7.5 C
Munich
Sunday, March 26, 2023

Rakhi Sawant praying for husband Adil Khan to get bail | Rakhi Sawant: ಗಂಡನ ಮೇಲೆ ತಾನೇ ಕೇಸ್​ ಹಾಕಿ ಜೈಲಿಗೆ ಕಳಿಸಿ, ಈಗ ಜಾಮೀನು ಸಿಗಲಿ ಅಂತ ಪ್ರಾರ್ಥಿಸಿದ ರಾಖಿ ಸಾವಂತ್​

ಓದಲೇಬೇಕು

Rakhi Sawant Husband | Adil Khan: ಈಗ ರಾಖಿ ಸಾವಂತ್​ ಅವರ ಮನಸ್ಸು ಕರಗಿದೆಯೇ? ಮತ್ತೆ ಅವರು ಆದಿಲ್​ ಖಾನ್​ ಜೊತೆ ಸಂಸಾರ ಮಾಡುತ್ತಾರಾ? ಆ ಬಗ್ಗೆಯೂ ರಾಖಿ ಮಾತನಾಡಿದ್ದಾರೆ.

ರಾಖಿ ಸಾವಂತ್

ನಟಿ, ಡ್ಯಾನ್ಸರ್ ರಾಕಿ ಸಾವಂತ್ (Rakhi Sawant) ಅವರನ್ನು ಅರ್ಥ ಮಾಡಿಕೊಳ್ಳಲು ನೆಟ್ಟಿಗರಿಗೆ ಸಾಧ್ಯವಾಗುತ್ತಿಲ್ಲ. ದಿನಕ್ಕೊಂದು ರೀತಿ ವರ್ತಿಸುವ ಅವರ ಬಗ್ಗೆ ಯಾವುದೇ ರೀತಿ ನಿರ್ಧಾರಕ್ಕೆ ಬರುವುದು ಕಷ್ಟ. ರಾಖಿ ಸಾವಂತ್​ ಅವರ ಸಂಸಾರದ ಗಲಾಟೆ ಜಗಜ್ಜಾಹೀರಾಗಿದೆ. ಪತಿ ಆದಿಲ್​ ಖಾನ್ (Adil Khan)​ ಮೇಲೆ ಹಲವು ಗಂಭೀರ ಆರೋಪ ಹೊರಿಸಿ, ಕೇಸ್​ ಹಾಕಿದ್ದಾರೆ ರಾಖಿ. ಅದರ ಪರಿಣಾಮವಾಗಿ ಆದಿಲ್​ ಖಾನ್​ ಜೈಲಿನಲ್ಲಿದ್ದಾರೆ. ಅಚ್ಚರಿ ಏನೆಂದರೆ ಈಗ ಗಂಡನಿಗೆ ಜಾಮೀನು ಸಿಗಲಿ ಎಂದು ಅವರು ಪ್ರಾರ್ಥಿಸುತ್ತಿದ್ದಾರೆ! ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡಿರುವ ರಾಖಿ ಸಾವಂತ್​ ಅವರು ಈ ವಿಚಾರ ಪ್ರಸ್ತಾಪಿಸಿದ್ದಾರೆ.

ರಾಖಿ ಸಾವಂತ್ ಅವರು ದುಬೈನಲ್ಲಿ ಡ್ಯಾನ್ಸ್​ ಕ್ಲಾಸ್​ ಹೊಂದಿದ್ದಾರೆ. ಅದರ ಸಲುವಾಗಿ ಅವರು ಆಗಾಗ ದುಬೈಗೆ ಭೇಟಿ ನೀಡುತ್ತಾರೆ. ಇತ್ತೀಚೆಗೆ ದುಬೈನಿಂದ ವಾಪಸ್​ ಬರುವಾಗ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ಇಂದು ಬೆಳಗ್ಗೆ ಪ್ರಾರ್ಥನೆ ಮಾಡುವಾಗ ನನಗೆ ಈ ಆಲೋಚನೆ ಬಂತು. ರಂಜಾನ್​ ಎಂದರೆ ಕ್ಷಮಿಸುವ ಮಾಸ. ನಾನು ಆದಿಲ್​ನನ್ನು ಕ್ಷಮಿಸದೇ ಇರಬಹುದು. ಆದರೆ ಅವನಿಗೆ ಜಾಮೀನು ಸಿಗಲಿ ಅಂತ ಪ್ರಾರ್ಥಿಸುತ್ತೇನೆ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ.

