8.6 C
Munich
Sunday, March 26, 2023

Ram Gopal Varma explains how RRR director SS Rajamouli became successful | SS Rajamouli: ರಾಮ್​ ಗೋಪಾಲ್​ ವರ್ಮಾ ಕಂಡಂತೆ ರಾಜಮೌಳಿ; ಸಿನಿ ಮಾಂತ್ರಿಕನ ಬಗ್ಗೆ ಆರ್​ಜಿವಿ ಬರೆದ ವಿಶೇಷ ಲೇಖನ..

ಓದಲೇಬೇಕು

Ram Gopal Varma: ನಿರ್ದೇಶಕ ಎಸ್​ಎಸ್​ ರಾಜಮೌಳಿ ಅವರ ಬಗ್ಗೆ ಇಡೀ ಪ್ರಪಂಚವೇ ಮಾತನಾಡುತ್ತಿದೆ. ಅವರ ಕುರಿತು ರಾಮ್​ ಗೋಪಾಲ್​ ವರ್ಮಾ ಬರೆದಿರುವ ವಿಶೇಷ ಲೇಖನ ಇಲ್ಲಿದೆ.

ರಾಜಮೌಳಿ, ರಾಮ್ ಗೋಪಾಲ್ ವರ್ಮಾ

ಪ್ರಾಮಾಣಿಕವಾಗಿ ಹೇಳಬೇಕು ಎಂದರೆ, ಮೊದಲಿಗೆ ರಾಜಮೌಳಿ (SS Rajamouli) ಬಗ್ಗೆ ನಾನು ವಿಶೇಷವಾಗಿ ಗಮನ ಹರಿಸಿರಲಿಲ್ಲ. ಆದರೆ ‘ಮಗಧೀರ’ ಸಿನಿಮಾ ಬಂದಾಗ ಅವರು ನನ್ನ ಗಮನ ಸೆಳೆದರು. ಅಲ್ಲಿಂದ ಅವರು ತಮ್ಮ ಗಡಿ ವಿಸ್ತರಿಸಿಕೊಳ್ಳುತ್ತಾ ಬಂದರು. ತೆಲುಗು ಚಿತ್ರರಂಗದ (Tollywood) ಮಾರುಕಟ್ಟೆಯನ್ನೂ ದೊಡ್ಡದಾಗಿಸಿದರು. ಬಾಹುಬಲಿ ಸಿನಿಮಾ ದೊಡ್ಡ ಫ್ಲಾಪ್​ ಆಗತ್ತೆ ಅಂತ ರಿಲೀಸ್​ ಆಗೋದಕ್ಕಿಂತ ಮುಂಚೆ ಒಬ್ಬ ದೊಡ್ಡ ನಿರ್ಮಾಪಕರು ನನಗೆ ಹೇಳಿದ್ದರು. ಹೆಚ್ಚೆಂದರೆ 70 ಕೋಟಿ ರೂಪಾಯಿ ಗಳಿಸಬಹುದು. ಬಜೆಟ್​ 150 ಕೋಟಿ ರೂಪಾಯಿ ಆಗಿದೆ ಎಂದಿದ್ದರು. ಆದರೆ ಆ ಚಿತ್ರ ಸಾವಿರಾರು ಕೋಟಿ ರೂಪಾಯಿ ಆದಾಯ ಗಳಿಸಿತು. ನಿರ್ಮಾಪಕರಿಂದ ದುಡ್ಡು ಖರ್ಚು ಮಾಡಿಸುವಲ್ಲಿ ರಾಜಮೌಳಿ ಅವರು ತುಂಬ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾರೆ.

