2.7 C
Munich
Saturday, February 25, 2023

Shah rukh Khan To Act In Tiger 3 For Free Here is why | ‘ಟೈಗರ್ 3’ ಚಿತ್ರದಲ್ಲಿ ಶಾರುಖ್ ಖಾನ್: ಏಪ್ರಿಲ್​ನಿಂದ ಶೂಟಿಂಗ್; ಸಂಭಾವನೆ ಎಷ್ಟು?

ಓದಲೇಬೇಕು

ಯಶ್ ರಾಜ್ ಫಿಲ್ಮ್ಸ್​ನವರು ತಮ್ಮದೇ ಸ್ಪೈ ಯೂನಿವರ್ಸ್​ ಸೃಷ್ಟಿಸಿಕೊಂಡಿದ್ದಾರೆ. ‘ಟೈಗರ್’ ಸರಣಿಯ ಸಿನಿಮಾಗಳು, ‘ವಾರ್​’ ಹಾಗೂ ‘ಪಠಾಣ್’ ಚಿತ್ರ ಇದೆ. ‘ಪಠಾಣ್​’ ಚಿತ್ರದಲ್ಲಿ ಟೈಗರ್​ನ ಎಂಟ್ರಿ ಆಗುತ್ತದೆ.

ಶಾರುಖ್​-ಸಲ್ಮಾನ್

ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್​’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಶಾರುಖ್ ಖಾನ್ ಅವರ ಮಾರುಕಟ್ಟೆ ಹಿರಿದಾಗಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರು ಅತಿಥಿ ಪಾತ್ರ ಮಾಡಿದ್ದರು. ಭರ್ಜರಿ ಫೈಟಿಂಗ್​ನಲ್ಲಿ ಸಲ್ಲು ಮಿಂಚಿದ್ದರು. ಈಗ ಶಾರುಖ್ ಖಾನ್ ಸರದಿ. ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ (Tiger 3)ಸಿನಿಮಾದಲ್ಲಿ ಶಾರುಖ್ ಅತಿಥಿ ಪಾತ್ರ ಮಾಡಲಿದ್ದಾರೆ. ‘ಪಠಾಣ್​’ ಆಗಿ ಅವರು ಟೈಗರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗ ಶಾರುಖ್ ಖಾನ್ ಭಾಗದ ಶೂಟಿಂಗ್ ಯಾವಾಗಿನಿಂದ ಆರಂಭ ಆಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ.

ಯಶ್ ರಾಜ್ ಫಿಲ್ಮ್ಸ್​ನವರು ತಮ್ಮದೇ ಸ್ಪೈ ಯೂನಿವರ್ಸ್​ ಸೃಷ್ಟಿಸಿಕೊಂಡಿದ್ದಾರೆ. ‘ಟೈಗರ್’ ಸರಣಿಯ ಸಿನಿಮಾಗಳು, ‘ವಾರ್​’ ಹಾಗೂ ‘ಪಠಾಣ್’ ಚಿತ್ರ ಇದೆ. ‘ಪಠಾಣ್​’ ಚಿತ್ರದಲ್ಲಿ ಟೈಗರ್​ನ ಎಂಟ್ರಿ ಆಗುತ್ತದೆ. ಈ ಚಿತ್ರದಲ್ಲಿ ‘ವಾರ್​’ ಚಿತ್ರದ ಕಬೀರ್ (ಹೃತಿಕ್ ರೋಷನ್​) ಹೆಸರು ಉಲ್ಲೇಖ ಆಗುತ್ತದೆ. ‘ಟೈಗರ್​ 3’ ಚಿತ್ರದಲ್ಲಿ ಶಾರುಖ್ ಖಾನ್ ಅವರ ಎಂಟ್ರಿ ಇರಲಿದೆ. ಏಪ್ರಿಲ್​ನಲ್ಲಿ ಶೂಟಿಂಗ್ ಆರಂಭ ಆಗಲಿದೆ. ಇದು ಅತಿಥಿ ಪಾತ್ರ ಆಗಿರುವುದರಿಂದ ಶಾರುಖ್ ಭಾಗದ ಶೂಟಿಂಗ್ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ.

ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ನಡುವೆ ಒಳ್ಳೆಯ ಗೆಳೆತನ ಇದೆ. ಇದು ಅನೇಕ ಬಾರಿ ಸಾಬೀತಾಗಿದೆ. ‘ಪಠಾಣ್​’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡೋಕೆ ಸಲ್ಮಾನ್​ ಖಾನ್ ಯಾವುದೇ ಸಂಭಾವನೆ ತೆಗೆದುಕೊಂಡಿರಲಿಲ್ಲ. ಅದೇ ರೀತಿ, ಶಾರುಖ್ ಖಾನ್ ಕೂಡ ಯಾವುದೇ ಸಂಭಾವನೆ ಪಡೆಯದಿರಲು ನಿರ್ಧರಿಸಿದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ



ಇದನ್ನೂ ಓದಿ: ಸಲ್ಮಾನ್ ಖಾನ್ ಒಟ್ಟೂ ಆಸ್ತಿ ಮೊತ್ತ ಇಷ್ಟೊಂದಾ? ಸ್ಟಾರ್ ನಟನ ಪ್ರಾಪರ್ಟಿ ಬಗ್ಗೆ ಇಲ್ಲಿದೆ ಮಾಹಿತಿ

ಮಹೇಶ್ ಶರ್ಮಾ ಅವರು ‘ಟೈಗರ್ 3’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಈಗಾಗಲೇ ‘ಟೈಗರ್’ ಸರಣಿಯ ಎರಡು ಸಿನಿಮಾಗಳು ಹಿಟ್ ಆಗಿವೆ. ಈ ಕಾರಣದಿಂದಲೂ ‘ಟೈಗರ್ 3’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಶಾರುಖ್ ಖಾನ್ ರೀತಿಯೇ ಸಲ್ಮಾನ್ ಖಾನ್ ಕೂಡ ಸಾಲು ಸಾಲು ಸೋಲು ಕಾಣುತ್ತಿದ್ದಾರೆ. ಬಾಕ್ಸ್ ಆಫೀಸ್​ನಲ್ಲಿ ಒಂದೊಳ್ಳೆಯ ಗೆಲುವು ಕಾಣದೆ ಬಹಳ ಸಮಯ ಕಳೆದಿದೆ. ಹೀಗಾಗಿ, ‘ಟೈಗರ್ 3’ ಮೂಲಕ ಅವರಿಗೆ ಗೆಲ್ಲೋದು ಅನಿವಾರ್ಯ ಆಗಿದೆ. ಈ ವರ್ಷ ದೀಪಾವಳಿಗೆ ‘ಟೈಗರ್​ 3’ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!