕ್ಕೆ ಲ್ಯಾಂಡಿಂಗ್ ಅನುಮತಿ ಸಿಕ್ಕಿಲ್ಲ, ಕಾಂಗ್ರೆಸ್ ಸರ್ಕಾರ ರಾಹುಲ್ ಜನಪ್ರಿಯತೆಗೆ ಹೆದರುತ್ತಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿರುವುದಾಗಿ ಭಾರತ್ ಸಮಾಚಾರ್ ಮಾಡಿದ ಟ್ವೀಟ್​​ಗೆ ಪ್ರತಿಕ್ರಿಯಿಸಿದ ವಾರಣಾಸಿ ವಿಮಾನ ನಿಲ್ದಾಣ, ಆಪರೇಟರ್​​ಗಳು ವಿಮಾನವನ್ನು ರದ್ದುಗೊಳಿಸಿದ್ದು, ದಯವಿಟ್ಟು ನಿಮ್ಮ ಹೇಳಿಕೆಯನ್ನು ಸರಿಪಡಿಸಿ ಎಂದಿದೆ.

ಕೇರಳದ ವಯನಾಡಿನಿಂದ ಹಿಂದಿರುಗುವಾಗ ರಾಹುಲ್ ಗಾಂಧಿಯವರ ವಿಮಾನವನ್ನು ಇಲ್ಲಿನ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲು ನಿರ್ಧರಿಸಲಾಗಿತ್ತು. ನಾನು ಮತ್ತು ಪಕ್ಷದ ಇತರ ನಾಯಕರು ಗಾಂಧಿಯನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣದಲ್ಲಿದ್ದೆವು. ಆದರೆ “ಕೊನೆಯ ಗಳಿಗೆಯಲ್ಲಿ” ಅವರ ವಿಮಾನವನ್ನು ಇಳಿಯಲು ಅನುಮತಿಸಲಿಲ್ಲ. ರಾಹುಲ್ ಗಾಂಧಿ ನಂತರ ನವದೆಹಲಿಗೆ ಮರಳಿದರು.

ಇದನ್ನೂ ಓದಿ:ಉತ್ತರ ಪ್ರದೇಶ: ಅತಿಕ್ರಮಣ ವಿರೋಧಿ ಅಭಿಯಾನದ ವೇಳೆ ಅಮ್ಮ, ಮಗಳು ಬೆಂಕಿಗಾಹುತಿ; ಕೊಲೆ ಪ್ರಕರಣ ದಾಖಲು

ರಾಹುಲ್ ಗಾಂಧಿ ಬರುತ್ತಾರೆ ಎಂಬುದರ ಬಗ್ಗೆ ಯಾವುದೇ ಪೂರ್ವ ಮಾಹಿತಿ ಇಲ್ಲ ಎಂದು ವಾರಣಾಸಿ ವಿಮಾನ ನಿಲ್ದಾಣದ ನಿರ್ದೇಶಕ ಆರ್ಯಮ ಸನ್ಯಾಲ್ ಪಿಟಿಐಗೆ ತಿಳಿಸಿದ್ದಾರೆ. ಅಂದ ಹಾಗೆ ರಾಹುಲ್ ಗಾಂಧಿಯವರ ವಿಮಾನವನ್ನು ಇಳಿಸಲು ಅನುಮತಿ ನಿರಾಕರಿಸಲಾಗಿದೆ ಎಂಬ ಕಾಂಗ್ರೆಸ್ ನ ಆರೋಪವನ್ನು ಅವರು ನಿರಾಕರಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇಳಿಯುವ ಯೋಜನೆಯನ್ನು ರದ್ದುಗೊಳಿಸಲಾಗಿದೆ ಎಂದು ಏರ್ ಟ್ರಾಫಿಕ್ ಕಂಟ್ರೋಲರ್‌ಗೆ ತಿಳಿಸಲಾಗಿತ್ತು ಎಂದಿದ್ದಾರೆ ಸನ್ಯಾಲ್.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!