4.9 C
Munich
Wednesday, March 15, 2023

Shah Rukh Khan starrer Pathaan movie successfully completed 50 days | Pathaan: 50 ದಿನ ಪೂರೈಸಿದ ‘ಪಠಾಣ್​’; 20 ದೇಶದಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿದೆ ಶಾರುಖ್​ ಸಿನಿಮಾ

ಓದಲೇಬೇಕು

Shah Rukh Khan | Pathaan Movie: ಶಾರುಖ್​ ಖಾನ್​ ನಟನೆಯ ‘ಪಠಾಣ್​’ ಸಿನಿಮಾ ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಇದರಿಂದ ನಿರ್ಮಾಪಕರಿಗೆ ಭರ್ಜರಿ ಲಾಭ ಆಗಿದೆ.

ಶಾರುಖ್ ಖಾನ್

ನಟ ಶಾರುಖ್​ ಖಾನ್​ (Shah Rukh Khan) ಅವರ ಪಾಲಿಗೆ 2023ರ ವರ್ಷ ಸಖತ್​ ಆಶಾದಾಯಕವಾಗಿದೆ. ಈ ವರ್ಷದ ಆರಂಭದಲ್ಲೇ ಅವರು ‘ಪಠಾಣ್​’ ಸಿನಿಮಾ (Pathaan Movie) ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಜನವರಿ 25ರಂದು ಈ ಚಿತ್ರ ಅದ್ದೂರಿಯಾಗಿ ತೆರೆ ಕಂಡಿತು. ಮೊದಲ ದಿನವೇ ಭರ್ಜರಿ ಕಲೆಕ್ಷನ್​ ಮಾಡುವ ಮೂಲಕ ಎಲ್ಲರ ಗಮನ ಸೆಳೆಯಿತು. ಈಗ ‘ಪಠಾಣ್​’ ಚಿತ್ರ 50 ದಿನಗಳನ್ನು ಪೂರೈಸಿದೆ. ಈ ಖುಷಿಯನ್ನು ಶಾರುಖ್​ ಖಾನ್​ ಅಭಿಮಾನಿಗಳು (Shah Rukh Khan Fans) ಸಂಭ್ರಮಿಸುತ್ತಿದ್ದಾರೆ. ವಿಶೇಷ ಏನೆಂದರೆ 50 ದಿನ ಕಳೆದಿದ್ದರೂ ಕೂಡ 20 ದೇಶಗಳಲ್ಲಿ ಇಂದಿಗೂ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಬೇರೆ ಸ್ಟಾರ್​ ನಟರ ಹೊಸ ಸಿನಿಮಾಗಳು ಬಂದು ಪೈಪೋಟಿ ನೀಡಿದರೂ ಕೂಡ ಶಾರುಖ್​ ಖಾನ್​ ಚಿತ್ರಕ್ಕೆ ಹಿನ್ನಡೆ ಆಗಿಲ್ಲ.

‘ಪಠಾಣ್​’ ಸಿನಿಮಾದಲ್ಲಿ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ಜಾನ್​ ಅಬ್ರಾಹಂ, ಡಿಂಪಲ್​ ಕಪಾಡಿಯಾ, ಆಶುತೋಷ್​ ರಾಣಾ, ಪ್ರಕಾಶ್​ ಬೆಳವಾಡಿ ಮುಂತಾದವರು ನಟಿಸಿದ್ದಾರೆ. ಯಶ್​ ರಾಜ್​ ಫಿಲ್ಮ್ಸ್​ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿರುವ ಈ ಸಿನಿಮಾದಿಂದ ನಿರ್ಮಾಪಕರಿಗೆ ಭರ್ಜರಿ ಲಾಭ ಆಗಿದೆ.

