13.3 C
Munich
Wednesday, March 29, 2023

RCB purchase of Smriti Mandhana ensures Earn more than What Babar Azam get in PSL WPL 2023 News in Kannada | Smriti Mandhana: ಆರ್​ಸಿಬಿ ಸ್ಮೃತಿ ಮಂಧಾನಗೆ ನೀಡುವ ಹಣದ ಅರ್ಧದಷ್ಟೂ ಇಲ್ಲ ಬಾಬರ್ ಅಜಮ್​ಗೆ ಪಿಎಸ್​ಎಲ್​ನಲ್ಲಿ ಸಿಗುವ ಸಂಬಳ

ಓದಲೇಬೇಕು

Vinay Bhat |

Updated on: Feb 14, 2023 | 8:27 AM

RCB Womens Team, WPL 2023: ಆರ್​ಸಿಬಿ ತಂಡ ಸ್ಮೃತಿ ಮಂಧಾನ ಅವರನ್ನು ಬರೋಬ್ಬರಿ 3.4 ಕೋಟಿ ರೂಪಾರಿಗೆ ಖರೀದಿಸಿತು. ವಿಶೇಷ ಎಂದರೆ ಮಂಧಾನ ಅವರಿಗೆ ಆರ್​ಸಿಬಿ ನೀಡುತ್ತಿರುವ ಹಣ ಪಾಕಿಸ್ತಾನ ಆಟಗಾರರು ಪಾಕ್ ಪ್ರೀಮಿಯರ್ ಲೀಗ್​ನಲ್ಲಿ ಪಡೆಯುತ್ತಿರುವ ಹಣಕ್ಕಿಂತ ದುಪ್ಪಟ್ಟಾಗಿದೆ.

Feb 14, 2023 | 8:27 AM

ಭಾರೀ ಕುತೂಹಲ ಕೆರಳಿಸಿದ್ದ ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಅಂತ್ಯಕಂಡಿದೆ. ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಮಹಿಳಾ ಆಕ್ಷನ್ ನಡೆದಿದ್ದು ಆಟಗಾರ್ತಿಯರು ದಾಖಲೆಯ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಮುಖ್ಯವಾಗಿ ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ದೊಡ್ಡ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾದರು.

ಆರ್​ಸಿಬಿ ತಂಡ ಮಂಧಾನ ಅವರನ್ನು ಬರೋಬ್ಬರಿ 3.4 ಕೋಟಿ ರೂಪಾರಿಗೆ ಬಿಡ್ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಮಂಧಾನ ಮಹಿಳಾ ಪ್ರೀಮಿಯರ್ ಲೀಗ್​ನ ಚೊಚ್ಚಲ ಆವೃತ್ತಿಯಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಆಟಗಾರ್ತಿ ಎಂಬ ದಾಖಲೆ ಕೂಡ ಬರೆದರು. (ಫೋಟೋ ಕೃಪೆ: RCB Twitter)

ವಿಶೇಷ ಎಂದರೆ ಮಂಧಾನ ಅವರಿಗೆ ಆರ್​ಸಿಬಿ ನೀಡುತ್ತಿರುವ ಹಣ ಪಾಕಿಸ್ತಾನ ಆಟಗಾರರು ಪಾಕ್ ಪ್ರೀಮಿಯರ್ ಲೀಗ್​ನಲ್ಲಿ ಪಡೆಯುತ್ತಿರುವ ಹಣಕ್ಕಿಂತ ದುಪ್ಪಟ್ಟಾಗಿದೆ. ಮುಖ್ಯವಾಗಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಪಿಎಸ್​ಎಲ್​ನಲ್ಲಿ ಪಡೆಯುವುದಕ್ಕಿಂತ ಎರಡು ಪಟ್ಟು ಹಣವನ್ನು ಮಂಧಾನ ಡಬ್ಲ್ಯೂಪಿಎಲ್​ನಲ್ಲಿ ಪಡೆಯುತ್ತಿದ್ದಾರೆ.

