2.1 C
Munich
Monday, March 27, 2023

Self-proclaimed godman and Rape accused Nithyananda fake country Kailasa cons 30 US cities | ಸ್ವಾಮಿ ನಿತ್ಯಾನಂದನ ನಕಲಿ ಕೈಲಾಸದೊಂದಿಗೆ ಅಮೆರಿಕದ 30 ನಗರಗಳು ಕೈಜೋಡಿಸಿವೆಯಂತೆ! ನಿತ್ಯಾನಂದನ ವಂಚನೆ ಪುರಾಣ ಕೇಳಿ ಬೇಸ್ತು ಬಿದ್ದ ಅಮೆರಿಕನ್ನರು!

ಓದಲೇಬೇಕು

ನಿತ್ಯಾನಂದನ ಕೈಲಾಸವೆಂಬ ಹಿಂದೂ ರಾಷ್ಟ್ರದೊಂದಿಗೆ ಅಮೆರಿಕದ ಅನೇಕ ನಗರಗಳು “ಸಾಂಸ್ಕೃತಿಕ ಸಹಭಾಗಿತ್ವ” ಕ್ಕೆ ಸಹಿ ಹಾಕಿವೆ ಎಂದು ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ (ಯುಎಸ್‌ಕೆ)” ದ ಪ್ರತಿನಿಧಿ

ನಮ್ಮದೇ ಬಿಡದಿಯ ಸ್ವಾಮಿ ನಿತ್ಯಾನಂದ (Swamy Nithyananda) ಸೃಷ್ಟಿಸಿರುವ ದೂರದ ನಕಲಿ ರಾಷ್ಟ್ರ ಕೈಲಾಸದ (fake nation) ಜೊತೆಗೆ ಅಮೆರಿಕದ 30 ಕ್ಕೂ ಹೆಚ್ಚು ನಗರಗಳು ಸಾಂಸ್ಕೃತಿಕ ಪಾಲುದಾರಿಕೆಗೆ ಸಹಿ ಹಾಕಿವೆಯಂತೆ! ಈ ಬಗ್ಗೆ “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ” (United States of Kailasa) ವೆಬ್‌ಸೈಟ್ ಹೇಳಿಕೊಂಡಿದೆ! ಸ್ವಯಂ ಘೋಷಿತ ದೇವಮಾನವ ಮತ್ತು ಕರ್ನಾಟಕ/ಭಾರತದಿಂದ ಪಲಾಯನಗೈದಿರುವ ಸ್ವಾಮಿ ನಿತ್ಯಾನಂದನ ಕೈಲಾಸವೆಂಬ ಹಿಂದೂ ರಾಷ್ಟ್ರದೊಂದಿಗೆ (Hindu nation) ಅಮೆರಿಕದ ಅನೇಕ ನಗರಗಳು (American cities) “ಸಾಂಸ್ಕೃತಿಕ ಸಹಭಾಗಿತ್ವ” (cultural partnership) ಕ್ಕೆ ಸಹಿ ಹಾಕಿವೆ ಎಂದು ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ನೆವಾರ್ಕ್ ಮತ್ತು “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ” ನಡುವಿನ ಸೋದರಿ-ನಗರ (sister-city) ಒಪ್ಪಂದಕ್ಕೆ ಜನವರಿ 12 ರಂದು ಸಹಿ ಮಾಡಲಾಗಿತ್ತು. ಸಹಿ ಮಾಡುವ ಆ ಸಮಾರಂಭವು ನ್ಯೂ ಜೆರ್ಸಿಯ ನೆವಾರ್ಕ್‌ ನಗರದ ಸಿಟಿ ಹಾಲ್‌ನಲ್ಲಿ ನಡೆದಿತ್ತು. ಸಭೆಯಲ್ಲಿ ಸ್ವಾಮಿ ನಿತ್ಯಾನಂದನ ಪ್ರತಿನಿಧಿ ವಿಜಯಪ್ರಿಯಾ ನಿತ್ಯಾನಂದ ಭಾಗವಹಿಸಿದ್ದರು ಎಂದು ಸ್ವಾಮಿ ನಿತ್ಯಾನಂದ ಹೇಳಿಕೊಂಡಿದ್ದ. ಆದರೆ ಕಾಲ್ಪನಿಕ ದೇಶ ಕೈಲಾಸದೊಂದಿಗೆ “ಸಹೋದರಿ-ನಗರ ಸ್ಥಾನಮಾನ’ವನ್ನು ರದ್ದುಗೊಳಿಸಿರುವುದಾಗಿ ಇದೀಗ ನೆವಾರ್ಕ್‌ ಹೇಳಿಕೊಂಡಿದೆ.

