7.4 C
Munich
Thursday, March 9, 2023

Samantha Ruth Prabhu shares her workout video amid recovering from Myositis | Samantha: ಸಮಂತಾ ಆರೋಗ್ಯ ಇಷ್ಟೊಂದು ಸುಧಾರಿಸಿತಾ? ನಟಿಯ ವರ್ಕೌಟ್​ ವಿಡಿಯೋ ನೋಡಿದವರಿಗೆ ಅಚ್ಚರಿ

ಓದಲೇಬೇಕು

Samantha Ruth Prabhu | Samantha Gym Video: ಸಮಂತಾ ಅವರು ಹಂಚಿಕೊಂಡಿರುವ ಈ ವಿಡಿಯೋ ವೈರಲ್​ ಆಗಿದೆ. 10 ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ.​ 3 ಸಾವಿರಕ್ಕೂ ಹೆಚ್ಚು ಕಮೆಂಟ್​ಗಳು ಬಂದಿವೆ.

ಸಮಂತಾ ವರ್ಕೌಟ್

ಚಿತ್ರರಂಗದಲ್ಲಿ ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರಿಗೆ ಅವಕಾಶಗಳು ಹೇರಳವಾಗಿ ಬರಲು ಆರಂಭಿಸಿದಾಗಲೇ ಆರೋಗ್ಯ ಕೈ ಕೊಟ್ಟಿತು. ಇದರಿಂದ ಅವರ ವೃತ್ತಿಬದುಕಿನ ಓಟ ಕುಂಠಿತವಾಯಿತು. Myositis ಕಾಯಿಲೆಯಿಂದ ಅವರು ಬಳಲುತ್ತಿರುವುದರಿಂದ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಕಡಿಮೆ ಆಯಿತು. ಚಿಕಿತ್ಸೆಗಾಗಿ ಅವರು ತುಂಬ ದಿನಗಳ ಕಾಲ ಬ್ರೇಕ್​ ಪಡೆದುಕೊಂಡರು. ಆದರೆ ಈಗ ಸಮಂತಾ (Samantha) ಅವರು ಮತ್ತೆ ಮೈಗೊಡವಿ ನಿಂತಿದ್ದಾರೆ. ಮತ್ತೆ ಮೊದಲಿನಂತೆ ಸಿನಿಮಾ, ವೆಬ್​ ಸೀರಿಸ್​ಗಳಲ್ಲಿ ಬ್ಯುಸಿ ಆಗಲಿದ್ದಾರೆ. ಅದಕ್ಕಾಗಿ ಜಿಮ್​ನಲ್ಲಿ ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ. ಸಮಂತಾ ವರ್ಕೌಟ್​ ಮಾಡುತ್ತಿರುವ ಹೊಸ ವಿಡಿಯೋ (Samantha Workout Video) ವೈರಲ್​ ಆಗಿದೆ. ಅದನ್ನು ಕಂಡು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Myositis ಕಾಯಿಲೆಯಿಂದ ಚೇತರಿಸಿಕೊಂಡಿರುವ ಸಮಂತಾ ರುತ್​ ಪ್ರಭು ಅವರು ಈಗ ಫಿಟ್ನೆಸ್​ ಕಡೆಗೆ ಗಮನ ಹರಿಸಿದ್ದಾರೆ. ಹೆಚ್ಚು ಸಮಯವನ್ನು ಜಿಮ್​ನಲ್ಲಿ ಕಳೆಯುತ್ತಿದ್ದಾರೆ. ‘ನಾವು ಇನ್ನಷ್ಟು ಸದೃಢರಾಗುವ ವರ್ಷ 2023’ ಎಂಬ ಕ್ಯಾಪ್ಷನ್​ನೊಂದಿಗೆ ಅವರು ಹೊಸ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ‘ಈ ರೀತಿ ಮಾಡಲು ನೀವು ಪ್ರಯತ್ನಿಸುತ್ತೀರಾ?’ ಎಂದು ಅವರು ಅಭಿಮಾನಿಗಳಿಗೆ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Samantha: ಮುಂಬೈನಲ್ಲಿ 3 ಬೆಡ್​ ರೂಂ ಮನೆ ಖರೀದಿಸಿದ ನಟಿ ಸಮಂತಾ; ಇದರ ಬೆಲೆ ಎಷ್ಟು?

