2.1 C
Munich
Monday, March 27, 2023

Salman Khan Hookup step in Kisi Ka Bhai Kisi Ki Jaan Song Naiyo Lagda Song trolled | ‘ಇದು ಡ್ಯಾನ್ಸ್ ಅಲ್ಲ ವ್ಯಾಯಾಮ’; ಡ್ಯಾನ್ಸ್ ಮಾಡಲು ಹೋಗಿ ನಗೆಪಾಟಲಿಗೀಡಾದ ಸಲ್ಮಾನ್ ಖಾನ್

ಓದಲೇಬೇಕು

Naiyo Lagda Song: ‘ಬಿಗ್ ಬಾಸ್ ಹಿಂದಿ ಸೀಸನ್ 16’ ಫಿನಾಲೆಯಲ್ಲಿ  ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಚಿತ್ರದ ಮೊದಲ ಹಾಡು ‘ನೈಯೋ ಲಗ್ದಾ..’ ರಿಲೀಸ್ ಆಗಿದೆ. ಪೂಜಾ ಹೆಗ್ಡೆ ಜತೆ ಸಲ್ಲು ಹೆಜ್ಜೆ ಹಾಕಿದ್ದಾರೆ.

ಸಲ್ಮಾನ್ ಖಾನ್

ಇತ್ತೀಚೆಗೆ ಟ್ರೋಲರ್ಸ್​ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಸೋಶಿಯಲ್ ಮೀಡಿಯಾ ವ್ಯಾಪ್ತಿ ಹಿರಿದಾದಂತೆ ಅವರಿಗೆ ಹೆಚ್ಚು ಅವಕಾಶ ಸಿಗುತ್ತಿದೆ. ಹೀಗಾಗಿ ಸಾಮಾನ್ಯರಿಂದ ಹಿಡಿದು ಸ್ಟಾರ್ಸ್​ವರೆಗೆ ಎಲ್ಲರೂ ಟ್ರೋಲ್ ಆಗುತ್ತಾರೆ. ಈಗ ಸಲ್ಮಾನ್ ಖಾನ್ ಅವರ ಸರದಿ. ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಈ ಹಾಡಿನಲ್ಲಿ ಸಲ್ಮಾನ್ ಖಾನ್ (Salman Khan) ಅವರ ಸ್ಟೆಪ್ ನೋಡಿ ಫ್ಯಾನ್ಸ್ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ‘ಇದು ಡ್ಯಾನ್ಸ್ ಅಲ್ಲ ವ್ಯಾಯಾಮ’ ಎಂದು ಅನೇಕರು ಟೀಕೆ ಮಾಡಿದ್ದಾರೆ.

‘ಬಿಗ್ ಬಾಸ್ ಹಿಂದಿ ಸೀಸನ್ 16’ ಫಿನಾಲೆಯಲ್ಲಿ  ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಚಿತ್ರದ ಮೊದಲ ಹಾಡು ‘ನೈಯೋ ಲಗ್ದಾ..’ ರಿಲೀಸ್ ಆಗಿದೆ. ಪೂಜಾ ಹೆಗ್ಡೆ ಜತೆ ಸಲ್ಲು ಹೆಜ್ಜೆ ಹಾಕಿದ್ದಾರೆ. ಲಡಾಕ್​ನಲ್ಲಿ ಈ ಸಾಂಗ್​ನ ಶೂಟಿಂಗ್ ನಡೆದಿದೆ. ಈ ಹಾಡಿನಲ್ಲಿ ಸಲ್ಮಾನ್ ಖಾನ್ ಹಾಕಿರುವ ಸ್ಟೆಪ್ಸ್ ನಗೆಪಾಟಲಿಗೀಡಾಗಿದೆ. ಅವರನ್ನು ಟೀಕೆ ಮಾಡುವ ಕೆಲಸ ಆಗುತ್ತಿದೆ. ‘ಲೆಗ್ ವರ್ಕೌಟ್ ಸ್ಟೆಪ್​’ ಎಂದು ಅನೇಕರು ಟೀಕೆ ಮಾಡಿದ್ದಾರೆ.

