8.6 C
Munich
Sunday, March 26, 2023

RCB vs MI: ಭರ್ಜರಿ ಸೇಲ್ ಆಗುತ್ತಿದೆ ಆರ್​ಸಿಬಿ-ಮುಂಬೈ ಪಂದ್ಯದ ಟಿಕೆಟ್: ಖಾಲಿಯಾಗುವ ಮುನ್ನ ಬುಕ್ ಮಾಡಿ

ಓದಲೇಬೇಕು

ಈ ಬಾರಿ ಕಪ್ ಗೆಲ್ಲುವ ನಿರೀಕ್ಷೆಯಲ್ಲಿರುವ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಅಭಿಯಾನ ಆರಂಭಿಸಲಿದೆ. ಇದೀಗ ಈ ಪಂದ್ಯದ ಟಿಕೆಟ್ ಖರೀದಿಗೆ ಸಿಗುತ್ತಿದೆ.ಆರ್​ಸಿಬಿಯ ಅಧಿಕೃತ ವೆಬ್​ಸೈಟ್​ನಲ್ಲಿ ಟಿಕೆಟ್ ಮಾರಾಟ ಶುರುವಾಗಿದೆ. ಆರಂಭಿಕ ಬೆಲೆ 2,310 ರೂ. ಯಿಂದ ಇದ್ದು 42,000 ರೂ. ವರೆಗಿನ ಟಿಕೆಟ್ ಖರೀದಿಗೆ ಲಭ್ಯವಿದೆ. ಈಗಾಗಲೇ ಬಹುತೇಕ ಟಿಕೆಟ್ ಸೋಲ್ಡ್ ಔಟ್ ಆಗಿದ್ದು ಕೂಡಲೇ ಖರೀದಿಸಿದರೆ ಬುಕ್ ಮಾಡಬಹುದು.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲ್ಲ ಪಂದ್ಯದ ಟಿಕೆಟ್ ಈಗಲೇ ಬುಕ್ ಮಾಡಲು ಆರ್​ಸಿಬಿಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಬೇಕು. ಆರ್​ಸಿಬಿ vs ಮುಂಬೈ ಟಿಕೆಟ್ ಬೆಲೆ ಇಂತಿದೆ: 2310 ರೂ., 3300ರೂ., 4840ರೂ., 6049ರೂ., 9075ರೂ., 10890ರೂ., 24200ರೂ., 42350ರೂ.ಇದರ ನಡುವೆ ಟೂರ್ನಿ ಆರಂಭಕ್ಕೂ ಮುನ್ನ ಆರ್​ಸಿಬಿಗೆ ಆಘಾತ ಉಂಟಾಗಿದೆ. ಇಂಗ್ಲೆಂಡ್​ನ ಯುವ ಆಲ್​ರೌಂಡರ್ ವಿಲ್ ಜಾಕ್ಸ್ ಗಾಯದ ಕಾರಣ ಐಪಿಎಲ್​ನಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಆರ್​ಸಿಬಿ ಇವರನ್ನು ಹರಾಜಿನಲ್ಲಿ ಬರೋಬ್ಬರಿ 3.2 ಕೋಟಿ ನೀಡಿ ಖರೀದಿಸಿತ್ತು. ಇದೀಗ ಗಾಯಗೊಂಡಿರುವುದರಿಂದ ವಿಲ್ ಜಾಕ್ಸ್​ ಐಪಿಎಲ್​ನಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ.ಆರ್​ಸಿಬಿ ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೋರ್, ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇವಿಡ್ ವಿಲ್ಲಿ, ಫಿನ್ ಅಲೆನ್, ರಜತ್ ಪಾಟಿದಾರ್, ಶಹಬಾಜ್ ಅಹಮದ್, ಸಿದ್ಧಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಹಿಮಾಂಶು ಶರ್ಮಾ, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ವನಿಂದು ಹಸರಂಗ, ಮನೋಜ್ ಭಾಂಡಗೆ, ರಾಜನ್ ಕುಮಾರ್, ಜೋಶ್ ಹೇಜಲ್‌ವುಡ್, ಕರಣ್ ಶರ್ಮಾ, ರೀಸ್ ಟೋಪ್ಲಿ, ಅವಿನಾಶ್ ಸಿಂಗ್, ಸೋನು ಯಾದವ್, ಆಕಾಶ್ ದೀಪ್.ಮಾರ್ಚ್ 31 ರಂದು ಈ ಮಿಲಿಯನ್ ಡಾಲರ್ ಟೂರ್ನಿಗೆ ಚಾಲನೆ ಸಿಗಲಿದ್ದು ಮೇ 28 ಕ್ಕೆ ಫೈನಲ್ ಪಂದ್ಯ ನಡೆಯುವ ಮೂಲಕ ಅಂತ್ಯಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣೆಸಾಟ ನಡೆಸಲಿದೆ.

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!