5.2 C
Munich
Friday, March 3, 2023

Sharat Kumar Says His Daughter, Actress Varalaxmi Went To Police Station After Beating Two Boys | ಇಬ್ಬರನ್ನು ಹೊಡೆದು ಠಾಣೆಗೆ ಹೋಗಿದ್ದರಂತೆ ಈ ಯುವ ನಟಿ, ಮಗಳ ಬಗ್ಗೆ ಶರತ್​ಕುಮಾರ್ ಹಂಚಿಕೊಂಡ ಅಪರೂಪದ ಮಾಹಿತಿ

ಓದಲೇಬೇಕು

ತಮ್ಮ ಮಗಳು, ನಟಿ ವರಲಕ್ಷ್ಮಿ ಇಬ್ಬರನ್ನು ಹೊಡೆದು ಪೊಲೀಸ್ ಠಾಣೆಗೆ ಹೋಗಿದ್ದ ವಿಷಯವನ್ನು ಬಹುಭಾಷಾ ನಟ ಶರತ್ ಕುಮಾರ್ ಹೇಳಿದ್ದಾರೆ.

ವರಲಕ್ಷ್ಮಿ ಶರತ್​ಕುಮಾರ್

ಬಹುಭಾಷಾ ನಟ ಶರತ್ ಕುಮಾರ್ (Sharat Kumar), ಕನ್ನಡಕ್ಕೆ ಚಿರಪರಿಚಿತರೇ. ಕನ್ನಡದ ‘ರಾಜಕುಮಾರ’, ‘ಜೇಮ್ಸ್’, ‘ಸೀತಾರಾಮ ಕಲ್ಯಾಣ’, ‘ಮೈನ’ ಇನ್ನೂ ಕೆಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಶರತ್ ಕುಮಾರ್ ಅವರ ಪತ್ನಿ ರಾಧಿಕಾ ಹಾಗೂ ಮಕ್ಕಳು ಸಹ ಸಿನಿಮಾ ನಟರೆ. ಅವರ ಪುತ್ರಿ ವರಮಹಾಲಕ್ಷ್ಮಿ ಕನ್ನಡದ ಕೆಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ತಮ್ಮ ಪುತ್ರಿಯ ಬಗ್ಗೆ ಅಪರೂಪದ ಮಾಹಿತಿಯೊಂದನ್ನು ನಟ ಶರತ್ ಕುಮಾರ್ ಹಂಚಿಕೊಂಡಿದ್ದಾರೆ.

ಸಂದರ್ಶನದಲ್ಲಿ ಶರತ್​ಕುಮಾರ್ ತಮ್ಮ ಮಗಳು ವರಲಕ್ಷ್ಮಿ ಬಗ್ಗೆ ಮಾತನಾಡುತ್ತಾ, ಆಕೆ ಬಹಳ ಧೈರ್ಯವಂತೆ. ಒಮ್ಮೆ ರಾತ್ರಿ ಸಮಯ ನನಗೆ ಪೊಲೀಸ್ ಠಾಣೆಯೊಂದರಿಂದ ಫೋನ್ ಬಂತು. ನಿಮ್ಮ ಮಗಳು ಠಾಣೆಯಲ್ಲಿದ್ದಾರೆ ಬೇಗ ಬನ್ನಿ ಎಂದರು. ನಾನು ಕೂಡಲೇ ಠಾಣೆಗೆ ಹೋದೆ. ನೋಡಿದರೆ ನನ್ನ ಮಗಳು ಇಬ್ಬರು ಹುಡುಗರನ್ನು ಹೊಡೆದಿದ್ದಳು ಎಂದಿದ್ದಾರೆ ಶರತ್.

ನನ್ನ ಮಗಳು ಚಲಾಯಿಸುತ್ತಿದ್ದ ಕಾರಿಗೆ ಬೈಕ್​ನಲ್ಲಿ ಬಂದ ಇಬ್ಬರು ಯುವಕರು ಢಿಕ್ಕಿ ಹೊಡೆದಿದ್ದರು. ಪ್ರಶ್ನೆ ಮಾಡಿದ್ದಕ್ಕೆ ಮಗಳ ಮೇಲೆ ಜಗಳ ಮಾಡಲು ಹೋಗಿದ್ದರು, ಅದಕ್ಕಾಗಿ ಸಿಟ್ಟೇರಿ ನನ್ನ ಮಗಳು ಇಬ್ಬರು ಹುಡುಗರನ್ನು ಹಿಗ್ಗಾ-ಮುಗ್ಗ ಥಳಿಸಿದ್ದಳು ಎಂದು ಶರತ್ ಕುಮಾರ್ ಹೇಳಿದ್ದಾರೆ.

ಶರತ್ ಕುಮಾರ್ ಅವರ ಸಂದರ್ಶನದ ವಿಡಿಯೋ ಇದೀಗ ವೈರಲ್ ಆಗಿದ್ದು, ನಟಿ ವರಲಕ್ಷ್ಮಿಯ ಧೈರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ವರಲಕ್ಷ್ಮಿ 2012 ರಲ್ಲಿ ತಮಿಳು ಸಿನಿಮಾ ಒಂದರ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು. 2014 ರಲ್ಲಿ ಸುದೀಪ್ ನಟನೆಯ ಮಾಣಿಕ್ಯ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ಬಳಿಕ ಸುದೀಪ್ ನಟನೆಯ ರನ್ನ ಸಿನಿಮಾದಲ್ಲಿ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಂಡರು. ಬಳಿಕ, ಅರ್ಜುನ್ ಸರ್ಜ ನಟನೆಯ ವಿಸ್ಮಯ, ಚಿರಂಜೀವಿ ಸರ್ಜಾ ನಟನೆಯ ರಣಂ ಸಿನಿಮಾಗಳಲ್ಲಿ ನಟಿಸಿದರು. ಇದೀಗ ಲಗಾಮು ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಹು ಬ್ಯುಸಿ ನಟಿಯರಲ್ಲಿ ಒಬ್ಬರಾಗಿರುವ ವರಲಕ್ಷ್ಮಿ ನಟನೆಯ ಮೂರು ಸಿನಿಮಾಗಳು ಈವರ್ಷ ಈಗಾಗಲೇ ತೆರೆಗೆ ಬಂದಿದ್ದು ಇನ್ನೂ ಆರು ಸಿನಿಮಾಗಳು ತೆರೆಗೆ ಬರಲಿವೆ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!