4.9 C
Munich
Wednesday, March 15, 2023

Rajamouli’s favorite Art Director Sabu Cyril Wrote About Working Experience With Rajamouli | Sabu Cyril: ರಾಜಮೌಳಿ ಕೆಲಸ ಮಾಡುವ ಬಗೆ ಹೇಗೆ? ಅನುಭವ ಎಂಥಹದ್ದು: ಸಾಬು ಸಿರಿಲ್ ಲೇಖನ

ಓದಲೇಬೇಕು

ರಾಜಮೌಳಿಯ ಮೂರು ಮೆಗಾ ಹಿಟ್ ಸಿನಿಮಾಗಳಿಗೆ ಕೆಲಸ ಮಾಡಿರುವ, ಕಳೆದ ಎಂಟು ವರ್ಷಗಳಿಂದಲೂ ರಾಜಮೌಳಿಯ ಗೆಳೆಯರಾಗಿರುವ ಕಲಾ ನಿರ್ದೇಶಕ ಸಾಬು ಸಿರಿಲ್, ರಾಜಮೌಳಿ ಹೇಗೆ ಕೆಲಸ ಮಾಡುತ್ತಾರೆ. ಅವರೊಟ್ಟಿಗೆ ಕೆಲಸ ಮಾಡುವ ಅನುಭವ ಹೇಗಿರುತ್ತದೆ ಎಂಬ ಬಗ್ಗೆ ಬರೆದಿದ್ದಾರೆ.

ಸಾಬು ಸಿರಿಲ್-ರಾಜಮೌಳಿ

ರಾಜಮೌಳಿಯೊಟ್ಟಿಗೆ ಕಳೆದ ಎಂಟು ವರ್ಷದಿಂದ ಸಂಪರ್ಕದಲ್ಲಿರುವ, ಅವರ ‘ಬಾಹುಬಲಿ’ ಭಾಗ 1, 2 ಹಾಗೂ ಆರ್​ಆರ್​ಆರ್ ಸಿನಿಮಾಕ್ಕೆ ಕಲಾ ನಿರ್ದೇಶಕರಾಗಿ ಕೆಲಸ ಮಾಡಿರುವ ಸಾಬು ಸಿರಿಲ್, ರಾಜಮೌಳಿಯೊಟ್ಟಿಗೆ ಕೆಲಸ ಮಾಡುವ ಅನುಭವ ಹೇಗಿರುತ್ತದೆ ಎಂಬುದನ್ನು ಬರೆದಿದ್ದಾರೆ.

ಸಿನಿಮಾವನ್ನು ಪ್ರೀತಿಸುವ ಹಲವು ಜನರನ್ನು ನಾನು ನೋಡಿದ್ದೇನೆ ಆದರೆ ರಾಜಮೌಳಿಗೆ (Rajamouli) ಸರ್ವಸ್ವವೂ ಸಿನಿಮಾವೇ. ಅವರು ಸಿನಿಮಾದ ಹೊರತಾಗಿ ಇನ್ನೇನನ್ನೂ ಯೋಚಿಸುವುದಿಲ್ಲ. ರಾಜಮೌಳಿಯ ದೃಷ್ಟಿ, ನಾನು ನೋಡಿದ ಇತರೆ ಎಲ್ಲ ನಿರ್ದೇಶಕರ ದೃಷ್ಟಿಗಿಂತಲೂ ಸಂಪೂರ್ಣ ಭಿನ್ನ. ನಂಬಲಸಾಧ್ಯವಾದ ದೃಶ್ಯಗಳನ್ನು ಯೋಚಿಸುತ್ತಾರೆ ಆದರೆ ಪ್ರೇಕ್ಷಕ ಅದನ್ನು ನಂಬುವಂತೆ ಪ್ರೆಸೆಂಟ್ ಮಾಡುತ್ತಾರೆ. ‘ಬಾಹುಬಲಿ’ಯಲ್ಲಿ ಶಿವಲಿಂಗವನ್ನು ಎತ್ತುವುದಾಗಿರಬಹುದು ಅಥವಾ ‘ಆರ್​ಆರ್​ಆರ್​’ ನಲ್ಲಿ ಮೋಟಾರ್ ಬೈಕ್ ಅನ್ನು ಎತ್ತಿ ಬಿಸಾಡುವುದಿರಬಹುದು.