ತಾಜಾ ಬೆಳವಣಿಗೆಯೊಂದರಲ್ಲಿ “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ” ವೆಬ್‌ಸೈಟ್ ಪ್ರಕಾರ, ಕೈಲಾಸ ರಾಷ್ಟ್ರದೊಂದಿಗೆ ಸಾಂಸ್ಕೃತಿಕ ಪಾಲುದಾರಿಕೆಗೆ ಸಹಿ ಹಾಕಿರುವ ಅಮೆರಿಕದ 30 ಕ್ಕೂ ಹೆಚ್ಚು ನಗರಗಳಿವೆಯಂತೆ. ಅವುಗಳಲ್ಲಿ ರಿಚ್ಮಂಡ್, ವರ್ಜೀನಿಯಾ, ಡೇಟನ್, ಓಹಿಯೋ, ಬ್ಯೂನಾ ಪಾರ್ಕ್ ಮತ್ತು ಫ್ಲೋರಿಡಾ ಅಂತಹ ಪ್ರಮುಖ ನಗರಗಳು ಸೇರಿವೆ.

ಫಾಕ್ಸ್ ನ್ಯೂಸ್‌ (Fox News) ತಾಜಾ ವರದಿಯ ಪ್ರಕಾರ ನಕಲಿ ಮಠಾಧೀಶ ಸ್ವಾಮಿ ನಿತ್ಯಾನಂದ ಇಂತಹ ಸೋದರಿ-ನಗರ ಸ್ಥಾನಮಾನಗಳನ್ನು ಕಲ್ಪಿಸಿದ್ದು, ಅಂತಹ ನಗರಗಳ ದೀರ್ಘ ಪಟ್ಟಿಯೇ ಇರುವುದು ಅಮೆರಿಕದ ಅಧಿಕಾರಿಗಳ ಗಮನಕ್ಕೆ ಬಂದಿದೆಯಂತೆ. ನಕಲಿ ರಾಷ್ಟ್ರದ ಜೊತೆಗಿನ ಒಪ್ಪಂದದ ಕುರಿತು ಪ್ರತಿಕ್ರಿಯೆಗಾಗಿ ಫಾಕ್ಸ್ ನ್ಯೂಸ್ ಅಮೆರಿಕದ (ಯುಎಸ್‌ಎ) ಆ ಕೆಲವು ನಗರಗಳನ್ನು ಸಂಪರ್ಕಿಸಿತು. ಆಶ್ಚರ್ಯದ ಸಂಗತಿಯೆಂದರೆ ಇಲ್ಲಿಯವರೆಗೆ ಹೆಚ್ಚಿನ ನಗರಗಳು ಈ ಒಪ್ಪಂದಗಳು ಮತ್ತು ಘೋಷಣೆಗಳು ನಿಜವೆಂದು ದೃಢಪಡಿಸಿವೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: Vijayapriya: ವಿಶ್ವಸಂಸ್ಥೆಯ ಸಭೆಯಲ್ಲಿ ಕೈಲಾಸದಿಂದ ಸ್ವಾಮಿ ನಿತ್ಯಾನಂದನ ಪ್ರತಿನಿಧಿಯಾಗಿ ಭಾಗಿಯಾಗಿದ್ದ ವಿಜಯಪ್ರಿಯ ಯಾರು?