ಇದನ್ನೂ ಓದಿ‘ಪಠಾಣ್​’ ಚಿತ್ರದಿಂದ ನಿರ್ಮಾಪಕರಿಗೆ ಆದ ಲಾಭ ಇಷ್ಟೊಂದಾ? ಇಲ್ಲಿದೆ ಲೆಕ್ಕಾಚಾರ

ಆರಂಭದಲ್ಲಿ ‘ಪಠಾಣ್​’ ಸಿನಿಮಾದ ಟಿಕೆಟ್​ ದರ ದುಬಾರಿ ಆಗಿತ್ತು. ಕೆಲವು ಕಡೆಗಳಲ್ಲಿ ಟಿಕೆಟ್​ ಬೆಲೆ 1000 ರೂಪಾಯಿ ದಾಟಿತ್ತು. ಹಾಗಿದ್ದರೂ ಕೂಡ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡಿದರು. ಮೊದಲ ದಿನ ‘ಪಠಾಣ್​’ ಮಾಡಿದ ಕಲೆಕ್ಷನ್​ 57 ಕೋಟಿ ರೂಪಾಯಿ. ಈಗ 50 ದಿನ ಕಳೆದ ಬಳಿಕವೂ ಅಮೆರಿಕ, ಇಂಗ್ಲೆಂಡ್​, ಅರಬ್​ ರಾಷ್ಟ್ರಗಳು ಸೇರಿದಂತೆ 20 ದೇಶಗಳಲ್ಲಿ ಈ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

Pathaan: ಬಾಂಗ್ಲಾದೇಶದಲ್ಲಿ ರಿಲೀಸ್​ ಆಗಲಿದೆ ‘ಪಠಾಣ್​’; 8 ವರ್ಷಗಳ ಬಳಿಕ ಭಾರತದ ಸಿನಿಮಾ ಪ್ರದರ್ಶನಕ್ಕೆ ಅವಕಾಶ

‘ಪಠಾಣ್​’ ಚಿತ್ರಕ್ಕೆ ಸಿದ್ದಾರ್ಥ್​ ಆನಂದ್​ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಗೆಲುವಿನಿಂದಾಗಿ ಅವರ ಡಿಮ್ಯಾಂಡ್​ ಹೆಚ್ಚಾಗಿದೆ. ಬಾಲಿವುಡ್​ನಲ್ಲಿ ತಾವು ಭರವಸೆಯ ನಿರ್ದೇಶಕ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಈ ಹಿಂದೆ ಸಿದ್ದಾರ್ಥ್​ ಆನಂದ್​ ನಿರ್ದೇಶಿಸಿದ್ದ ‘ವಾರ್​’ ಸಿನಿಮಾ ಕೂಡ ಸೂಪರ್​ ಹಿಟ್​ ಆಗಿತ್ತು.

ಶಾರುಖ್​ ಖಾನ್​ ಅವರಿಗೆ ‘ಪಠಾಣ್​’ ಸಿನಿಮಾದಿಂದ ನಿರೀಕ್ಷೆಗೂ ಮೀರಿದ ಗೆಲುವು ಸಿಕ್ಕಿದೆ. ನಾಲ್ಕು ವರ್ಷದ ಬಳಿಕ ಕಮ್​ಬ್ಯಾಕ್​ ಮಾಡಿದ ಅವರನ್ನು ಜನರು ಒಪ್ಪಿಕೊಂಡಿದ್ದಾರೆ. ಇದರಿಂದ ಶಾರುಖ್​ ವೃತ್ತಿಜೀವನಕ್ಕೆ ಮತ್ತೆ ಕಳೆ ಬಂದಿದೆ. ಅವರ ಮುಂಬರುವ ಸಿನಿಮಾಗಳಿಗಾಗಿ ಪ್ರೇಕ್ಷಕರು ಕಾತರದಿಂದ ಕಾಯುವಂತಾಗಿದೆ. ‘ಡಂಕಿ’, ‘ಜವಾನ್​’ ಸಿನಿಮಾದ ಕೆಲಸಗಳಲ್ಲಿ ಶಾರುಖ್​ ಖಾನ್​ ಬ್ಯುಸಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!