7.5 C
Munich
Monday, March 20, 2023

Scotland mother gets baby son’s remains from hospital after 48 years | ಸ್ಕಾಟ್ಲೆಂಡ್​ನಲ್ಲಿ ಹೀಗೊಂದು ಘಟನೆ; ಮಗು ಸತ್ತು 48 ವರ್ಷಗಳ ಬಳಿಕ ಮೃತದೇಹದ ಅವಶೇಷ ಪಡೆದ ತಾಯಿ!

ಓದಲೇಬೇಕು

ಮಹಿಳೆಯೊಬ್ಬರು ಸತತ 48 ವರ್ಷಗಳ ಕಾನೂನು ಹೋರಾಟದ ನಂತರ ತಮ್ಮ ಮಗುವಿನ ಮೃತದೇಹದ ಅವಶೇಷವನ್ನು ಪಡೆದ ಅಪರೂಪದಲ್ಲೇ ಅಪರೂಪದ ಪ್ರಕರಣ ಸ್ಕಾಟ್ಲೆಂಡ್​ನಲ್ಲಿ (Scotland) ನಡೆದಿದೆ.

ಸಾಂದರ್ಭಿಕ ಚಿತ್ರ

ಲಂಡನ್: ಮಹಿಳೆಯೊಬ್ಬರು ಸತತ 48 ವರ್ಷಗಳ ಕಾನೂನು ಹೋರಾಟದ ನಂತರ ತಮ್ಮ ಮಗುವಿನ ಮೃತದೇಹದ ಅವಶೇಷವನ್ನು ಪಡೆದ ಅಪರೂಪದಲ್ಲೇ ಅಪರೂಪದ ಪ್ರಕರಣ ಸ್ಕಾಟ್ಲೆಂಡ್​ನಲ್ಲಿ (Scotland) ನಡೆದಿರುವುದಾಗಿ ಬ್ರಿಟನ್​​ನ ಮಾಧ್ಯಮವೊಂದು ವರದಿ ಮಾಡಿದೆ. ಸ್ಕಾಟ್ಲೆಂಡ್​ನ ಎಡಿನ್​ಬರ್ಗ್​ನವರಾದ ಲಿಡಿಯಾ ರೀಡ್ ಎಂಬ 74 ವರ್ಷ ವಯಸ್ಸಿನ ಮಹಿಳೆ, ತನ್ನ ಮಗುವಿಗೆ ಏನಾಗಿತ್ತು ಎಂಬುದನ್ನು ತಿಳಿಯುವುದಕ್ಕಾಗಿ ಸರಿಸುಮಾರು 5 ದಶಕಗಳ ಕಾಲ ಕಾನೂನು ಹೋರಾಟ ನಡೆಸಬೇಕಾಗಿ ಬಂದಿದೆ. 1975ರಲ್ಲಿ ಅವರ ಗಂಡು ಮಗು ಮೃತಪಟ್ಟಿತ್ತು. ಆದರೆ, ಆಸ್ಪತ್ರೆಯವರು ಮಗುವಿನ ಮೃತದೇಹವನ್ನೇ ನೀಡದೆ ಸತಾಯಿಸಿದ್ದರು ಎಂದು ‘ಬಿಬಿಸಿ’ ವರದಿ ಮಾಡಿದೆ. ಲಿಡಿಯಾ ರೀಡ್​ಗೆ ಗಂಡು ಮಗು ಜನಿಸಿದ ಒಂದೇ ವಾರದಲ್ಲಿ ವಿರಳವಾದ ಕಾಯಿಲೆಯೊಂದರಿಂದ (ಗರ್ಭಿಣಿಯ ರಕ್ತದಲ್ಲಿರುವ ಪ್ರತಿಕಾಯಗಳು ಮಗುವಿನ ರಕ್ತದ ಸೆಲ್​ಗಳನ್ನು ನಾಶಪಡಿಸುವ ಕಾಯಿಲೆ) ಅದು ಮೃತಪಟ್ಟಿತ್ತು. ಮೃತಪಟ್ಟ ನಂತರ ಮಗುವಿನ ಮೃತದೇಹ ಕೇಳಿದಾಗ ಆಸ್ಪತ್ರೆ ಸಿಬ್ಬಂದಿ ಬೇರೆಯೇ ಮಗುವಿನ ದೇಹ ತೋರಿಸಿದ್ದರು ಎಂದು ಮಹಿಳೆ ಆರೋಪಿಸಿದ್ದರು. ತನ್ನ ಇಚ್ಛೆಗೆ ವಿರುದ್ಧವಾಗಿ ಮಗುವಿನ ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಗಿತ್ತು ಎಂದು ಅವರು ದೂರಿದ್ದರು.

