3.4 C
Munich
Thursday, March 2, 2023

Saurabh Shukla Tells How He Made Ranabir Kapoor To Drink Cheap Alcohol | 30 ಸಾವಿರ ಬೆಲೆಯ ರಮ್ ಕುಡಿಯುವ ಬಾಲಿವುಡ್​ ಸ್ಟಾರ್​ಗೆ 150 ರುಪಾಯಿಯ ಡ್ರಿಂಕ್ಸ್ ಕುಡಿಸಿದ ನಟ!

ಓದಲೇಬೇಕು

30 ಸಾವಿರ ಬೆಲೆಯ ರಮ್ ಕುಡಿಯುವ ಬಾಲಿವುಡ್​ ಸ್ಟಾರ್​ಗೆ 150 ರುಪಾಯಿಯ ಡ್ರಿಂಕ್ಸ್ ಕುಡಿಸಿದ ನಟ!

ಸೌರಭ್ ಶುಕ್ಲ

ದಿನಕ್ಕೊಂದು ಪಾರ್ಟಿಗಳು ನಡೆವ ಬಾಲಿವುಡ್​ನಲ್ಲಿ ಮದ್ಯ ಮಾಮೂಲು. ಹಲವು ಸಿನಿಮಾ ನಟ-ನಟಿಯರು ಮದ್ಯ ಸೇವಿಸುತ್ತಾರೆಂಬುದು ಗುಟ್ಟೇನೂ ಅಲ್ಲ. ಒಬ್ಬೊಬ್ಬರದ್ದು ಒಂದೊಂದು ಬ್ರ್ಯಾಂಡ್. ಅದರಲ್ಲಿಯೂ ಬಾಲಿವುಡ್​ನ (Bollywood) ಸ್ಟಾರ್​ಗಳು ತಮ್ಮ ಐಶಾರಾಮಿ ಜೀವನ ಶೈಲಿಗೆ ಹೊಂದುವಂತೆ ದುಬಾರಿ ಮದ್ಯವನ್ನೇ ಸೇವಿಸುತ್ತಾರೆ. ನಟ ರಣಬೀರ್ ಕಪೂರ್ (Ranbir Kapoor) ಸಹ ಹಾಗೆಯೇ. ತಾವೊಬ್ಬ ಆಲ್ಕೋಹಾಲಿಕ್ ಎಂಬ ವಿಷಯವನ್ನು ಈ ಹಿಂದೆ ರಣ್ಬೀರ್ ಹೇಳಿಕೊಂಡಿದ್ದಾರೆ. ಅವರಿಗೆ ವಿಪರೀತ ಮದ್ಯದ ಚಟ. ದುಬಾರಿ ರಮ್ ಹಾಗೂ ವಿಸ್ಕಿಗಳನ್ನು ರಣಬೀರ್ ಸೇವಿಸುತ್ತಾರೆ. ಆದರೆ ಅವರ ಸಹನಟರೊಬ್ಬರು ಸಾಮಾನ್ಯರು ಕುಡಿಯುವ ತೀರ ಕಡಿಮೆ ಬೆಲೆಯ ರಮ್ ಅನ್ನ ರಣಬೀರ್​ಗೆ ಕುಡಿಸಿದ್ದರಂತೆ .

ಹಿಂದಿ ಚಿತ್ರರಂಗದಲ್ಲಿ ಹಲವು ವರ್ಷಗಳಿಂದಲೂ ಪೋಷಕ ಪಾತ್ರಗಳು, ಹಾಸ್ಯ, ವಿಲನ್ ಪಾತ್ರಗಳಲ್ಲಿ ನಟಿಸುತ್ತಾ ಬಂದಿರುವ ಸೌರಭ್ ಶುಕ್ಲ, ಇತ್ತೀಚೆಗಿನ ಸಂದರ್ಶನವೊಂದರಲ್ಲಿ ತಾವು, ರಣಬೀರ್ ಕಪೂರ್ ಅತಿ ಕಡಿಮೆ ಬೆಲೆಯ ಸಸ್ತಾ ಡ್ರಿಂಕ್ಸ್ ಕುಡಿಸಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.