ಪ್ರತಿಯೊಂದು ವಿಷಯದ ಬಗ್ಗೆಯೂ ಅವರಷ್ಟು ಆಳವಾಗಿ ಯೋಚಿಸುವ, ಗಮನವಹಿಸುವ ಮತ್ತೊಬ್ಬ ನಿರ್ದೇಶಕನನ್ನು ನಾನು ನೋಡಿಲ್ಲ. ನಟನ ಬಾಡಿಲಾಂಗ್ವೇಜ್​, ಯಾವುದೇ ಸೀನ್ ಮಾಡುವಾಗ ಆತ/ಆಕೆ ಕಂಪರ್ಟ್ ಆಗಿದ್ದಾರೆಯೇ ಎನ್ನುವುದರಿಂದ ಹಿಡಿದು ಕತ್ತಿಯನ್ನು ಹಿಡಿದುಕೊಳ್ಳುವ ರೀತಿಯ ವರೆಗೂ ಎಲ್ಲದನ್ನೂ ಗಮನಿಸುತ್ತಾರೆ ಚರ್ಚಿಸುತ್ತಾರೆ. ಅಷ್ಟು ನಿಖರವಾಗಿ ಅವರು ದೃಶ್ಯಗಳ ಬಗ್ಗೆ ಗಮನವಹಿ, ಶ್ರಮವಹಿಸುವುದರಿಂದಲೋ ಏನೋ ಅಗೋಚರ ಶಕ್ತಿಯೊಂದು ಅವರು ಪ್ರತಿ ಸಿನಿಮಾಕ್ಕೂ ಇನ್ನಷ್ಟು ಉತ್ತಮಗೊಳ್ಳುವಂತೆ ಆಶೀರ್ವದಿಸುತ್ತಲೇ ಇದೆ.

ನನ್ನಂಥಹಾ ವೃತ್ತಿಪರ ಕಲಾ ನಿರ್ದೇಶಕನಿಗೆ ಕಾಲ್ಪನಿಕ ಜಗತ್ತನ್ನು ನಿಜವೇನೋ ಎಂದು ನಂಬಿಸುವಂತೆ ಬಿಂಬಿಸುವುದು ಬಹಳ ಮಹತ್ವದ ಕಾರ್ಯ. ರಾಜಮೌಳಿಯ ಸಹಾಯದಿಂದ ನಾನು ಗೆಲುವು ಸಾಧಿಸಿದ್ದೇನೆ ಎನ್ನಿಸುತ್ತದೆ. ನಾನು ಅವರೊಟ್ಟಿಗೆ ಕೆಲಸ ಮಾಡಿದ್ದು ಅದ್ಭುತ ಕ್ಷಣ, ನನ್ನ ಕೆಲಸವನ್ನು ಈಗ ಜನರು ಮಾತ್ರವಲ್ಲ, ಜೇಮ್ಸ್ ಕ್ಯಾಮರನ್ ಹಾಗೂ ಸ್ಟಿಫನ್ ಸ್ಪೀಲ್​ಬರ್ಗ್ ಸಹ ಮೆಚ್ಚಿಕೊಂಡಿದ್ದಾರೆ. ರಾಜಮೌಳಿಯ ಸಿನಿಮಾಕ್ಕೆ ಕೆಲಸ ಮಾಡಿರುವುದು ನನಗೆ ಬಹಳ ಹೆಮ್ಮೆಯ ವಿಷಯ.

