ಜೇವರ್ಗಿ ತಾಲೂಕಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ )ಜೇವರ್ಗಿಯ ಮಹಾಸಭೆಗೆ ತಾಲೂಕಿನ ಎಲ್ಲಾ ಸಮಾಜದ ಹಿರಿಯ ಮುಖಂಡರು ಒಂದೆಡೆ ಸಭೆ ಸೇರಿ ಪದಾಧಿಕಾರಿಗಳನ್ನು ಅವಿರೋಧ ಆಯ್ಕೆ ಮಾಡಲು ಶ್ರಮಿಸಿದ ಸರ್ವರಿಗೂ ಅಭಿನಂದನೆಗಳು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ವೀರಶೈವ ಲಿಂಗಾಯತ ಸಮಾಜವನ್ನು ಹೊಂದಿರುವ ಏಕೈಕ ತಾಲೂಕು ಜೇವರ್ಗಿ ಅಂತ ಹೆಮ್ಮೆಯಿಂದ ಹೇಳಲು ಅತಿವ ಸಂತೋಷವಾಗುತ್ತದೆ ಮತ್ತು ಸ್ಥಾನಮಾನ ವಂಚಿತ ಸಮಾಜ ಅನ್ನುವ ನೋವು ಕೂಡ ನಮ್ಮ ಜೇವರ್ಗಿ ವೀರಶೈವ ಲಿಂಗಾಯತ ಸಮಾಜಕ್ಕೆ ಇದೆ ಇನ್ನೂ ಮುಂದಾದರು ನಾವೆಲ್ಲರೂ ಒಂದಾಗಿ ಸಮಾಜದ ಪ್ರತಿಯೊಬ್ಬರ ಏಳಿಗೆಗೆ ಶ್ರಮಿಸಲು ನಿನ್ನೆ ನಡೆದ ತಾಲೂಕಾ ವೀರಶೈವ ಲಿಂಗಾಯತ ಮಹಾಸಭಾ ಮುನ್ನುಡಿ ಬರೆಯುವಂತಾಗಲಿ ಸಮಾಜ ಮನಸು ಮಾಡಿದರೆ ಯಾವುದು ಅಸಾಧ್ಯವೇ ಇಲ್ಲ ನಮ್ಮ ಸಮಾಜದ ಇತಿಹಾಸ ಅನ್ಯ ಸಮಾಜದವರನ್ನು ಪ್ರೀತಿಸುವ ಸಮಾಜ ನಮ್ಮದು ಮುಂದೆಯೂ ಸಮಾಜ ಉಳಿದ ಸಮಾಜದವರನ್ನು ಪ್ರೀತಿ ವಿಶ್ವಾಸದಿಂದ ಕಾಣುವ ಮೂಲಕ ನಮ್ಮ ಸಮಾಜವನ್ನು ಗಟ್ಟಿ ಗೊಳಿಸುವ ಕಾರ್ಯ ನೂತನ ಅವಿರೋಧ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ರಾಜಶೇಖರ ಸೀರಿ ಯವರಿಂದ ನೀರಿಕ್ಷಿಸುತ ಸಮಾಜದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡಲು ಶ್ರಮಿಸಬೇಕಾಗಿದೆ ಹಾಗೂ ವೀರಶೈವ ಲಿಂಗಾಯತ ಸಮಾಜವು ಯಾವುದೇ ಸಮಾಜಕ್ಕೆ ಅನ್ನಾಯ ಮಾಡುವುದಿಲ್ಲ ಸಮಾಜವು ಕೂಡ ಅನ್ಯಾಯ ಸಹಿಸುವುದಿಲ್ಲ ಎಂಬ ಘೋಷವಾಕ್ಯದೊಂದಿಗೆ ಸದೃಢ ಸಮಾಜ ನಿರ್ಮಾಣ ಸೀರಿ ಯವರ ಅವಧಿಯಲ್ಲಿ ಆಗಲಿ ಎಂದು ಆಶಿಸೋಣ
ತಮ್ಮ ವಿಶ್ವಾಸಿ
ವಿಶ್ವನಾಥ್ ಜಿ ಪಾಟೀಲ
ಗೌನಳ್ಳಿ ತಾ ಜೇವರ್ಗಿ ಜಿ ಕಲಬುರ್ಗಿ