9.5 C
Munich
Sunday, March 19, 2023

Ram Charan’s Flop Movie Orange Re Releasing On His Birthday on March 27 | ಆರ್​ಆರ್​ಆರ್​ ನಿಂದಾಗಿ ರಾಮ್ ಚರಣ್ ಹಳೆ ಸಿನಿಮಾಗಳಿಗೆ ಬೇಡಿಕೆ, ಫ್ಲಾಪ್ ಸಿನಿಮಾ ಮರುಬಿಡುಗಡೆ

ಓದಲೇಬೇಕು

ಆರ್​ಆರ್​ಆರ್​ ಸಿನಿಮಾದಿಂದ ರಾಮ್ ಚರಣ್​ಗೆ ಒದಗಿಬಂದಿರುವ ಜನಪ್ರಿಯತೆಯ ಲಾಭ ಪಡೆಯಲು, ಅವರ ಅಟ್ಟರ್ ಫ್ಲಾಪ್ ಸಿನಿಮಾ ಒಂದನ್ನು ಮರು ಬಿಡುಗಡೆ ಮಾಡಲಾಗುತ್ತಿದೆ.

ರಾಮ್ ಚರಣ್ ತೇಜ

ಒಂದು ಯಶಸ್ಸು ವ್ಯಕ್ತಿಯ ಹಲವು ಸೋಲುಗಳನ್ನು ಮುಚ್ಚಿ ಹಾಕಿಬಿಡುತ್ತದೆ. ನಟ ರಾಮ್​ ಚರಣ್ (Ram Charan) ವಿಷಯದಲ್ಲಿ ಈ ಮಾತು ಅಕ್ಷರಷಃ ಸತ್ಯವಾಗಿದೆ. ಆರ್​ಆರ್​ಆರ್ ಸಿನಿಮಾಕ್ಕೆ ಮುಂಚೆ ಆವರೇಜ್ ಸ್ಟಾರ್ ಎನಿಸಿಕೊಂಡಿದ್ದ ರಾಮ್ ಚರಣ್ ಈಗ ಹಾಲಿವುಡ್ ಸ್ಟಾರ್ ಆಗುವ ಹೊಸ್ತಿಲಲ್ಲಿದ್ದಾರೆ. ಆರ್​ಆರ್​ಆರ್​ (RRR) ನಿಂದಾಗಿ ಬಂದ ಜನಪ್ರಿಯತೆಯನ್ನು ಬಳಸಿಕೊಂಡು ಅವರ ಹಿಂದಿನ ಸೋಲುಗಳನ್ನು ಯಶಸ್ಸುಗಳನ್ನಾಗಿ ಬದಲಾಯಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ರಾಮ್ ಚರಣ್ ಅವರ ವೃತ್ತಿ ಜೀವನದಲ್ಲಿ ಮಗಧೀರ, ರಂಗಸ್ಥಳಂ ಹೊರತಾಗಿ ಭಾರಿ ದೊಡ್ಡ ಹಿಟ್ ಎಂಬ ಸಿನಿಮಾಗಳಿಲ್ಲ. ಮೊದಲ ಸಿನಿಮಾ ಚಿರುತ ತುಸು ಹೆಸರು ಗಳಿಸಿದರೆ ಆ ಬಳಿಕ ಬಂದ ಹಲವು ಸಿನಿಮಾಗಳು ತೀರ ಸಾಧಾರಣ ಎನಿಸಿಕೊಂಡವು. ಕೆಲವು ಸಿನಿಮಾಗಳಂತೂ ಇನ್ನಿಲ್ಲದಂತೆ ಮಕಾಡೆ ಮಲಗಿದವು. ಅವುಗಳಲ್ಲಿ ಪ್ರಮುಖವಾದುದು ಆರೆಂಜ್ ಸಿನಿಮಾ. ಈಗ ಆರ್​ಆರ್​ಆರ್ ಹಿಟ್ ಆದ ಸಂದರ್ಭದಲ್ಲಿ ರಾಮ್ ಚರಣ್ ಗೆ ದೊರೆತಿರುವ ಈ ಜನಪ್ರಿಯತೆಯ ಲಾಭ ಪಡೆಯಲು ಮುಂದಾಗಿದ್ದು ಫ್ಲಾಪ್ ಸಿನಿಮಾ ಆರೆಂಜ್ ಅನ್ನು ಮರುಬಿಡುಗಡೆ ಮಾಡಲಾಗುತ್ತಿದೆ.

