Selfiee First Day Collection: ಅಕ್ಷಯ್ ಕುಮಾರ್ ನಟನೆಯ ‘ಸೆಲ್ಫೀ’ ಚಿತ್ರಕ್ಕೆ ಜನರಿಂದ ನೀರಸ ಪ್ರತಿಕ್ರಿಯೆ ಸಿಗಲು ಕಾರಣ ಏನು? ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
ಅಕ್ಷಯ್ ಕುಮಾರ್
ಪ್ರೇಕ್ಷಕರು ಯಾವ ಚಿತ್ರವನ್ನು ಮೆಚ್ಚಿಕೊಳ್ಳುತ್ತಾರೆ? ಯಾವ ಚಿತ್ರವನ್ನು ತೆಗಳುತ್ತಾರೆ ಅಂತ ಊಹಿಸೋದು ಕಷ್ಟ. ಎಷ್ಟೋ ವರ್ಷಗಳಿಂದ ಚಿತ್ರರಂಗದಲ್ಲಿ ಪಳಗಿದವರಿಗೂ ಇದರ ಜಡ್ಜ್ಮೆಂಟ್ ಸರಿಯಾಗಿ ಸಿಗಲ್ಲ. ನಟ ಅಕ್ಷಯ್ ಕುಮಾರ್ (Akshay Kumar) ಅವರು ಈ ವರ್ಷ ‘ಸೆಲ್ಫೀ’ ಸಿನಿಮಾ ಮೂಲಕ ತಮ್ಮ ಖಾತೆ ತೆರೆದಿದ್ದಾರೆ. ಫೆಬ್ರವರಿ 24ರಂದು ಈ ಚಿತ್ರ ರಿಲೀಸ್ ಆಗಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಆಗುತ್ತಿಲ್ಲ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ದೊಡ್ಡ ಓಪನಿಂಗ್ ಪಡೆಯುವಲ್ಲಿ ‘ಸೆಲ್ಫೀ’ ಸಿನಿಮಾ (Selfiee Movie) ವಿಫಲವಾಗಿದೆ. ಈ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಕೂಡ ನಟಿಸಿದ್ದಾರೆ. ಇಬ್ಬರು ಸ್ಟಾರ್ ನಟರು ಇದ್ದರೂ ಸಹ ಗಲ್ಲಾಪೆಟ್ಟಿಗೆಯಲ್ಲಿ ಆಶಾದಾಯಕ ವಾತಾವರಣ ಕಾಣುತ್ತಿಲ್ಲ. ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ (Selfiee Box Office Collection) ರಿಪೋರ್ಟ್ಗಾಗಿ ಕಾಯಲಾಗುತ್ತಿದೆ.
2022ರಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋತಿದ್ದವು. ‘ಸಾಮ್ರಾಟ್ ಪೃಥ್ವಿರಾಜ್’, ‘ರಕ್ಷಾ ಬಂಧನ್’, ‘ರಾಮ್ ಸೇತು’ ಸಿನಿಮಾಗಳು ಕೈ ಹಿಡಿಯಲಿಲ್ಲ. 2023ರಲ್ಲಾದರೂ ಅವರು ಗೆಲುವಿನ ನಗೆ ಬೀರಲಿ ಎಂಬುದು ಫ್ಯಾನ್ಸ್ ಬಯಕೆ. ಆದರೆ ಪ್ರೇಕ್ಷಕರು ‘ಸೆಲ್ಫೀ’ ಚಿತ್ರದ ಕೈ ಹಿಡಿಯುವ ಲಕ್ಷಣ ಕಾಣುತ್ತಿಲ್ಲ.