ಆದರೆ ಕೈಲಾಸದೊಂದಿಗೆ ನಮ್ಮ ಈ ಒಪ್ಪಂದಗಳು ಮತ್ತು ಘೋಷಣೆಗಳು ಅನುಮೋದನೆಯ ರೂಪದ್ದಲ್ಲ. ಅವು ಕೈಲಾಸ ದೇಶ ಸಲ್ಲಿಸಿರುವ ವಿನಂತಿಗೆ ಪ್ರತಿಕ್ರಿಯೆಯಾಗಿವೆ ಅಷ್ಟೆ. ಮತ್ತು ಹೀಗೆ ವಿನಂತಿಸಿದ ಮಾಹಿತಿಯನ್ನು ನಾವು ಪರಿಶೀಲಿಸುವುದಿಲ್ಲ ಎಂದು ಉತ್ತರ ಕೆರೊಲಿನಾದ ಜಾಕ್ಸನ್‌ವಿಲ್ಲೆ ಫಾಕ್ಸ್ ನ್ಯೂಸ್‌ಗೆ ತಿಳಿಸಿದ್ದಾರೆ. ಈ ವಿದ್ಯಮಾನಗಳನ್ನು ಗಮನಿಸಿ, ನಕಲಿ ರಾಷ್ಟ್ರದ ಬಗ್ಗೆ ಮಾಹಿತಿಗಾಗಿ “ಗೂಗ್ಲಿಂಗ್” ಮಾಡದೆ ಇರುವುದಕ್ಕಾಗಿ ಆ ನಗರಗಳನ್ನು ಫಾಕ್ಸ್ ನ್ಯೂಸ್ ದೂಷಿಸಿದೆ.

ಕುತೂಹಲಕಾರಿ ಅಂಶವೆಂದರೆ ಫಾಕ್ಸ್ ನ್ಯೂಸ್ ವರದಿ ಪ್ರಕಾರ ಇದು ಕೇವಲ ಅಮೆರಿಕದ ಆ ನಗರಗಳ ಮೇಯರ್‌ಗಳು ಅಥವಾ ಸಿಟಿ ಕೌನ್ಸಿಲ್‌ಗಳು ಅಷ್ಟೇ ಅಲ್ಲ ಬದಲಿಗೆ ಫೆಡರಲ್ ಸರ್ಕಾರವನ್ನು ನಡೆಸುತ್ತಿರುವ ಜನರೂ ಸಹ ನಕಲಿ ರಾಷ್ಟ್ರಕ್ಕೆ ಮುಗಿ ಬೀಳುತ್ತಿದ್ದಾರೆ ಎನ್ನಲಾಗಿದೆ. ನಕಲಿ ಧಾರ್ಮಿಕ ಗುರುವಿನ ಪ್ರಕಾರ ಅಮೆರಿಕ ಕಾಂಗ್ರೆಸ್ ನ ಇಬ್ಬರು ಸದಸ್ಯರೂ ಕೈಲಾಸಕ್ಕೆ ‘ವಿಶೇಷ ಐಕ್ಯತಾ ಮಾನ್ಯತೆ’ ನೀಡಿದ್ದಾರೆ ಎಂದೂ ತಿಳಿದುಬಂದಿದೆ. ಅದರಲ್ಲಿ ಒಬ್ಬರು ಕ್ಯಾಲಿಫೋರ್ನಿಯಾದ ಮಹಿಳಾ ಕಾಂಗ್ರೆಸ್ ಸದಸ್ಯೆ ನಾರ್ಮಾ ಟೊರೆಸ್ ಅವರು ಹೌಸ್ ಅಪ್ರೊಪ್ರಿಯೇಷನ್ಸ್ ಕಮಿಟಿಯಲ್ಲಿದ್ದಾರೆ!

