Rohit Sharma: ತಂಡದಲ್ಲಿರುವ ಪ್ರತಿಯೊಬ್ಬರ ಆಟಗಾರ ಕೂಡ ಫಿಟ್ ಆಗಿರಬೇಕು. ಅದರಲ್ಲೂ ಮುಖ್ಯವಾಗಿ ನಾಯಕ ಹೆಚ್ಚು ಫಿಟ್ನೆಸ್ನಿಂದ ಕೂಡಿರಬೇಕಾಗುತ್ತದೆ.
Feb 23, 2023 | 11:58 PM






ತಾಜಾ ಸುದ್ದಿ
TV9kannada Web Team | Edited By: Zahir PY
Updated on: Feb 23, 2023 | 11:58 PM
Feb 23, 2023 | 11:58 PM
ಟೀಮ್ ಇಂಡಿಯಾಗೆ ಆಯ್ಕೆ ಆಗಬೇಕಿದ್ದರೆ ಫಿಟ್‌ನೆಸ್ ಹೊಂದಿರುವುದು ಕಡ್ಡಾಯ ಎಂಬುದನ್ನು ಇತ್ತೀಚೆಗಷ್ಟೇ ಬಿಸಿಸಿಐ ಸ್ಪಷ್ಟಪಡಿಸಿತ್ತು. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಫಿಟ್‌ನೆಸ್ ಬಗ್ಗೆ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಪ್ರಶ್ನೆಗಳನ್ನೆತ್ತಿದ್ದಾರೆ.
ಸಂವಾದವೊಂದರಲ್ಲಿ ಮಾತನಾಡಿದ ಕಪಿಲ್ ದೇವ್, ರೋಹಿತ್ ಶರ್ಮಾ ಅವರನ್ನು ಟಿವಿಯಲ್ಲಿ ನೋಡಿದಾಗ ತೂಕ ಹೆಚ್ಚಿದ್ದಾರೆ ಎಂದೆನಿಸುತ್ತದೆ. ಹೀಗಾಗಿ ಅವರು ಫಿಟ್ನೆಸ್ನಲ್ಲಿ ಕಠಿಣ ಪರಿಶ್ರಮ ಹಾಕಬೇಕೆಂದು ಕಪಿಲ್ ದೇವ್ ತಿಳಿಸಿದ್ದಾರೆ.
ಇದೇ ವೇಳೆ ವಿರಾಟ್ ಕೊಹ್ಲಿಯ ಫಿಟ್‌ನೆಸ್ ಅನ್ನು ಶ್ಲಾಘಿಸಿರುವ ಕಪಿಲ್ ದೇವ್, ಕೊಹ್ಲಿ ಅದ್ಭುತವಾಗಿ ಫಿಟ್‌ನೆಸ್ ಕಾಯ್ದುಕೊಂಡಿದ್ದಾರೆ. ಅವರಿಂದಲೇ ಸ್ಪೂರ್ತಿ ಪಡೆದು ರೋಹಿತ್ ಶರ್ಮಾ ಫಿಟ್‌ನೆಸ್ ಬಗ್ಗೆ ಗಮನ ಕೊಡಬೇಕು ಎಂದರು.
ಏಕೆಂದರೆ ತಂಡದಲ್ಲಿರುವ ಪ್ರತಿಯೊಬ್ಬರ ಆಟಗಾರ ಕೂಡ ಫಿಟ್ ಆಗಿರಬೇಕು. ಅದರಲ್ಲೂ ಮುಖ್ಯವಾಗಿ ನಾಯಕ ಹೆಚ್ಚು ಫಿಟ್ನೆಸ್ನಿಂದ ಕೂಡಿರಬೇಕಾಗುತ್ತದೆ. ಕ್ಯಾಪ್ಟನ್ ಫಿಟ್‌ನೆಸ್ ಮಟ್ಟಕ್ಕೆ ಸಂಬಂಧಿಸಿದಂತೆ ಮಾರ್ಕ್‌ಗೆ ತಲುಪದಿದ್ದರೆ ಅದು ನಾಚಿಕೆಗೇಡಿನ ಸಂಗತಿ. ಹೀಗಾಗಿ ರೋಹಿತ್ ತಮ್ಮ ಫಿಟ್‌ನೆಸ್‌ಗೆ ಸ್ವಲ್ಪ ಕಠಿಣ ಪರಿಶ್ರಮ ಹಾಕಬೇಕಾಗಿದೆ ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟರು.
ರೋಹಿತ್ ಉತ್ತಮ ಬ್ಯಾಟರ್ ಎಂಬುದನ್ನು ಈಗಲೂ ನಾನು ಒಪ್ಪುತ್ತೇನೆ. ಆದರೆ ಅವರ ದೇಹ ತೂಕ ಫಿಟ್‌ನೆಸ್ ಇಲ್ಲ ಎಂಬುದನ್ನು ತೋರಿಸುತ್ತದೆ. ಹೀಗಾಗಿಯೇ ನಾನು ಅವರು ಫಿಟ್ ಆಗಬೇಕೆಂದು ಬಯಸುತ್ತೇನೆ.
. ನೀವು ವಿರಾಟ್ ಕೊಹ್ಲಿ ಅವರನ್ನು ನೋಡಿ, ಆತನನ್ನು ನೋಡಿದಾಗೆಲ್ಲಾ, ಇದಪ್ಪಾ ಫಿಟ್‌ನೆಸ್ ಅಂದರೆ ಅಂದುಕೊಳ್ಳುತ್ತೀವಿ. ಅಂತಹ ಫಿಟ್‌ನೆಸ್ ಟೀಮ್ ಇಂಡಿಯಾ ನಾಯಕ ಕೂಡ ಹೊಂದಿರಬೇಕೆಂದು ಕಪಿಲ್ ದೇವ್ ತಿಳಿಸಿದರು.