ರಾಮ್ ಚರಣ್ ಹಾಗೂ ಉಪಾಸನಾ ಅವರು ಅಮೆರಿಕದಲ್ಲಿ ಸುತ್ತಾಡುತ್ತಿರುವ ಫೋಟೋ ವೈರಲ್ ಆಗಿದೆ. ಈ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
Mar 08, 2023 | 9:49 AM





ತಾಜಾ ಸುದ್ದಿ
Updated on: Mar 08, 2023 | 9:49 AM
Mar 08, 2023 | 9:49 AM
ರಾಮ್ ಚರಣ್ ಹಾಗೂ ಅವರ ಪತ್ನಿ ಉಪಾಸನಾ ಅವರು ಸದ್ಯ ಅಮೆರಿಕದಲ್ಲಿದ್ದಾರೆ. ಮಾರ್ಚ್ 12ರಂದು ಆಸ್ಕರ್ ಅವಾರ್ಡ್ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಈ ಜೋಡಿ ಅಮೆರಿಕಕ್ಕೆ ತೆರಳಿದೆ.
ರಾಮ್ ಚರಣ್ ಹಾಗೂ ಉಪಾಸನಾ ಅವರು ಅಮೆರಿಕದಲ್ಲಿ ಸುತ್ತಾಡುತ್ತಿರುವ ಫೋಟೋ ವೈರಲ್ ಆಗಿದೆ. ಈ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಉಪಾಸನಾ ಅವರು ಪ್ರೆಗ್ನೆಂಟ್ ಎನ್ನುವ ವಿಚಾರವನ್ನು ರಾಮ್ ಚರಣ್ ಅವರು ಕಳೆದ ಡಿಸೆಂಬರ್ನಲ್ಲಿ ತಿಳಿಸಿದ್ದರು. ಅವರು ಅಮೆರಿಕದಲ್ಲೇ ಮೊದಲ ಮಗು ಪಡೆಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ರಾಮ್ ಚರಣ್ ಅವರು ಈ ವಿಚಾರ ಅಲ್ಲಗಳೆದಿದ್ದರು. ‘ಭಾರತದಲ್ಲೇ ನಮ್ಮ ಮಗು ಜನಿಸಲಿದೆ’ ಎಂದು ಸ್ಪಷ್ಟನೆ ನೀಡಿದ್ದರು.
ಉಪಾಸನಾಗೆ ಎಷ್ಟು ತಿಂಗಳಾಗಿದೆ ಎನ್ನುವ ಬಗ್ಗೆ ರಾಮ್ ಚರಣ್ ಕಡೆಯಿಂದ ಉತ್ತರ ಸಿಕ್ಕಿಲ್ಲ. ಈ ಕಾರಣಕ್ಕೆ ಉಪಾಸನಾ ಅವರ ಹೊಟ್ಟೆಯ ಮೇಲೆ ಫ್ಯಾನ್ಸ್ ಕಣ್ಣಿಟ್ಟಿದ್ದಾರೆ. ಬೇಬಿ ಬಂಪ್ ಕಾಣುತ್ತದೆಯೇ ಎಂದು ಫೋಟೋದಲ್ಲಿ ಹುಡುಕಾಡಿದ್ದಾರೆ.
ಹೊಟ್ಟೆ ಕಾಣದೆ ಇರುವಂತೆ ನೋಡಿಕೊಳ್ಳಲು ಉಪಾಸನಾ ಅವರು ಪೂರ್ತಿಯಾಗಿ ದೇಹ ಮುಚ್ಚುವ ಉಡುಗೆ ತೊಟ್ಟಿದ್ದರು. ಅವರಿಗೆ ಈಗ ನಾಲ್ಕರಿಂದ ಐದು ತಿಂಗಳು ಆಗಿರಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.