11.2 C
Munich
Tuesday, March 21, 2023

Santhosh Kumar, 34, was arrested Saturday for a hoax bomb threat warning police of explosions | Viral News: ಜೈಲಿನಲ್ಲಿ ಮೂರು ಹೊತ್ತು ಊಟ ಸಿಗುತ್ತೇ ಎಂದು ಈತ ಮಾಡಿದ ಕೆಲಸ ಏನು ಗೊತ್ತಾ?

ಓದಲೇಬೇಕು

ತಮಿಳುನಾಡಿನ ನಿರುದ್ಯೋಗಿಯೋರ್ವ ಮೂರು ಹೊತ್ತಿನ ಊಟಕ್ಕಾಗಿ ಜೈಲು ಸೇರಲು ಸಕ್ಕತ್ತ್​​ ಪ್ಲಾನ್​​ ಮಾಡಿದ್ದಾನೆ. ಕಡೆಗೂ ಆತನ ಆಸೆ ನೆರವೇರಿದೆ.

ತನ್ನ ಆಸೆಯಂತೆ ಜೈಲು ಸೇರಿದ ವ್ಯಕ್ತಿ

ತಮಿಳುನಾಡಿನ ನಿರುದ್ಯೋಗಿಯೋರ್ವ ಮೂರು ಹೊತ್ತಿನ ಊಟಕ್ಕಾಗಿ ಜೈಲು ಸೇರಲು ಸಕ್ಕತ್ತ್​​ ಪ್ಲಾನ್​​ ಮಾಡಿದ್ದಾನೆ. ಕಡೆಗೂ ಆತನ ಆಸೆ ನೆರವೇರಿದೆ. ಈತ ಮಾಡಿದ ಕೆಲಸಕ್ಕೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೂರು ಹೊತ್ತು ಊಟ, ಆರಾಮ ಜೀವನ ನಡೆಸಲು ಜೈಲು ಒಂದು ಉತ್ತಮ ತಾಣ ಎಂದು ಯೋಚಿಸಿದ್ದ ತಮಿಳುನಾಡು ಮೂಲದ 34 ವರ್ಷದ ಸಂತೋಷ್ ಕುಮಾರ್ , ತಾನು ಹೇಗಾದರೂ ಪೊಲೀಸರ ಕೈಯಲ್ಲಿ ಬಂಧಿಯಾಗಬೇಕೆಂದು ಹಲವು ದಿನಗಳ ನಂತರ ಪ್ಲಾನ್​​ ಮಾಡಿ, ಇದೀಗಾ ಪೊಲೀಸರ ಅತಿಥಿಯಾಗಿದ್ದಾನೆ. ಅಷ್ಟಕ್ಕೂ ಈತ ಮಾಡಿದ ಕೆಲಸ ಏನು ಗೊತ್ತಾ ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ತಮಿಳುನಾಡಿನ ಕೊಯಂಬತ್ತೂರಿನ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿ ಬಾಂಬ್​​​ ಇಟ್ಟಿರುವ ಬಗ್ಗೆ ಈತ ಚೆನ್ನೈನ ಕಂಟ್ರೋಲ್​​ ರೂಮ್​ಗೆ​ ಕರೆ ಮಾಡಿದ್ದಾನೆ. ಬಾಂಬ್​​ ಸ್ಫೋಟದ ಬಗ್ಗೆ ಸುಳ್ಳು ಸುದ್ದಿ ಹರಡಿಸಿರುವುದರಿಂದ ಶನಿವಾರ ಇತನನ್ನು ಬಂಧಿಸಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ಇದನ್ನೂ ಓದಿ: ವಾರದ 7 ದಿನದಲ್ಲಿ ಮೂರು ದಿನ ಅವಳ ಜತೆ, ಮೂರು ದಿನ ಇವಳ ಜತೆ, ಬಾಕಿ ಒಂದು ದಿನ?

ಕುಮಾರ್ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಮತ್ತು 507 ಅಡಿಯಲ್ಲಿ ಆರೋಪ ಹೊರಿಸಲಾಯಿತು. ಆರೋಪಿಯ ವಿಚಾರಣೆಯ ನಂತರ, ಶಂಕಿತನು ತಾನು ನಿರುದ್ಯೋಗಿ ಮತ್ತು ಜೀವನೋಪಾಯಕ್ಕಾಗಿ ಹೆಣಗಾಡುತ್ತಿರುವುದನ್ನು ವಿವರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗಾ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!