ಇದೇ ಮಾರ್ಚ್ 27ಕ್ಕೆ ರಾಮ್ ಚರಣ್ ತೇಜ ಹುಟ್ಟುಹಬ್ಬ ಇದ್ದು, ಈ ಸಂದರ್ಭದಲ್ಲಿ ರಾಮ್ ಚರಣ್ ನಟನೆಯ ಆರೆಂಜ್ ಸಿನಿಮಾ ಮರು ಬಿಡುಗಡೆ ಆಗಲಿದೆ. ಆರೆಂಜ್ ಸಿನಿಮಾ ಮೊದಲ ಬಾರಿಗೆ 2010 ರಲ್ಲಿ ಬಿಡುಗಡೆ ಆಗಿತ್ತು. ಆ ಕಾಲಕ್ಕೆ ಸಿನಿಮಾದ ಮೇಲೆ ಭಾರಿ ಬಂಡವಾಳ ಹೂಡಿದ್ದರು ರಾಮ್ ಚರಣ್ ಚಿಕ್ಕಪ್ಪ ನಾಗೇಂದ್ರ ಬಾಬು. ಸಿನಿಮಾವನ್ನು ಬಹುತೇಕ ಆಸ್ಟ್ರೇಲಿಯಾನಲ್ಲಿ ಚಿತ್ರೀಕರಿಸಲಾಗಿತ್ತು. ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಿದ್ದು ಬೊಮ್ಮರಿಲ್ಲು ಖ್ಯಾತಿಯ ಭಾಸ್ಕರ್. ಆದರೆ ಸಿನಿಮಾ ಅಟ್ಟರ್ ಫ್ಲಾಪ್ ಆಗಿತ್ತು. ನಿರ್ಮಾಪಕ ನಾಗೇಂದ್ರ ಬಾಬು ಸಾಲಗಳಲ್ಲಿ ಮುಳುಗಿಬಿಟ್ಟರು.

ಪ್ರೀತಿಯ ಬಗ್ಗೆ ಮದುವೆಯ ಬಗ್ಗೆ ಭಿನ್ನ ಅಭಿಪ್ರಾಯ ಹೊಂದಿರುವ ಯುವಕನನ್ನು ಬದಲಾಯಿಸುವ ಯುವತಿಯ ಕತೆಯನ್ನು ಆ ಸಿನಿಮಾ ಒಳಗೊಂಡಿತ್ತು. ಆ ಕಾಲಕ್ಕೆ ಕತೆ ತುಸು ಅಡ್ವಾನ್ಸ್ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಕಾಲಘಟದವರಿಗೆ ಕತೆ ಹೆಚ್ಚು ಸೂಕ್ತ ಎನಿಸಬಹುದು ಎಂದುಕೊಂಡು ಈಗ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ವಿಶೇಷವೆಂದರೆ ಸಿನಿಮಾ ಮರುಬಿಡುಗಡೆಯಿಂದ ಸಂಗ್ರಹವಾಗುವ ಎಲ್ಲ ಮೊತ್ತವನ್ನು ರಾಮ್ ಚರಣ್​ರ ಮತ್ತೊಬ್ಬ ಚಿಕ್ಕಪ್ಪ ಪವನ್ ಕಲ್ಯಾಣ್​  ರ ಜನಸೇನಾ ಪಕ್ಷಕ್ಕೆ ನೀಡಲಾಗುವುದು ಎಂದು ನಿರ್ಮಾಪಕ ನಾಗೇಂದ್ರ ಬಾಬು ಘೋಷಿಸಿದ್ದಾರೆ.

ಸಿನಿಮಾ ಆಗ ಫ್ಲಾಪ್ ಆಗಿದ್ದರೂ ಸಹ ಸಿನಿಮಾ ಒಂದೊಳ್ಳೆಯ ಪ್ರೇಮಕತೆಯಾಗಿತ್ತು. ತೆಲುಗಿನ ಹೊಸ ಮಾದರಿಯ ಪ್ರೇಮಕತಾ ಸಿನಿಮಾಗಳಲ್ಲಿ ಆರೆಂಜ್ ಸಹ ಒಂದು ಎನ್ನಲಾಗುತ್ತದೆ. ಸಿನಿಮಾದಲ್ಲಿ ಜೆನಿಲಿಯಾ ಡಿಸೋಜಾ ನಾಯಕಿಯಾಗಿ ನಟಿಸಿದ್ದಾರೆ. ಪ್ರಕಾಶ್ ರೈ, ಪ್ರಭು, ಬ್ರಹ್ಮಾನಂದಮ್ ಇನ್ನೂ ಹಲವರು ಸಿನಿಮಾದಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿ ಇಲ್ಲಿದೆ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!