ಸಂಗೀತಾ ಅವರಿಗೆ 2022 ವಿಶೇಷವಾಗಿತ್ತು. ರಕ್ಷಿತ್ ಶೆಟ್ಟಿ ಜೊತೆ ಅವರು ನಟಿಸಿದ ‘777 ಚಾರ್ಲಿ’ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಅವರ ಜನಪ್ರಿಯತೆ ಹೆಚ್ಚಿತು.
ಸಂಗೀತಾ-ರಮೇಶ್
ರಮೇಶ್ ಅರವಿಂದ್ (Ramesh Aravind) ನಟಿಸಿ, ನಿರ್ದೇಶಿಸುತ್ತಿರುವ ‘ಶಿವಾಜಿ ಸುರತ್ಕಲ್ 2’ ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿವೆ. ಈಗ ಈ ಚಿತ್ರಕ್ಕೆ ಸಂಗೀತಾ ಶೃಂಗೇರಿ ಸೇರ್ಪಡೆ ಆಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಅಂದಹಾಗೆ, ಅವರು ಈ ಚಿತ್ರದಲ್ಲಿ ಯಾವುದೇ ಪಾತ್ರ ಮಾಡುತ್ತಿಲ್ಲ. ಬದಲಿಗೆ ವಿಶೇಷ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಈ ವಿಚಾರ ಕೇಳಿ ಸಂಗೀತಾ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಸಂಗೀತಾ ಅವರಿಗೆ 2022 ವಿಶೇಷವಾಗಿತ್ತು. ರಕ್ಷಿತ್ ಶೆಟ್ಟಿ ಜೊತೆ ಅವರು ನಟಿಸಿದ ‘777 ಚಾರ್ಲಿ’ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಅವರ ಜನಪ್ರಿಯತೆ ಹೆಚ್ಚಿತು. ಅದೇ ವರ್ಷ ರಿಲೀಸ್ಆದ ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತಾ ನಟನೆಯ ‘ಲಕ್ಕಿ ಮ್ಯಾನ್’ ಚಿತ್ರ ಮೆಚ್ಚುಗೆ ಪಡೆಯಿತು. ಸದ್ಯ ಅವರು ‘ಮಾರಿಗೋಲ್ಡ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಿರುವಾಗಲೇ ಅವರಿಗೆ ಡ್ಯಾನ್ಸ್ ಆಫರ್ ಸಿಕ್ಕಿದೆ.
ಮೊದಲಿಗೆ ಹೋಲಿಕೆ ಮಾಡಿದರೆ ಇತ್ತೀಚೆಗೆ ರಮೇಶ್ ಅರವಿಂದ್ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ತಮ್ಮ ಪಾಲಿಗೆ ಬಂದ ಎಲ್ಲ ಚಿತ್ರಗಳನ್ನೂ ಅವರು ಒಪ್ಪಿಕೊಳ್ಳುತ್ತಿಲ್ಲ. 2018ರಿಂದ ಈಚೆಗೆ ಅವರ ನಟನೆಯ ಬೆರಳೆಣಿಕೆ ಸಿನಿಮಾಗಳು ಮಾತ್ರ ರಿಲೀಸ್ ಆಗಿವೆ. 2020ರಲ್ಲಿ ‘ಶಿವಾಜಿ ಸುರತ್ಕಲ್’ ಸಿನಿಮಾ ತೆರೆಗೆ ಬಂದು ಮೆಚ್ಚುಗೆ ಪಡೆದುಕೊಂಡಿತು. ಈಗ ಈ ಚಿತ್ರದ ಸೀಕ್ವೆಲ್ ಸಿದ್ಧಗೊಂಡಿದೆ. ಈ ಚಿತ್ರದಲ್ಲಿ ಸಂಗೀತಾ ಸ್ಪೆಷಲ್ ಹಾಡಿನಲ್ಲಿ ಡ್ಯಾನ್ಸ್ ಮಾಡಲಿದ್ದಾರೆ.
ಸಂಗೀತಾ ಶೃಂಗೇರಿ ಅವರು ಕಿರುತೆರೆ ಲೋಕದಿಂದ ಹಿರಿತೆರೆಗೆ ಬಂದವರು. ಅವರು ಅಳೆದು ತೂಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ಶಿವಾಜಿ ಸುರತ್ಕಲ್ 2’ ಚಿತ್ರ ಒಪ್ಪಿಕೊಂಡಿದ್ದು, ಅವರು ಹೆಜ್ಜೆ ಹಾಕಿದ ಹಾಡು ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಇದನ್ನೂ ಓದಿ: ‘ಶಿವಾಜಿ ಸುರತ್ಕಲ್ 2’ ತಂಡದೊಂದಿಗೆ ರಮೇಶ್ ಅರವಿಂದ್ ಬರ್ತ್ಡೇ ಆಚರಣೆ
ರಮೇಶ್ ಅರವಿಂದ್ ಅವರು ‘ಶಿವಾಜಿ ಸುರತ್ಕಲ್ 2’ ಚಿತ್ರದ ಜೊತೆಗೆ ‘ವೀಕೆಂಡ್ ವಿತ್ ರಮೇಶ್’ ಹೊಸ ಸೀಸನ್ಗಾಗಿ ರೆಡಿ ಆಗುತ್ತಿದ್ದಾರೆ. ಇದರ ಪ್ರೋಮೋ ಈಗಾಗಲೇ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಇದರ ಡೇಟ್ ಇನ್ನಷ್ಟೇ ತಿಳಿಯಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