ಇದನ್ನೂ ಓದಿ: Akshay Kumar: ಭಾರತದ ಭೂಪಟ ತುಳಿದ ಅಕ್ಷಯ್ ಕುಮಾರ್; ವೈರಲ್ ವಿಡಿಯೋ ನೋಡಿ ತರಾಟೆಗೆ ತೆಗೆದುಕೊಂಡ ನೆಟ್ಟಿಗರು
ಮೊದಲ ದಿನದ ಅಡ್ವಾನ್ಸ್ ಬುಕಿಂಗ್ ಗಮನಿಸಿದರೆ ಚಿತ್ರತಂಡಕ್ಕೆ ನಿರಾಸೆ ಆಗುವಂತಿದೆ. ಹಾಗಾಗಿ ಅಕ್ಷಯ್ ಕುಮಾರ್ ಅವರ ಇತ್ತೀಚಿನ ಸಿನಿಮಾಗಳ ಪೈಕಿ ಮೊದಲ ದಿನ ಅತಿ ಕಡಿಮೆ ಕಲೆಕ್ಷನ್ ಮಾಡಿದ ಚಿತ್ರ ಎಂಬ ಅಪಖ್ಯಾತಿಯೂ ‘ಸೆಲ್ಫೀ’ ಪಾಲಾಗಬಹುದು. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಲಿವುಡ್ ಪ್ರೇಕ್ಷಕರಿಗೆ ಈ ಸಿನಿಮಾದ ಕಥೆ ಇಷ್ಟ ಆದಂತಿಲ್ಲ. ಹೆಚ್ಚೆಂದರೆ 4 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದು ಅಷ್ಟೇ ಎಂದು ಅಂದಾಜಿಸಲಾಗುತ್ತಿದೆ.
ಇದನ್ನೂ ಓದಿ: Akshay Kumar: ಛತ್ರಪತಿ ಶಿವಾಜಿ ಪಾತ್ರ ಮಾಡಲು ಹೋಗಿ ಟ್ರೋಲ್ ಆದ ಅಕ್ಷಯ್ ಕುಮಾರ್; ಇಲ್ಲಿದೆ ಕಾರಣ
‘ಸೆಲ್ಫೀ’ ಚಿತ್ರಕ್ಕೆ ಜನರಿಂದ ನೀರಸ ಪ್ರತಿಕ್ರಿಯೆ ಸಿಗಲು ಕಾರಣ ಏನು? ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಇದು ಮಲಯಾಳಂನ ‘ಡ್ರೈವಿಂಗ್ ಲೈಸೆನ್ಸ್’ ಚಿತ್ರದ ಹಿಂದಿ ರಿಮೇಕ್. ಒಟಿಟಿಯಲ್ಲಿ ಮೂಲ ಸಿನಿಮಾವನ್ನು ಜನರು ಈಗಾಗಲೇ ನೋಡಿರುವುದರಿಂದ ರಿಮೇಕ್ಗೆ ಕಲೆಕ್ಷನ್ ಡಲ್ ಆಗಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ರಿಲೀಸ್ ಆದ ‘ಶೆಹಜಾದ್’ ಚಿತ್ರಕ್ಕೂ ಇದೇ ಗತಿ ಬಂದಿತ್ತು. ಅದು ತೆಲುಗಿನ ‘ಅಲಾ ವೈಕುಂಠಪುರಮುಲೋ’ ಸಿನಿಮಾದ ರಿಮೇಕ್ ಆಗಿತ್ತು.
‘ಸೆಲ್ಫೀ’ ಚಿತ್ರಕ್ಕೆ ಶನಿವಾರದ (ಫೆ.25) ಅಡ್ವಾನ್ಸ್ ಬುಕಿಂಗ್ ಕೂಡ ಆಶಾದಾಯಕವಾಗಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಅಕ್ಷಯ್ ಕುಮಾರ್ ಅವರ ಭವಿಷ್ಯ ಕಷ್ಟವಾಗಲಿದೆ. ಅವರು ಸ್ಕ್ರಿಪ್ಟ್ ಆಯ್ಕೆಯಲ್ಲಿ ಹೊಸ ಪ್ರಯೋಗ ಮಾಡಬೇಕಾಗುತ್ತದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.