‘ನೈಯೋ ಲಗ್ದಾ’ ಹಾಡನ್ನು ಕಮಾಲ್ ಖಾನ್ ಹಾಗೂ ಪಲಕ್ ಮುಚ್ಚಲ್ ಹಾಡಿದ್ದಾರೆ. ಹಿಮೇಶ್ ರೇಷ್ಮಿಯಾ ಅವರು ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡಿಗೆ ಈಗ ಟ್ರೋಲ್ ಕಾಟ ಶುರುವಾಗಿದ್ದು, ಸಿನಿಮಾ ಮೇಲೆ ಇದು ನೆಗೆಟಿವ್ ಪರಿಣಾಮ ಬೀರಿದರೂ ಅಚ್ಚರಿ ಏನಿಲ್ಲ.

‘ಸನ್ನಿ ಡಿಯೋಲ್ ಡ್ಯಾನ್ಸ್​ಗೆ ಯಾರಾದರೂ ಸ್ಪರ್ಧೆ ನೀಡುತ್ತಾರೆ ಎಂದಾದರೆ ಅದು ಸಲ್ಮಾನ್ ಖಾನ್ ಮಾತ್ರ’ ಎಂದು ಕೆಲವರು ಟೀಕೆ ಮಾಡಿದ್ದಾರೆ. ‘ಯಾವುದೇ ಸ್ಟೆಪ್ ಸಿಕ್ಕಿಲ್ಲ ಎಂದರೆ ಸಲ್ಮಾನ್ ಖಾನ್ ಅವರು ಲೆಗ್ ವರ್ಕೌಟ್ ಮಾಡುತ್ತಾರೆ. ಅದನ್ನೇ ಡ್ಯಾನ್ಸ್ ಸ್ಟೆಪ್ ಎಂದು ಕರೆಯಲಾಗುತ್ತದೆ’ ಎಂಬುದಾಗಿ ಕೆಲವರು ಟೀಕೆ ಮಾಡಿದ್ದಾರೆ. ಇನ್ನೂ ಕೆಲವರು ‘ಜಿಮ್​ನಲ್ಲಿ ನನ್ನ ಲೆಗ್​ ವರ್ಕೌಟ್ ಡೇ’ ಎಂದು ಟ್ರೋಲ್ ಮಾಡಿದ್ದಾರೆ.

ಕೆಲವರು ಅಕ್ಷಯ್ ಕುಮಾರ್ ಅವರನ್ನು ಎಳೆದು ತಂದಿದ್ದಾರೆ. ‘ಗಂಭೀರ ದೃಶ್ಯಗಳಲ್ಲಿ ಕಾಮಿಡಿ ಮಾಡಿ ಆ ದೃಶ್ಯವನ್ನು ಹಾಳು ಮಾಡೋದು ಅಕ್ಷಯ್ ಕುಮಾರ್. ಅದೇ ರೀತಿ ಡ್ಯಾನ್ಸ್ ಜಾಗದಲ್ಲಿ ಜಿಮ್ ಮಾಡಿ ಆ ಹಾಡನ್ನು ಕೆಡಿಸೋದು ಸಲ್ಮಾನ್ ಖಾನ್’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಹೊಸ ಚಿತ್ರಕ್ಕಾಗಿ ಒಂದಾದ ಸಲ್ಮಾನ್ ಖಾನ್-ಆಮಿರ್​ ಖಾನ್; ಬಿಗ್ ಬಜೆಟ್ ಚಿತ್ರಕ್ಕೆ ಶೀಘ್ರವೇ ಮುಹೂರ್ತ? 

‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಚಿತ್ರವನ್ನು ಫರ್ಹದ್ ಸಮ್ಜಿ ಅವರು ನಿರ್ದೇಶನ ಮಾಡಿದ್ದಾರೆ. ಸಲ್ಮಾನ್, ಪೂಜಾ ಹೆಗ್ಡೆ ಮಾತ್ರವಲ್ಲದೆ ಶೆಹನಾಜ್ ಗಿಲ್​, ದಗ್ಗುಬಾಟಿ ವೆಂಕಟೇಶ್​, ಪಲಕ್ ತಿವಾರಿ, ಆಯುಷ್ ಶರ್ಮಾ ಮೊದಲಾದವರು ನಟಿಸಿದ್ದಾರೆ. ಈ ವರ್ಷ ಈದ್​ಗೆ ಈ ಚಿತ್ರ ರಿಲೀಸ್ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!