ನಮ್ಮಿಬ್ಬರ ಸ್ನೇಹ ಪ್ರಾರಂಭವಾಗಿದ್ದು ‘ಬಾಹುಬಲಿ’ ಪಾರ್ಟ್ 1 ಸಿನಿಮಾ ಮೂಲಕ. ಅವರೊಟ್ಟಿಗೆ ಕೆಲಸ ಮಾಡಲು ಆರಂಭಿಸಿದ ಕೂಡಲೇ ನಾನು ಅವರ ಕುಟುಂಬದ ಸದಸ್ಯನಾಗಿಬಿಟ್ಟೆ. ಅವರಿಗೆ ಜನರೊಟ್ಟಿಗೆ ಬೆರೆಯುವುದು ಒಲಿದ ಕಲೆ. ಅವರಿಂದಲೇ ನಾನು ಹೈದರಾಬಾದ್​ನಲ್ಲಿಯೇ ನಿವಾಸಗೊಳ್ಳಲು ತೀರ್ಮಾನಿಸಿದೆ. ಅವರು ಹಾಗೂ ಅವರಿಂದ ಪರಿಚಯಗೊಂಡ ಹಲವರು ಈಗ ನನ್ನ ಆತ್ಮೀಯರಾಗಿದ್ದಾರೆ. ನನ್ನ ಕುಟುಂಬವೇ ಆಗಿದ್ದಾರೆ. ರಾಜಮೌಳಿ, ಜನರಿಂದ ಕೆಲಸ ತೆಗೆಸುವ ವಿಧಾನ ಬಹಳ ವಿಶಿಷ್ಟ, ಎಷ್ಟು ಕೆಲಸ ಮಾಡಿದರೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇವೆ ಎಂದು ಎನಿಸದ ಅದ್ಭುತ ವಾತಾವರಣವನ್ನು ರಾಜಮೌಳಿ ತಮ್ಮ ಸೆಟ್​ನಲ್ಲಿ ನಿರ್ಮಿಸುತ್ತಾರೆ. ಅದು ಬಹಳ ಅಪರೂಪ.

ಇದನ್ನೂ ಓದಿ: ರಾಜಮೌಳಿ ಏಕೆ ವಿಶೇಷ? ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ವಿಶ್ಲೇಷಣೆ

ರಾಜಮೌಳಿ ನನಗೆ ಪ್ರತಿಬಾರಿಯೂ ಹೊಸ ಹೊಸ ಸವಾಲುಗಳನ್ನು ನೀಡುತ್ತಲೇ ಇರುತ್ತಾರೆ. ‘ಬಾಹುಬಲಿ’ ಸಿನಿಮಾಕ್ಕಾಗಿ ಮಾಡಿದ್ದಕ್ಕಿಂತಲೂ ಭಿನ್ನವಾದ ಕೆಲಸವನ್ನು ಅವರು ಆರ್​ಆರ್​ಆರ್ ಸಿನಿಮಾಕ್ಕಾಗಿ ನನ್ನಿಂದ ನಿರೀಕ್ಷೆ ಮಾಡಿದರು. ಅಂತೆಯೇ ನಾನು ಕೆಲಸ ಮಾಡಿಕೊಟ್ಟೆ. ನನಗೆ ನನ್ನ ಕೆಲಸದ ಮೇಲಿರುವ ವಿಶ್ವಾಸಕ್ಕಿಂತಲೂ ರಾಜಮೌಳಿಗೆ ನನ್ನ ಕೆಲಸದ ಮೇಲೆ ಹೆಚ್ಚು ವಿಶ್ವಾಸವಿದೆ. ಪ್ರತಿ ವಿಷಯದ ಬಗ್ಗೆ ಅವರು ತೋರುವ ಕಾಳಜಿ ಅಪರೂಪ. ಅನುಭವ ಹೆಚ್ಚಾದಂತೆ ಅವರು ಹೆಚ್ಚು ವೇಗವಾಗಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾದಿಂದ ಸಿನಿಮಾಕ್ಕೆ ಉತ್ತಮ, ಅತ್ಯುತ್ತಮ, ಮಹೋತ್ತಮರಾಗುತ್ತಾ ಸಾಗುತ್ತಿದ್ದಾರೆ.