ನ್ಯೂಸ್ 18 ಮಾಡಿರುವ ವರದಿಯ ಪ್ರಕಾರ, ಪಾಕಿಸ್ತಾನ ಪ್ರೀಮಿಯರ್ ಲೀಗ್​ನಲ್ಲಿ ಬಾಬರ್ ಅಜಮ್​ಗೆ ಸಿಗುತ್ತಿರುವ ಸಂಬಳ 1.4 ಕೋಟಿ. ಆದರೆ, ಮಂಧಾನಗೆ ಆರ್​ಸಿಬಿ 3.4 ಕೋಟಿಯನ್ನು ನೀಡುತ್ತಿದೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಮಂಧಾನ ಅವರ ಖರೀದಿಗೆ ಆರ್​ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿತು. ಇಬ್ಬರೂ ಕೋಟಿಗಳ ಮಳೆ ಸುರಿಸಿದರು. ಅಂತಿಮವಾಗಿ ಮಂಧಾನ ಅವರನ್ನು 3.40 ಕೋಟಿ ರೂ. ಗೆ ಖರೀದಿಸುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಶಸ್ವಿಯಾಯಿತು.

ಮಂದಾನ ಜೊತೆಗೆ ಇತರೆ ಸ್ಟಾರ್ ಆಟಗಾರ್ತಿಯರನ್ನು ಕೂಡ ಆರ್​ಸಿಬಿ ಖರೀದಿ ಮಾಡಿದೆ. ಭಾರತದ ವಿಕೆಟ್- ಕೀಪರ್ ಸ್ಫೋಟಕ ಬ್ಯಾಟರ್ ರಿಚ್ಚಾ ಘೋಷ್ ಅವರನ್ನು ಕೂಡ 1.90 ಕೋಟಿ ರೂಪಾಯಿ ನೀಡಿ ಆರ್​ಸಿಬಿ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. (ಫೋಟೋ ಕೃಪೆ: RCB Twitter

ಅಂತೆಯೆ ಟೀಮ್ ಇಂಡಿಯಾದ ಮಾರಕ ವೇಗಿ ರೇಣುಕಾ ಸಿಂಗ್ ಅವರು 1.50 ಕೋಟಿ ರೂಪಾಯಿಗೆ ಆರ್​ಸಿಬಿ ಪಾಲಾದರು. ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಎಲಿಸ್ಸಾ ಪೆರಿ ಅವರನ್ನು 1.7 ಕೋಟಿ ನೀಡಿ ಖರೀದಿಸಿದೆ. ನ್ಯೂಜಿಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಸೋಫಿ ಡಿವೈನ್ ಅವರನ್ನು ಕೂಡ ಆರ್​ಸಿಬಿ 50 ಲಕ್ಷಕ್ಕೆ ಪಡೆದುಕೊಂಡಿದೆ. (ಫೋಟೋ ಕೃಪೆ: RCB Twitter

ಆಸೀಸ್ ಆಲ್ರೌಂಡರ್ ಎರಿನ್ ಬರ್ನ್ಸ್ ಅವರು 30 ಲಕ್ಷಕ್ಕೆ, ದಿಶಾ ಕಸಟ್ 10 ಲಕ್ಷಕ್ಕೆ, ಶ್ರೇಯಾಂಕಾ ಪಾಟೀಲ್ 10 ಲಕ್ಷಕ್ಕೆ, ಇಂದ್ರಾಣಿ ರಾಯ್ 10 ಲಕ್ಷಕ್ಕೆ, ಕನಿಕಾ ಅಹುಜಾ 35 ಲಕ್ಷ, ಆಶಾ ಶೋಬನಾ 10 ಲಕ್ಷ, ಇಂಗ್ಲೆಂಡ್ ನಾಯಕಿ ಹೇಥರ್ ನೈಟ್ 40 ಲಕ್ಷ, ದಕ್ಷಿಣ ಆಫ್ರಿಕಾ ನಾಯಕಿ ಆಲ್ರೌಂಡರ್ ಡೇನ್ ವಾನ್ ನೈಕೆರ್ಕ್ 30 ಲಕ್ಷ ಜೊತೆ ಒಟ್ಟು 18 ಆಟಗಾರ್ತಿಯರನ್ನು ಆರ್​ಸಿಬಿ ಖರೀದಿಸಿದೆ.

ತಾಜಾ ಸುದ್ದಿ

Most Read Stories

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!