ತನ್ನ ಮಗುವಿನ ಅಂಗಾಂಗಗಳನ್ನು ಸಂಶೋಧನೆಗಾಗಿ ದೇಹದಿಂದ ಬೇರ್ಪಡಿಸಿರಬಹುದು ಎಂದು ಲಿಡಿಯಾ ರೀಡ್ ಭಾವಿಸಿದ್ದರು. ನಂತರ ನಿಜವಾಗಿಯೂ ಹಾಗೆ ಮಾಡಲಾಗಿದೆ ಎಂಬುದು ಅವರ ಅರಿವಿಗೆ ಬಂದಿತ್ತು. ಇದೀಗ ಎಡಿನ್‌ಬರ್ಗ್‌ ರಾಯಲ್‌ ಇನ್​ಫರ್ಮರಿಯಲ್ಲಿದ್ದ ಮಗುವಿನ ಮೃತದೇಹದ ಅವಶೇಷಗಳನ್ನು ಲಿಡಿಯಾ ರೀಡ್​ಗೆ ಹಸ್ತಾಂತರಿಸುವಂತೆ ಅಲ್ಲಿನ ಆಡಳಿತ ನಿರ್ದೇಶನ ನೀಡಿದೆ.

ಆಸ್ಪತ್ರೆಗಳು ಮೃತಪಟ್ಟ ಮಕ್ಕಳ ದೇಹದ ಭಾಗಗಳನ್ನು ಸಂಶೋಧನೆಗಾಗಿ ಹೇಗೆ ಕಾನೂನುಬಾಹಿರವಾಗಿ ಬಳಸಿಕೊಳ್ಳುತ್ತವೆ ಎಂಬುದನ್ನು ಬಯಲಿಗೆಳೆಯುವುದಕ್ಕಾಗಿ ನಡೆದಿದ್ದ ಸ್ಕಾಟಿಷ್ ಅಭಿಯಾನದಲ್ಲಿಯೂ ರೀಡ್ ಪ್ರಮುಖ ಪಾತ್ರ ವಹಿಸಿದ್ದರು. ಅಭಿಯಾನದ ಪರಿಣಾಮವಾಗಿ ಅಂಥ ಕೃತ್ಯಗಳ ವಿರುದ್ಧ ಅಲ್ಲಿನ ಆಡಳಿತ ಕ್ರಮ ಕೈಗೊಂಡಿತ್ತು.

ಇದನ್ನೂ ಓದಿ: ಮಹಿಳೆಯ ಹೃದಯ ಕಿತ್ತು ಅಡುಗೆ ಮಾಡಿ ಕುಟುಂಬದವರಿಗೆ ಬಡಿಸಿ ಅವರನ್ನೂ ಕೊಂದ ಅಮೆರಿಕದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

1970 ಮತ್ತು 2000 ನೇ ಇಸವಿಯ ಮಧ್ಯೆ ಸುಮಾರು 6,000 ಅಂಗಗಳು ಮತ್ತು ಅಂಗಾಂಶಗಳನ್ನು ಸ್ಕಾಟಿಷ್ ಆಸ್ಪತ್ರೆಗಳು ಕಾನೂನುಬಾಹಿರವಾಗಿ ಇಟ್ಟುಕೊಂಡಿದ್ದು ತನಿಖೆಯಲ್ಲಿ ತಿಳಿದುಬಂದಿತ್ತು. ಈ ಪೈಕಿ ಹೆಚ್ಚಿನವು ಮಕ್ಕಳದ್ದಾಗಿದ್ದವು ಎಂದು ‘ಬಿಬಿಸಿ’ ವರದಿ ಉಲ್ಲೇಖಿಸಿದೆ. ಸದ್ಯ, ಕರುಳಿನ ಕ್ಯಾನ್ಸರ್​ನಿಂದಾಗಿ ಎಡಿನ್​ಬರ್ಗ್​ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೀಡ್ ಅವರಿಗೆ ತನ್ನ ಮಗುವಿನ ದೇಹದ ಉಳಿದ ಅಂಗಾಗಳು ಏನಾಗಿರಬಹುದು ಎಂಬುದು ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ ಎಂದು ವರದಿ ತಿಳಿಸಿದೆ.

‘ನನ್ನ ಮಗನನ್ನು ಮರಳಿ ಪಡೆಯುವ ವಿಚಾರದಲ್ಲಿ ನಾನು ಹತಾಶಳಾಗಿದ್ದೆ. ಈಗ ನಾನು ದೇಹದ ಅವಶೇಷಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೇನೆ. ನನ್ನ ಭಾವನೆಗಳನ್ನು ಪದಗಳಲ್ಲಿ ವಿವರಿಸಲಾಗದು. ಈಗ ನಾನು ಸಾಯುವ ಮೊದಲು ನೆಮ್ಮದಿಯಿಂದ ಅವನ ದೇಹವನ್ನು ಸಮಾಧಿ ಮಾಡಬಹುದು. ಇದರಿಂದ ನನಗೆ ಸಮಾಧಾನವಾಗಿದೆ’ ಎಂದು ರೀಡ್ ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!