ಇದನ್ನೂ ಓದಿ



ಸಮಂತಾ ಅವರು ಹಂಚಿಕೊಂಡಿರುವ ಈ ವಿಡಿಯೋ ವೈರಲ್​ ಆಗಿದೆ. 10 ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ.​ 3 ಸಾವಿರಕ್ಕೂ ಹೆಚ್ಚು ಕಮೆಂಟ್​ಗಳು ಬಂದಿವೆ. 88 ಲಕ್ಷಕ್ಕೂ ಹೆಚ್ಚು ಬಾರಿ ಇದು ವೀಕ್ಷಣೆ ಕಂಡಿದೆ. ಅನೇಕರಿಗೆ ಸಮಂತಾ ಅವರು ಮಾದರಿ ಆಗಿದ್ದಾರೆ. ವೈಯಕ್ತಿಕ ಜೀವನದಲ್ಲಿ ಎಷ್ಟೇ ಅಡೆತಡೆಗಳು ಬಂದರೂ ಗುರಿ ಮರೆಯಬಾರದು ಎಂಬ ವಿಚಾರದಲ್ಲಿ ಸಮಂತಾ ಸ್ಫೂರ್ತಿ ಆಗಿದ್ದಾರೆ ಎಂದು ಹಲವರು ಕಮೆಂಟ್​ ಮಾಡುತ್ತಿದ್ದಾರೆ.

ಸಮಂತಾ ನಟನೆಯ ‘ಶಾಕುಂತಲಂ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಈ ಚಿತ್ರ ರಿಲೀಸ್​ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ರಿಲೀಸ್​ ದಿನಾಂಕ ಮುಂದೂಡಲಾಗಿತ್ತು. ಏಪ್ರಿಲ್​ 14ರಂದು ‘ಶಾಕುಂತಲಂ’ ತೆರೆಕಾಣಲಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಸಮಂತಾ ತೊಡಗಿಕೊಳ್ಳಲಿದ್ದಾರೆ. ಅಭಿಮಾನಿಗಳು ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಲ್ಲು ಅರ್ಜುನ್​ ಪುತ್ರಿ ಅಲ್ಲು ಅರ್ಹಾ ಕೂಡ ಇದರಲ್ಲಿ ನಟಿಸಿರುವುದು ವಿಶೇಷ.

ಇದನ್ನೂ ಓದಿ: Samantha: ವೇದಿಕೆ ಮೇಲೆ ಎಲ್ಲರ ಎದುರು ಕಣ್ಣೀರು ಹಾಕಿದ ಸಮಂತಾ ರುತ್​ ಪ್ರಭು; ವಿಡಿಯೋ ವೈರಲ್​

ವಿಜಯ್​ ದೇವರಕೊಂಡ ಜೊತೆ ‘ಖುಷಿ’ ಸಿನಿಮಾದಲ್ಲಿ ಸಮಂತಾ ನಟಿಸುತ್ತಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ಆ ಸಿನಿಮಾದ ಕೆಲಸಗಳು ವಿಳಂಬ ಆಗಿದ್ದವು. ಈಗ ಸಮಂತಾ ಚೇತರಿಸಿಕೊಂಡಿರುವುದರಿಂದ ‘ಖುಷಿ’ ಚಿತ್ರದ ಶೂಟಿಂಗ್​ನಲ್ಲಿ ಅವರು ಶೀಘ್ರವೇ ಭಾಗಿಯಾಗಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!