6 C
Munich
Wednesday, March 15, 2023

Ravichandra Ashwin and Ravindra Jadeja recreated an epic comedy scene from an Akshay Kumar movie | R Ashwin: ಅಕ್ಷಯ್ ಕುಮಾರ್ ಸಿನಿಮಾದ ರೀಲ್​ಗೆ ಅಶ್ವಿನ್-ಜಡೇಜಾ ಸಖತ್ ರೀಲ್: ವೈರಲ್ ಆಗುತ್ತಿದೆ ವಿಡಿಯೋ

ಓದಲೇಬೇಕು

Ravindra Jadeja: ಭಾರತ- ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್ ಪಂದ್ಯ ಮುಗಿದು ಅಶ್ವಿನ್ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಜಡೇಜಾ ಜೊತೆ ಹಂಚಿಕೊಂಡ ನಂತರ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಒಂದು ಹಂಚಿಕೊಂಡಿದ್ದು ಸಖತ್ ವೈರಲ್ ಆಗುತ್ತಿದೆ.

Ravindra Jadeja and R Ashwin

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್- ಗವಾಸ್ಕರ್ ಟ್ರೋಫಿಯ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಪಡೆದುಕೊಳ್ಳುವ ಮೂಲಕ ಭಾರತ (India vs Australia) ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಸೋಮವಾರ (ಮಾ. 13) ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಅಂತಿಮ ನಾಲ್ಕನೇ ಟೆಸ್ಟ್ ಡ್ರಾನಲ್ಲಿ ಅಂತ್ಯ ಕಂಡ ಪರಿಣಾಮ ಟೀಮ್ ಇಂಡಿಯಾ ಮುನ್ನಡೆ ಸಾಧಿಸಿತು. ಇಡೀ ಟೆಸ್ಟ್ ಸರಣಿಯಲ್ಲಿ ಭಾರತೀಯ ಸ್ಪಿನ್ನರ್​ಗಳು ಪರಾಕ್ರಮ ಮೆರೆದರು. ಅದರಲ್ಲೂ ರವಿಚಂದ್ರನ್ ಅಶ್ವಿನ್ (R Ashwin) ಮತ್ತು ರವೀಂದ್ರ ಜಡೇಜಾ (Ravindra Jadeja) ಜೋಡಿ ಈ ಟೆಸ್ಟ್ ಸರಣಿಯನ್ನು ಭಾರತ ವಶಪಡಿಸಿಕೊಳ್ಳಲು ಪ್ರಮುಖ ಪಾತ್ರವಹಿಸಿದರು. ಸೋಮವಾರ ಇಬ್ಬರೂ ಸರಣಿಶ್ರೇಷ್ಠ ಪ್ರಶಸ್ತಿ ಹಂಚಿಕೊಂಡ ನಂತರ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಒಂದು ಹಂಚಿಕೊಂಡಿದ್ದು ಸಖತ್ ವೈರಲ್ ಆಗುತ್ತಿದೆ.

ಬಾಲಿವುಡ್​ನಲ್ಲಿ 2005 ರಲ್ಲಿ ಬಿಡುಗಡೆ ಆದ ಅಕ್ಷಯ್ ಕುಮಾರ್ ಹಾಗೂ ಸುನಿಲ್ ಶೆಟ್ಟಿ ನಟನೆಯ ”ದೀವಾನೆ ಹುಯೇ ಪಾಗಲ್” ಸಿನಿಮಾದ ‘ದೋ ತೇರಾ, ದೋ ಮೇರಾ’ ಫೇಮಸ್ ಕಾಮಿಡಿ ಸೀನ್​ಗೆ ರೀಲ್ಸ್ ಮಾಡಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಈ ವಿಡಿಯೋವನ್ನು ಅಶ್ವಿನ್ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಹಾರ್ದಿಕ್ ಪಾಮಡ್ಯ, ಸೂರ್ಯಕುಮಾರ್ ಯಾದವ್ ಸೇರಿದಂತೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯ 4 ಪಂದ್ಯಗಳಲ್ಲಿ ಅಶ್ವಿನ್ 25 ವಿಕೆಟ್ ಕಿತ್ತರೆ, ಜಡೇಜಾ 22 ವಿಕೆಟ್ ಪಡೆದು ಮಿಂಚಿದರು.