ಸಿನಿಮಾದ ಪ್ರತಿ ವಿಭಾಗದ ಬಗ್ಗೆಯೂ ಅವರು ಕಾಳಜಿವಹಿಸುತ್ತಾರೆ. ಎಲ್ಲ ಕೆಲಸಗಳಲ್ಲಿಯೂ ತೊಡಗಿಕೊಳ್ಳುತ್ತಾರೆ. ಅವರು ಯಾವಾಗ ನಿದ್ದೆ ಮಾಡುತ್ತಾರೆ ಎಂಬುದೇ ನನಗೆ ಗೊಂದಲ. ನಾನು ತಿಳಿದಿರುವಂತೆ ಬೆಳಿಗ್ಗೆ 4:30 ಕ್ಕೆ ಅವರು ಎಚ್ಚರಗೊಳ್ಳುತ್ತಾರೆ. ಎಲ್ಲರಿಗಿಂತ ಮೊದಲು ಸೆಟ್​ನಲ್ಲಿ ಇರುತ್ತಾರೆ. ಡ್ಯಾನ್ಸ್ ಮಾಸ್ಟರ್, ಆಕ್ಷನ್ ಕೊರಿಯೋಗ್ರಾಫರ್, ಕ್ಯಾಮೆರಾಮ್ಯಾನ್, ನಟರು, ಎಡಿಟರ್ ಯಾರೇ ಆಗಿರಲಿ ಅವರಿಂದ ರಾಜಮೌಳಿ ಕೆಲಸ ತೆಗೆಸುವ ವಿಧಾನ ಬಹಳ ಭಿನ್ನ. ವ್ಯಕ್ತಿಗಳಿಂದ ಅವರ ಪ್ರತಿಭೆಯನ್ನು ಹೊರಗೆ ತೆಗೆಯುವ ಅಪರೂಪದ ಕಲೆ ಅದು ರಾಜಮೌಳಿಗೆ ಸಿದ್ಧಿಸಿದೆ. ಬಾಹುಬಲಿ ಸಿನಿಮಾದ ಶೂಟಿಂಗ್ ಸಮಯದಲ್ಲಿ ನನ್ನ ಹುಟ್ಟುಹಬ್ಬವಿತ್ತು, ಅವರು ನನಗಾಗಿ ಒಂದು ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದರು. ಅಷ್ಟು ದೊಡ್ಡ ವ್ಯಕ್ತಿಯಾಗಿ ಅವರು ಅದನ್ನು ನನಗಾಗಿ ಮಾಡಬೇಕಿರಲಿಲ್ಲ ಆದರೂ ಮಾಡಿದರು. ಅಂದು ಅವರ ಮುಂದೆ ನಾನು ಬಹಳ ಸಣ್ಣವನು ಎನಿಸಿತು. ಅವರು ಎಲ್ಲರನ್ನು ಇದೇ ಪ್ರೀತಿ, ಗೌರವದಿಂದ ಕಾಣುತ್ತಾರೆ.

ಅವರ ಮತ್ತೊಂದು ವಿಶೇಷತೆಯೆಂದೆ ಯಾವುದನ್ನೇ ಆಗಲಿ ಅವರು ಮೊದಲು ತಿಳಿಯದೇ ಮತ್ತೊಬ್ಬರಿಗೆ ಹೇಳುವುದಿಲ್ಲ. ಕುದುರೆ ಓಡಿಸುವುದು ಕಲಿತ ಬಳಿಕವಷ್ಟೆ ಅವರು ನಾಯಕ ನಟರಿಗೆ ಕ್ಯಾಮೆರಾ ಮುಂದೆ ಕುದುರೆ ಓಡಿಸಲು ಹೆಳುತ್ತಾರೆ. ನಾನು ಮೊದಲ ಬಾರಿಗೆ ಅವರನ್ನು ಭೇಟಿ ಮಾಡಿದಾಗ ಅವರು ಸುಮಾರು ಎಂಟು ಸಾವಿರ ಅಡಿ ಎತ್ತರದ ಜಲಪಾತದ ಬಗ್ಗೆ ಹೇಳಿದರು. ಕೆಲವು ಸ್ಕೆಚ್​ಗಳನ್ನು ತೋರಿಸಿದರು. ಕೆಲಸದ ಬಗೆಗಿನ ಸಿದ್ಧತೆಗೆ ಇದೊಂದು ಉದಾಹರಣೆ. ಜನಪ್ರಿಯರಾದ ಮೇಲೆ ಸೋಮಾರಿಗಳಾದ ಹಲವರನ್ನು ನಾನು ನೋಡಿದ್ದೇನೆ. ಆದರೆ ರಾಜಮೌಳಿ ಸಿನಿಮಾದಿಂದ ಸಿನಿಮಾಕ್ಕೆ ಹೆಚ್ಚು ಶ್ರಮ ಹಾಕುತ್ತಿದ್ದಾರೆ. ಅವರ ಈ ಯಶಸ್ಸು ಅಚಾನಕ್ಕಾಗಿ ಬಂದಿದ್ದಲ್ಲ ಅವರು ಕಷ್ಟಪಟ್ಟು ಗಳಿಸಿಕೊಂಡಿದ್ದು.