ತಮ್ಮ ಗಡಿಗಳನ್ನು ತಾವೇ ವಿಸ್ತರಿಸಿಕೊಂಡ ಕಾರಣದಿಂದಲೇ ರಾಜಮೌಳಿ ಅವರಿಗೆ ಇಷ್ಟು ದೊಡ್ಡ ಯಶಸ್ಸು ಸಿಕ್ಕಿತು. ಆಗಲೇ ಬಾಲಿವುಡ್​ ಎಚ್ಚೆತ್ತುಕೊಂಡಿತು. ರಾಜಮೌಳಿ ಅವರು ಸ್ಟಾರ್​ ನಟರ ಸಂಭಾವನೆಗೆ ಅನಗತ್ಯ ಹಣ ಖರ್ಚು ಮಾಡುವ ಬದಲು ಚಿತ್ರದಲ್ಲಿನ ಪ್ರತಿ ಫ್ರೇಮ್​ ಚೆನ್ನಾಗಿ ಬರಲಿ ಎಂಬ ಉದ್ದೇಶಕ್ಕೆ ಹಣ ಖರ್ಚು ಮಾಡುತ್ತಾರೆ. ಇಡೀ ತೆಲುಗು ಚಿತ್ರರಂಗಕ್ಕೆ ನಾನು ಕ್ರೆಡಿಟ್​ ನೀಡುವುದಿಲ್ಲ. ಎಲ್ಲವೂ ಸಾಧ್ಯವಾಗಿರುವುದು ರಾಜಮೌಳಿ ಒಬ್ಬರಿಂದ ಮಾತ್ರ. ತೆಲುಗಿನಲ್ಲಿ ಪ್ರತಿ ವರ್ಷ 150 ಸಿನಿಮಾಗಳು ಬರುತ್ತವೆ. ರಾಜಮೌಳಿ ರೀತಿ ಯಶಸ್ಸು ಎಲ್ಲರಿಗೂ ಸಿಗಲ್ಲ.

ಇದನ್ನೂ ಓದಿ: SS Rajamouli: ಆಸ್ಕರ್ ಪ್ರಶಸ್ತಿ ಪಡೆಯಲು ರಾಜಮೌಳಿ ಏಕೆ ವೇದಿಕೆ ಏರಿಲ್ಲ? ಇಲ್ಲಿದೆ ಉತ್ತರ

ಇದನ್ನೂ ಓದಿ



ರಾಜಮೌಳಿ ಅವರಿಗೆ ಅಪಾರವಾದ ತಾಳ್ಮೆ ಮತ್ತು ಪ್ಯಾಷನ್​ ಇದೆ. ಎಷ್ಟೇ ತಡ ಆದರೂ ಪರವಾಗಿಲ್ಲ ತಾವು ಅಂದುಕೊಂಡಿದ್ದು ಮೂಡಿಬರುವ ತನಕ ಅವರು ಕಾಯುತ್ತಾರೆ. ಆದರೆ ಬಹುತೇಕ ನಿರ್ದೇಶಕರು 6 ತಿಂಗಳು ಅಥವಾ ಒಂದು ವರ್ಷದಲ್ಲಿ ಎಲ್ಲ ಮುಗಿಯಬೇಕು ಎಂದುಕೊಳ್ಳುತ್ತಾರೆ. ನಾನು ರಾಜಮೌಳಿ ಸಿನಿಮಾಗಳ ಅಭಿಮಾನಿ ಅಲ್ಲ. ಯಾಕೆಂದರೆ ನಾನು ನೈಜತೆ ಇರುವ ಸಿನಿಮಾಗಳನ್ನು ಇಷ್ಟಪಡುತ್ತೇನೆ. ಆದರೆ ಅವರು ದೃಶ್ಯ ವೈಭವವನ್ನು ಕಟ್ಟಿಕೊಡುವ ರೀತಿ ವಿಶೇಷವಾದದ್ದು. ರಾಮಾಯಣ, ಮಹಾಭಾರತದ ರೀತಿಯ ಪಾತ್ರಗಳನ್ನು ತೆರೆಗೆ ತರುತ್ತಾರೆ. ಆದ್ದರಿಂದ ಹೆಚ್ಚು ಜನರನ್ನು ಅವರ ಸಿನಿಮಾ ತಲುಪುತ್ತದೆ.

ಇದನ್ನೂ ಓದಿ: Oscar 2023: ಆಸ್ಕರ್ ಗೆದ್ದು ಬೀಗಿದ ‘ನಾಟು ನಾಟು..’ ಹಾಡು; ರಾಜಮೌಳಿ ಚಿತ್ರಕ್ಕೆ ಮತ್ತೊಂದು ಕಿರೀಟ

