8.4 C
Munich
Thursday, March 23, 2023

Rishab Shetty To Participate In UN Annual Meeting 2023 and Will Talk In Kannada, Kantara Movie To be premier At UN | Rishab Shetty: ವಿಶ್ವಸಂಸ್ಥೆ ತಲುಪಿದ ಕಾಂತಾರ, ಕನ್ನಡದಲ್ಲಿ ಮಾತನಾಡಲಿರುವ ರಿಷಬ್ ಶೆಟ್ಟಿ

ಓದಲೇಬೇಕು

ನಟ, ನಿರ್ದೇಶಕ ರಿಷಬ್ ಶೆಟ್ಟಿ ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದು, ಕನ್ನಡದಲ್ಲಿಯೇ ಮಾತನಾಡಲಿದ್ದಾರೆ. ಇದೇ ವೇಳೆ ಕಾಂತಾರ ಸಿನಿಮಾದ ಪ್ರದರ್ಶನವೂ ನಡೆಯಲಿದೆ.

ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿರುವ ಜೊತೆಗೆ ಕನ್ನಡ ಸಿನಿಮಾವನ್ನು, ಕನ್ನಡದ ಕತೆಯನ್ನು, ಇಲ್ಲಿನ ಸಂಸ್ಕೃತಿ, ಆಚರಣೆಯನ್ನು ದೇಶದ ಜನರಿಗೆ ಪರಿಚಯಿಸಿದೆ. ಇದೀಗ ಈ ಸಿನಿಮಾವು ಗಡಿ ದಾಟಿ ವಿಶ್ವಸಂಸ್ಥೆಯನ್ನು ಹೊಕ್ಕಿದ್ದು, ದೈವದ ಕತೆ ವಿಶ್ವಸಂಸ್ಥೆಯಲ್ಲಿ ಅನುರಣಿಸಲಿದೆ.

ವಿಶ್ವಸಂಸ್ಥೆಯ ವಾರ್ಷಿಕ ಸಭೆ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದು, ವಿಶ್ವದ ಹಲವು ರಾಷ್ಟ್ರಗಳ ಪ್ರತಿನಿಧಿಗಳು ವಿಶ್ವ ಇದೀಗ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿವೆ. ಈ ವಾರ್ಷಿಕ ಸಭೆಯಲ್ಲಿ ನಟ ರಿಷಬ್ ಶೆಟ್ಟಿ ಸಹ ಭಾಗವಹಿಸಲಿದ್ದು, ವಿವಿಧ ದೇಶಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಕಾಂತಾರ ಸಿನಿಮಾ ಮೂಲಕ ಕಾಡಂಚಿನ ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿರುವ ನಿರ್ದೇಶಕ ರಿಷಬ್ ಶೆಟ್ಟಿ ಇದೇ ವಿಷಯವಾಗಿ ವಿಶ್ವಸಂಸ್ಥೆಯಲ್ಲಿ ಮಾತನಾಡುವ ಸಾಧ್ಯತೆ ಇದೆ. ವಿಶ್ವಸಂಸ್ಥೆಯಲ್ಲಿ ತಮ್ಮತನ ಮೆರೆಯಲಿರುವ ರಿಷಬ್ ಶೆಟ್ಟಿ ಅಲ್ಲಿ ಕನ್ನಡದಲ್ಲಿಯೇ ಮಾತನಾಡಲಿರುವುದು ವಿಶೇಷ. ರಿಷಬ್ ಶೆಟ್ಟಿ, ವಿಶ್ವಸಂಸ್ಥೆಯಲ್ಲಿ ಮಾತನಾಡಲಿರುವ ವಿಷಯವನ್ನು ಕರ್ನಾಟಕ ಬಿಜೆಪಿ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ರಿಷಬ್ ಶೆಟ್ಟಿ ಕನ್ನಡದಲ್ಲಿ ಮಾತನಾಡಲಿದ್ದಾರೆ ಎಂಬುದರ ಜೊತೆಗೆ ಮಾರ್ಚ್ 17 ರಂದು ತಮ್ಮ ಕಾಂತಾರ ಸಿನಿಮಾವನ್ನು ವಿಶ್ವಸಂಸ್ಥೆಯ ಪ್ರತಿನಿಧಿಗಳಿಗೆ ಪ್ರದರ್ಶನ ಸಹ ಮಾಡಲಿದ್ದಾರೆ ಎನ್ನಲಾಗಿದೆ.

ಕೆಲವು ದಿನಗಳ ಹಿಂದಷ್ಟೆ ನಟ ರಿಷಬ್ ಶೆಟ್ಟಿ, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಅರಣ್ಯ ಹಾಗೂ ಕಾಡಂಚಿನ ಜನರ ಸಮಸ್ಯೆಗಳ ನೀಗಿಸಿರೆಂದು ಮನವಿ ಮಾಡಿದ್ದರು. ಅವರು ಎದುರಿಸುತ್ತಿರುವ ಸಮಸ್ಯೆಗಳ ಪಟ್ಟಿಯನ್ನು ಮಾಡಿ ಸಿಎಂ ಅವರಿಗೆ ರಿಷಬ್ ನೀಡಿದ್ದರು.

ಕಾಂತಾರ ಸಿನಿಮಾದ ಚಿತ್ರೀಕರಣದಿಂದಾಗ ಅರಣ್ಯ ಹಾಗೂ ಕಾಡಂಚಿನ ಜನರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದೇನೆ ಅಲ್ಲದೆ ಅರಣ್ಯ ಇಲಾಖೆಯವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಮಾಹಿತಿ ಪಡೆದಿದ್ದೇನೆ ಆ ಸಮಸ್ಯೆಗಳ ಪರಿಷ್ಕಾರಕ್ಕೆ ಸಿಎಂ ಬೊಮ್ಮಾಯಿಯವರು ಕ್ರಮ ತೆಗೆದುಕೊಳ್ಳುವ ಭರವಸೆ ಇದೆ ಎಂದಿದ್ದರು. ಅಲ್ಲದೆ ಇಂಥಹಾ ಸಿಎಂ ನಮಗೆ ದೊರಕಿರುವುದು ನಮ್ಮ ಪುಣ್ಯವೆಂದು ಸಹ ಹೇಳಿದ್ದರು.

ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾವು ಕಳೆದ ವರ್ಷ ಸೆಪ್ಟೆಂಬರ್ 30 ರಂದು ಬಿಡುಗಡೆ ಆಗಿತ್ತು. ದೈವಗಳ ಕುರಿತಾದ ಕತೆಯನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ಅರಣ್ಯ ಇಲಾಖೆ ಹಾಗೂ ಕಾಡಂಚಿನಲ್ಲಿ ವಾಸಿಸುವ ಜನಗಳ ನಡುವಿನ ಸಂಘರ್ಷದ ಬಗ್ಗೆಯೂ ಚಿತ್ರಣವಿತ್ತು. ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ ದಾಖಲೆಗಳನ್ನು ಮಾಡಿದ್ದು ಕೇವಲ ಹದಿನೈದು ಕೋಟಿಯಲ್ಲಿ ನಿರ್ಮಾಣವಾದ ಸಿನಿಮಾ 400 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದು, ಕಿಶೋರ್, ಅಚ್ಯುತ್ ಕುಮಾರ್ ಅವರುಗಳು ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!