ಈ ಬೆಳವಣಿಗೆಗಳ ಸಮ್ಮುಖದಲ್ಲಿ ನಾವು ನಮ್ಮ ತೆರಿಗೆ ಹಣವನ್ನು ಯಾವುದಕ್ಕಾಗಿ ಖರ್ಚು ಮಾಡುತ್ತೇವೆ ಎಂಬುದನ್ನು ಪರಿಗಣಿಸಿದಾಗ ಅದು ನಕಲಿ ದೇಶದ ಆಪಾದಿತ ಅತ್ಯಾಚಾರಿ ಗುರುವಿನೊಂದಿಗೆ ಹಂಚಿಕೆಯಾಗುತ್ತಿದೆ ಎಂಬುದು ಖೇದಕರ ಎಂದು ಫಾಕ್ಸ್ ನ್ಯೂಸ್ ಹೇಳಿದೆ. ಇನ್ನು ಓಹಿಯೋದ ರಿಪಬ್ಲಿಕನ್ ಸದಸ್ಯ ಟ್ರಾಯ್ ಬಾಲ್ಡರ್ಸನ್ ಅವರು ತಮ್ಮ ದೈವಿಕ ಪಾವಿತ್ರ್ಯತೆ ಮತ್ತು ಹಿಂದೂ ಧರ್ಮದ ಮಠಾಧೀಶರ ಐಕ್ಯತಾ ಮಾನ್ಯತೆಯ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದಾರೆ ಎಂದು ವರದಿ ತಿಳಿಸಿದೆ.

ಗಮನಾರ್ಹವೆಂದರೆ ಈ ತಿಂಗಳ ಆರಂಭದಲ್ಲಿ ನೆವಾರ್ಕ್ ನಗರದ ಕಮ್ಯುನಿಕೇಷನ್ಸ್ ವಿಭಾಗದ ಪತ್ರಿಕಾ ಕಾರ್ಯದರ್ಶಿ ಸುಸಾನ್ ಗರೋಫಾಲೋ ಅವರು ಭಾರತದ ಪಿಟಿಐ ಸುದ್ದಿ ಸಂಸ್ಥೆಯ ಜೊತೆ ಮಾತನಾಡುತ್ತಾ “ಕೈಲಾಸ ಸುತ್ತಮುತ್ತಲಿನ ಪರಿಸ್ಥಿತಿಗಳು ನಮ್ಮ ಅರಿವಿಗೆ ಬರುತ್ತಿದ್ದಂತೆ, ತಕ್ಷಣ ನೆವಾರ್ಕ್ ನಗರವು ಜನವರಿ 18 ರಂದು ಮಾಡಿಕೊಂಡಿದ್ದ ಸಿಸ್ಟರ್-ಸಿಟಿ ಒಪ್ಪಂದವನ್ನು ರದ್ದುಗೊಳಿಸಿತು” ಎಂದು ತಿಳಿಸಿದ್ದರು.

ಇದು ವಂಚನೆ ಎಂಬುದು ಅರಿವಿಗೆ ಬರುತ್ತಿದ್ದಂತೆ ಒಪ್ಪಂದ ಸಮಾರಂಭವು ಆಧಾರರಹಿತವಾಗಿದ್ದು, ಅನೂರ್ಜಿತಗೊಳಿಸಲಾಯಿತು. ಇದು ವಿಷಾದನೀಯ ಘಟನೆಯಾಗಿದೆ ಎಂದು ಅವರು ಹೇಳಿದರು. ಏನೇ ಆದರೂ ನೆವಾರ್ಕ್ ನಗರವು ವೈವಿಧ್ಯಮಯ ಸಂಸ್ಕೃತಿಗಳ ಯಾವುದೇ ಜನರೊಂದಿಗೆ ಪಾಲುದಾರಿಕೆಗೆ ಬದ್ಧವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ ಅವರು ಪರಸ್ಪರ ಸಂಪರ್ಕ ಸಾಧನೆ, ಬೆಂಬಲ ಮತ್ತು ಪರಸ್ಪರ ಗೌರವದಿಂದ ಅಂತಹ ಪಾಲುದಾರಿಕೆಯನ್ನು ಉತ್ಕೃಷ್ಟಗೊಳಿಸಿಕೊಳ್ಳುವುದಾಗಿ ಗರೊಫಾಲೊ ಭರವಸೆ ನೀಡಿದ್ದಾರೆ.