‘ಮಗಧೀರ’ ಸಿನಿಮಾ ಬಂದಾಗ ನಾನು ಮೊದಲ ಬಾರಿ ರಾಜಮೌಳಿ ಅವರನ್ನು ಸರಿಯಾಗಿ ಭೇಟಿ ಮಾಡಿದೆ. ಪ್ರತಿ ಬಾರಿ ಸಿಕ್ಕಾಗ ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ವಿ. ಮಧ್ಯಮವರ್ಗದ ಅಪಾರ್ಟ್​ಮೆಂಟ್​ನಲ್ಲಿ ಅವರು ವಾಸವಾಗಿದ್ದರು. ಅಲ್ಲಿನ ಇಕ್ಕಟ್ಟಾದ ಬಾಲ್ಕನಿಯಲ್ಲಿ ನನಗೆ ಅವರು ಬಾಹುಬಲಿ ಸಿನಿಮಾದ ಕಥೆ ಹೇಳಿದರು. ಅವರ ಸರಳತೆ ನನಗೆ ಅಚ್ಚರಿ ಮೂಡಿಸಿತು. ಈಗಲೂ ಅವರು ಅಲ್ಲಿಯೇ ಇದ್ದಾರೆ. ರಾಜಮೌಳಿ ಮುಂಬೈಗೆ ಬಂದರೆ ಇನೋವಾ ಕಾರಿನಲ್ಲಿ ಓಡಾಡುತ್ತಾರೆ. ಯಾವುದೇ ಸಹಾಯಕರನ್ನು ಪಕ್ಕದಲ್ಲಿ ಇಟ್ಟುಕೊಳ್ಳುವುದಿಲ್ಲ. ಸಾಧ್ಯವಾದಲ್ಲೆಲ್ಲ ಒಬ್ಬರೇ ತೆರಳುತ್ತಾರೆ.

ಇದನ್ನೂ ಓದಿ: Rajamouli: ರಾಯಚೂರು ಜಿಲ್ಲೆ ಚುನಾವಣಾ ರಾಯಭಾರಿಯಾಗಿ ರಾಜಮೌಳಿ: ಏನೀ ನಂಟು?

ಆಸ್ಕರ್​ ಪಡೆಯಲು ರಾಜಮೌಳಿ ಹಣ ಖರ್ಚು ಮಾಡಿದರು, ಲಾಬಿ ಮಾಡಿದರು ಎಂದು ಜನರು ಕಥೆ ಕಟ್ಟುತ್ತಾರೆ. ಅದನ್ನು ನಾನು ನಂಬುವುದಿಲ್ಲ. ಹಣ ಕೊಟ್ಟು ಆಸ್ಕರ್​ ಖರೀದಿಸೋದಾಗಿದ್ರೆ ಹಾಲಿವುಡ್​ ನಿರ್ಮಾಪಕರೇ ಹಾಗೆ ಮಾಡುತ್ತಿದ್ದರು. ಯಾಕೆ ಅವರು ಹಾಗೆ ಮಾಡಿಲ್ಲ? ಹೊಟ್ಟೆಕಿಚ್ಚಿನ ಕಾರಣದಿಂದ ಜನರು ಕಥೆ ಕಟ್ಟುತ್ತಿದ್ದಾರೆ. ಯಾರ ಜೊತೆಗೂ ರಾಜಮೌಳಿ ವಿವಾದ ಮಾಡಿಕೊಳ್ಳುವುದಿಲ್ಲ. ಅವರ ಬಗ್ಗೆ ಯಾವುದೇ ಗಾಸಿಪ್​ ಇರುವುದಿಲ್ಲ. ಯಾರೂ ಕೆಟ್ಟದಾಗಿ ಮಾತನಾಡುವುದಿಲ್ಲ. ಅವರ ಜೊತೆ ಯಾರಾದರೂ ಆತ್ಮೀಯತೆ ಬೆಳೆಸಿಕೊಂಡರೆ ಮತ್ತೆ ಎಂದಿಗೂ ದೂರ ಆಗುವುದಿಲ್ಲ.

ರಾಜಮೌಳಿ ಅವರಿಂದಾಗಿ ದಕ್ಷಿಣದ ಅನೇಕ ನಿರ್ದೇಶಕರಿಗೆ ಧೈರ್ಯ ಬಂತು. ಅದರಿಂದ ಪ್ರಶಾಂತ್​ ನೀಲ್​ ಅವರು ‘ಕೆಜಿಎಫ್​ 2’ ಸಿನಿಮಾ ಮಾಡಿದರು. ಒಬ್ಬರು ಹೀಗೆ ದಾರಿ ಮಾಡಿಕೊಟ್ಟಾಗ ಅದರಲ್ಲಿ ಅನೇಕರು ಪ್ರಯಾಣಿಸಬಹುದು.

ಲೇಖಕರು:

ರಾಮ್​ ಗೋಪಾಲ್​ ವರ್ಮಾ, ಖ್ಯಾತ ನಿರ್ದೇಶಕ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!