ಸೌರಭ್ ಶುಕ್ಲಾಗೆ ಸಂದರ್ಶಕ ನೀವು ಡ್ರಿಂಕ್ಸ್ ಮಾಡ್ತೀರ? ಯಾವ ಬ್ರ್ಯಾಂಡ್ ಕುಡಿಯುತ್ತೀರ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸೌರಭ್, ನಾನು ಓಲ್ಡ್ ಮಾಂಕ್ ಹಾಗೂ ಕೋಕ್ ಕುಡಿಯುತ್ತೀನಿ. ಅದು ನನಗೆ ಇಷ್ಟವಾಗುತ್ತದೆ. ಸುಲಭವಾಗಿ ಸಿಗುತ್ತದೆ. ಬಹಳ ಕಡಿಮೆ ಬೆಲೆ ಸಹ. ನಾನು ಅತ್ಯಂತ ದುಬಾರಿ ರಮ್ ಅನ್ನು ಸಹ ಕುಡಿದಿದ್ದೀನಿ ಎಂದಿದ್ದಾರೆ.

ದುಬಾರಿ ಎಂದರೆ ಎಷ್ಟು ದುಬಾರಿ ರಮ್ ಕುಡಿದಿದ್ದೀರ ಎಂಬ ಪ್ರಶ್ನೆಗೆ, ನಾನು 30 ಸಾವಿರ ಬೆಲೆಯ ರಮ್ ಕುಡಿದಿದ್ದೀನಿ. ಅದನ್ನು ನನಗೆ ಕುಡಿಸಿದ್ದು ನಟ ರಣಬೀರ್ ಕಪೂರ್. ಒಮ್ಮೆ ನಾವು ಲೆಹ್​ನಲ್ಲಿದ್ದೆವು. ನಾನು ಓಲ್ಡ್ ಮಾಂಕ್ ಕುಡಿಯುತ್ತಿದ್ದೆ. ಆಗ ಬಂದ ರಣಬೀರ್ ಏನು ಕುಡಿಯುತ್ತಿದ್ದೀರಿ ಎಂದು ಕೇಳಿದ ನಾನು ಓಲ್ಡ್ ಮಾಂಕ್ ಕುಡಿಯುತ್ತಿದ್ದೀನಿ ಎಂದೆ. ಆಗ ರಣಬೀರ್, ಇರಿ ನಾನು ಒಳ್ಳೆಯ ರಮ್ ಕುಡಿಸುತ್ತೇನೆ ಎಂದು ತರಿಸಿದ ಎಂದು ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ ಸೌರಭ್.

ರಣಬೀರ್ ಕಪೂರ್, 30 ಸಾವಿರ ಬೆಲೆಯ ರಮ್ ಬಾಟಲಿ ತರಿಸಿದ ನಾವಿಬ್ಬರು ಚೆನ್ನಾಗಿ ಕುಡಿದೆವು. ಮೊದಲೇ ಆ ಬಾಟಲಿಯಲ್ಲಿ ಸ್ವಲ್ಪ ಖಾಲಿಯಾಗಿತ್ತು. ಹಾಗಾಗಿ ಇಬ್ಬರಿಗೂ ಇನ್ನು ಸ್ವಲ್ಪ ರಮ್ ಬೇಕು ಎನಿಸಿತು. ಆಗ ನಾನು ರಣಬೀರ್ ಕಪೂರ್​ಗೆ ಓಲ್ಡ್ ಮಾಂಕ್ ಕುಡಿಸಿದೆ. ಅದು ಅವನಿಗೆ ಇಷ್ಟವಾಯಿತು ಎಂದಿದ್ದಾರೆ ಸೌರಭ್ ಶುಕ್ಲ.

ಇದೇ ಸಂದರ್ಶನದಲ್ಲಿ ಸೌರಭ್ ಮತ್ತೊಂದು ವಿಷಯ ಹೇಳಿದ್ದಾರೆ. ಆ 30 ಸಾವಿರ ಬೆಲೆಯ ರಮ್ ಅನ್ನು ರಣಬೀರ್ ಕಪೂರ್​ಗೆ ಮೊದಲು ಕುಡಿಸಿದ್ದು ತೆಲುಗು ಸ್ಟಾರ್ ನಟ ನಾಗಾರ್ಜುನ ಅಂತೆ. ಆ ರಮ್ ಬಹಳ ಚೆನ್ನಾಗಿತ್ತು ಎಂದು ಸೌರಭ್ ನೆನಪಿಸಿಕೊಂಡಿದ್ದಾರೆ. ಅಂದಹಾಗೆ ಸೌರಭ್ ಶುಕ್ಲ, ಕನ್ನಡದ ಕೇರ್ ಆಫ್ ಫುಟ್​ಪಾತ್ ಸಿನಿಮಾದಲ್ಲಿಯೂ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

Hello world

error: Content is protected !!