ಈ ಮಧ್ಯೆ, ನಕಲಿ ರಾಷ್ಟ್ರದೊಂದಿಗೆ ಸೋದರಿ ನಗರ ಒಪ್ಪಂದವು ನಮ್ಮ ನಗರಕ್ಕೆ ಮುಜುಗರದ ಪ್ರಸಂಗವಾಗಿದೆ ಎಂದು ನೆವಾರ್ಕ್ ನಿವಾಸಿಯೊಬ್ಬರು ಫಾಕ್ಸ್ ನ್ಯೂಸ್‌ಗೆ ತಿಳಿಸಿದ್ದಾರೆ. ಇಂತಹ ಕೃತ್ರಿಮ ರಾಷ್ಟ್ರದೊಂದಿಗೆ ಕೈ ಜೋಡಿಸುವ ಮುನ್ನ ಅದರ ಹಿನ್ನೆಲೆಯ ಬಗ್ಗೆ ಸಂಶೋಧನೆ ಮಾಡದಿರುವುದು ನಾಚಿಕೆಗೇಡು ಮತ್ತು ಮುಜುಗರದ ಸಂಗತಿಯಾಗಿದೆ ಎಂದು ತಾನು ಭಾವಿಸುವುದಾಗಿ ಅವರು ಹೇಳಿದ್ದಾರೆ.

ಕಳೆದ ತಿಂಗಳು, ಯುಎಸ್‌ಎ ಪ್ರತಿನಿಧಿಗಳು ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ (ಯುಎನ್) ಎರಡು ಸಭೆಗಳಲ್ಲಿ ಭಾಗವಹಿಸಿದ್ದರು. ಕೈಲಾಸ ರಾಷ್ಟ್ರದ ಭಾಗವಹಿಸುವಿಕೆ ಬಗ್ಗೆ ಪ್ರತಿಕ್ರಿಯಿಸಿದ್ದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ (OHCHR) ಕಚೇರಿಯು, ಸೋದರಿ ನಗರ ಒಪ್ಪಂದಕ್ಕೆ ಯಾರು ಬೇಕಾದರೂ ಅರ್ಜಿಯನ್ನು ಸಲ್ಲಿಸಬಹುದು. ಆದರೆ ಹಾಗೆ ಸ್ವೀಕರಿಸಿದ ಅರ್ಜಿಗಳ ವಿಶ್ವಾಸಾರ್ಹತೆ ಬಗ್ಗೆ ಸೂಕ್ತವಾಗಿ ನಿರ್ಧರಿಸಿ, ಅಂತಿಮವಾಗಿ ತಾವೇ ತೀರ್ಪು ನೀಡುವುದಾಗಿ ಹೈ ಕಮಿಷನರ್ ಕಚೇರಿ ಸ್ಪಷ್ಟಪಡಿಸಿದೆ.

ಭಾರತದಲ್ಲಿ ಸ್ವಾಮಿ ನಿತ್ಯಾನಂದನ ವಿರುದ್ಧ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಹಲವಾರು ಆರೋಪಗಳ ಇವೆ. ಆತ ಅಲ್ಲಿನ ಪೊಲೀಸರಿಗೆ ಬೇಕಾದವನಾಗಿದ್ದಾನೆ. ಆದರೆ ಆತ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾನೆ ಎಂದು ಫಾಕ್ಸ್​ ನ್ಯೂಸ್​ ವರದಿ ಮಾಡಿದೆ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!