ಅವರಿಗೆ ತಂತ್ರಜ್ಞಾನದ ಬಗ್ಗೆ ಒಳ್ಳೆಯ ಮಾಹಿತಿ ಇದೆ ಅದರಲ್ಲಿಯೂ ಸಿಜಿಐ ಬಗ್ಗೆ. ತಮ್ಮ ಸುತ್ತ ಇರುವವರು ಸಹ ತಂತ್ರಜ್ಞಾನವನ್ನು ಕಲಿಯುವಂತೆ ಅವರು ಪ್ರೇರೇಪಿಸುತ್ತಾರೆ. ಅಲ್ಲದೆ, ಟೀಂ ಮೀಟಿಂಗ್ ಸಮಯದಲ್ಲಿ ಯಾರೇ ಸಲಹೆ ಕೊಟ್ಟರು ಅದನ್ನು ಸ್ವೀಕರಿಸುತ್ತಾರೆ. ಕೊಟ್ಟ ಸಲಹೆ ಅಥವಾ ಐಡಿಯಾಗಳನ್ನು ಇನ್ನಷ್ಟು ಅದ್ಭುತವಾಗಿ ರೂಪಿಸುತ್ತಾರೆ. ಅವರ ಕಲ್ಪನಾ ಶಕ್ತಿ ಬಹಳ ದೊಡ್ಡದು. ಸಣ್ಣ ವಸ್ತು ಅಥವಾ ಸಂಘಟನೆಗಳನ್ನು ಸಹ ದೊಡ್ಡದಾಗಿ ಬಿಂಬಿಸುವ, ಅದರಿಂದ ದಿ ಬೆಸ್ಟ್ ಅನ್ನು ತೆಗೆದುಕೊಳ್ಳುವ ಕಲೆ ಅವರಿಗೆ ಸಿದ್ಧಿಸಿದೆ. ಅವರ ನಿರಂತರ ಪರಿಶ್ರಮ, ಸಿನಿಮಾ ಮೇಲಿನ ಅಪಾರ ಪ್ರೀತಿಯೇ ಅವರನ್ನು ಯಶಸ್ವಿ ನಿರ್ದೇಶಕರನ್ನಾಗಿ ಮಾಡಿದೆ. ಸಿನಿಮಾ ಮೇಕಿಂಗ್ ಎಂಬುವರು ರಾಜಮೌಳಿ ಪಾಲಿಗೆ ಧ್ಯಾನದಂತೆ. ಚಿತ್ರೀಕರಣದಿಂದ ಅವರಿಗೆ ಒಂದು ಅನೂಹ್ಯ ಆನಂದ ದೊರಕುತ್ತದೆ. ಆ ಆನಂದದ ಅನುಭವ ಅವರಿಗಷ್ಟೆ ಆಗುತ್ತದೆ ಎಂಬುದು ನನ್ನ ಭಾವನೆ. ಅವರೊಟ್ಟಿಗೆ ಕೆಲಸ ಮಾಡಿದ್ದರಿಂದ ನನ್ನ ಕೆಲಸದ ಬಗ್ಗೆಯೂ ಪ್ರಪಂಚಕ್ಕೆ ತಿಳಿಯುವಂತಾಯಿತು. ಅವರೊಟ್ಟಿಗೆ ಇನ್ನಷ್ಟು ಸಿನಿಮಾಗಳಲ್ಲಿ ಕೆಲಸ ಮಾಡುವ ಆಸೆಯಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!