India vs Australia: ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ ವೇಳಾಪಟ್ಟಿ: ಉಭಯ ತಂಡಗಳು ಹೀಗಿವೆ

ಇದನ್ನೂ ಓದಿ



ಪಂದ್ಯ ಮುಗಿದ ಬಳಿಕ ಅಶ್ವಿನ್ ಬಗ್ಗೆ ಮಾತನಾಡಿದ ಜಡೇಜಾ, ”ಆರ್. ಅಶ್ವಿನ್ ಜೊತೆ ಬೌಲಿಂಗ್ ಮಾಡಲು ಖುಷಿ ಆಗುತ್ತದೆ. ಅವರು ಸಾಕಷ್ಟು ಟಿಪ್ಸ್ ನೀಡುತ್ತಾರೆ. ಯಾವರೀತಿ ಫೀಲ್ಡ್ ಸೆಟ್ ಮಾಡಬೇಕು ಅಥವಾ ಯಾವ ಬ್ಯಾಟರ್​ಗೆ ಹೇಗೆ ಬೌಲಿಂಗ್ ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡುತ್ತಾರೆ,” ಎಂದು ಜಡೇಜಾ ಹೇಳಿದ್ದರೆ. ಅಶ್ವಿನ್ ಕೂಡ ಜಡ್ಡು ಬಗ್ಗೆ ಮಾತನಡಿದ್ದು, ”ನಮ್ಮದು ಅದ್ಭುತ ಪಯಣ. ನಾವು ಸಾಕಷ್ಟು ಸಮಯದಿಂದ ಒಟ್ಟಿಗೆ ಇದ್ದೇವೆ. ನನಗೆ ಬೌಲಿಂಗ್ ಮಾಡಲು ಜಡೇಜಾ ಅನೇಕ ಬಾರಿ ಅವಕಾಶ ನೀಡಿದ್ದಾರೆ. ಅವರಿಗೆ ಧನ್ಯವಾದ ಹೇಳಬೇಕು. ದೆಹಲಿ ಟೆಸ್ಟ್​ನಲ್ಲಿ ಜಡೇಜಾ ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. ಹೀಗಾಗಿ ನಾವಿಂದು ಟೆಸ್ಟ್ ಸರಣಿ ಗೆದ್ದಿದ್ದೇವೆ,” ಎಂದು ಹೇಳಿದ್ದಾರೆ.

ನಾಲ್ಕನೇ ಟೆಸ್ಟ್ ಪಂದ್ಯ ಹೇಗಿತ್ತು?:

ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಬೃಹತ್​ ರನ್​ ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ ಕಾಂಗರೂ ಪಡೆ ಉಸ್ಮಾನ್ ಖವಾಜಾ ಅವರ 180 ರನ್ ಮತ್ತು ಕ್ಯಾಮೆರಾನ್​ ಗ್ರೀನ್ ಅವರ 114 ರನ್ ನೆರವಿನಿಂದ 480 ರನ್​ ಕಲೆಹಾಕಿತ್ತು. ಇದಕ್ಕುತ್ತರವಾಗಿ ಭಾರತ ಶುಭ್​ಮನ್ ಗಿಲ್​ ಅವರ 128, ವಿರಾಟ್​ ಕೊಹ್ಲಿ 186 ಮತ್ತು ಅಕ್ಷರ್​ ಪಟೇಲ್​ ಅವರ 79 ರನ್​ಗಳ ನೆರವಿನಿಂದ 91 ರನ್​ಗಳ ಮುನ್ನಡೆ ಪಡೆದು 571 ರನ್​ಗೆ ಆಲೌಟ್ ಆಯಿತು. ಕೊನೆಯ ದಿನ ಆಸ್ಟ್ರೇಲಿಯಾ ತನ್ನ ಎಡರಡನೇ ಇನ್ನಿಂಗ್ಸ್​ನಲ್ಲಿ 78.1 ಓವರ್​ನಲ್ಲಿ 175 ರನ್​ಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಅಶ್ವಿನ್-ಜಡೇಜಾ ಸರಣಿಶ್ರೇಷ್ಠ ಬಾಚಿಕೊಂಡರೆ, ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ತಮ್ಮದಾಗಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!