ಇದನ್ನೂ ಓದಿ: Rakhi Sawant: ದುಬೈನಲ್ಲಿ ರಾಖಿ ಸಾವಂತ್​ಗೆ ಹೊಸ ಮನೆ, ಕಾರು; ಆದರೂ ತಪ್ಪಲಿಲ್ಲ ಕಣ್ಣೀರು

ಇದನ್ನೂ ಓದಿ‘ನಾನು ಒಳ್ಳೆಯ ಪತ್ನಿ ಆಗಿದ್ದೆ. ಆದರೆ ಅವನು ನನ್ನ ಜೀವನ ಹಾಳು ಮಾಡಿದ. ನಾನು ಅಷ್ಟು ಪ್ರೀತಿ ಮಾಡಬಾರದಿತ್ತು. ಅವನಿಗೆ ಜಾಮೀನು ಸಿಗಲಿ. ನಾನು ಮಾಡಿದ ಆರೋಪಗಳು ಗಂಭೀರವಾಗಿವೆ. ಮೀಡಿಯಾ ಮೂಲಕ ಅವನಿಗೆ ನಾನು ಸಂದೇಶ ಕಳಿಸುತ್ತಿದ್ದೇನೆ. ಜಾಮೀನು ಸಿಕ್ಕ ಬಳಿಕ ನೀನು ಬೇರೆ ಯಾರ ಜೀವನವನ್ನೂ ಹಾಳು ಮಾಡಬೇಡ. ನೀನು ಬದಲಾಗಲು ಪ್ರಯತ್ನಿಸು. ಮದುವೆಯಾದರೆ ನನ್ನ ಜೊತೆ ನಡೆದುಕೊಂಡ ಹಾಗೆ ಆ ವ್ಯಕ್ತಿಯ ಜೊತೆ ನಡೆದುಕೊಳ್ಳಬೇಡ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ.

ಇದನ್ನೂ ಓದಿ: Rakhi Sawant: ‘ನಾನು ಹಿಂದೂ ಅಂತ ಆದಿಲ್​ ಖಾನ್​ ಮನೆಯವರು ನನ್ನ ಸೇರಿಸಿಕೊಳ್ತಿಲ್ಲ’; ಮೈಸೂರಲ್ಲಿ ರಾಖಿ ಸಾವಂತ್​ ಕಣ್ಣೀರು

ಇಷ್ಟೆಲ್ಲ ಹೇಳಿರುವ ರಾಖಿ ಸಾವಂತ್​ ಅವರ ಮನಸ್ಸು ಕರಗಿದೆಯೇ? ಮತ್ತೆ ಅವರು ಆದಿಲ್​ ಖಾನ್​ ಜೊತೆ ಸಂಸಾರ ಮಾಡುತ್ತಾರಾ? ‘ಎಂದಿಗೂ ನಾನು ಅವನ ಬಳಿ ಮತ್ತೆ ಹೋಗುವುದಿಲ್ಲ. ಇನ್ಮುಂದೆ ನಾನು ಒಬ್ಬಳೇ ಜೀವನ ಕಳೆಯಬೇಕು. ಆತನಿಗೆ ಒಳ್ಳೆಯದಾಗಲಿ ಅಂತ ನಾನು ಪ್ರಾರ್ಥಿಸುತ್ತಿದ್ದೇನೆ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ. 2022ರಲ್ಲಿ ರಾಖಿ ಸಾವಂತ್​ ಮತ್ತು ಆದಿಲ್​ ಖಾನ್​ ಮದುವೆ ಆಯಿತು. ಒಂದಷ್ಟು ತಿಂಗಳ ಕಾಲ ಆ ವಿಚಾರವನ್ನು ಮುಚ್ಚಿಡಲಾಗಿತ್ತು. ಶಾದಿ ಸಮಾಚಾರ ಬಹಿರಂಗ ಆದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ವೈಮನಸ್ಸು ಮೂಡಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!