ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಯಡ್ರಾಮಿ ತಾಲೂಕ ಸಂಘಟನೆ ವತಿಯಿಂದ ಯಡ್ರಾಮಿ ತಾಲೂಕಿನ ಶಿವುಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದಾಗ ಶಾಲೆಯ ಪಕ್ಕದಲಿ ಗಬ್ಬು ನಾರುತ್ತಿರುವ ಚರಂಡಿ ನೀರಿನ ವಾಸನೆ ಹಾಗೂ ಪಕ್ಕದಲ್ಲೇ ತಿಪ್ಪೆಗಳು ಹಾಗೂ ಸ್ವಚವಿರದ ಸೌಚಾಲಯ ಅದು ಕೂಡ ನೋಡಕ್ಕೆ ಆಗದೆ ಇರೋವಷ್ಟು ಹೊಲಸ್ಸು ತುಂಬಿದ್ದು ಕಂಡು ಬಂದಿರುತದೇ ಹಾಗೂ ಮಕ್ಕಳಿಗೆ ಆಟವಾಡಲು ಆಟದ ಮೈದಾನ ಕೂಡಾ ಇರದೇ ಇರುವುದೂ ವಿಷಾದಕರ ಸಂಗತಿ ಮಕ್ಕಳ ದಾಖಲಾತಿ ನೋಡಿದರೆ ಮದ್ಯಾಹ್ನ 1 ಗಂಟೆಯಾದರೂ ಹಾಜರಾತಿ ಹಾಕದೆ ಶಾಲೆಯಲ್ಲಿ ಹರಟೆ ಹೊಡಿಯುತಿರುವ ಶಿಕ್ಷಕರು ಶಿವಪುರ್ ಗ್ರಾಮಕ್ಕೆ ಬರುವಂತಹ ಬಳಬಟ್ಟಿ ಗ್ರಾಮಪಂಚಾಯತ ಅಭಿವೃದ್ಧಿ ಅಧಿಕಾರಿಗೆ ಫೋನ್ ಮಾಡಿ ಈ ಊರು ಹಾಗೂ ಊರಿನ ಸರಕಾರಿ ಶಾಲೆ ಮರೆತಿದ್ದರೆ ನೆನಪು ಮಾಡಲು ಫೋನ್ ಮಾಡಿದರೆ ಫೋನ್ ಕೂಡ ತೆಗೆದಿರುವುದಿಲ್ಲ. ಈ ಪತ್ರಿಕೆಯ ಮೂಲಕ ತಿಳಿಸುವುದೇನೆಂದರೆ ಈ ಸರಕಾರಿ ಶಾಲೆಗೆ ಸಂಬಂಧಿಸಿದ ಮೇಲಾಧಿಕಾರಿಗಳು ಆದಷ್ಟು ಬೇಗ ಅಂದರೆ 1 ವಾರದ ಒಳಗಡೆ ಎಲ್ಲ ಸಮಸ್ಯೆಗಳು ಬಗೆ ಹರಿಸಬೇಕು ಒಂದು ವೇಳೆ ನಿರ್ಲಕ್ಷ ವಹಿಸಿದರೆ ಇದಕ್ಕೆ ಸಂಬಂಧಿಸಿದ ಕಛೆರಿಗೆ ಮುತ್ತಿಗೆ ಹಾಕಿ ಉಗ್ರವಾದ ಹೊರಟ ಮಾಡಲಾಗುವುದು ಎಂದು ಎಚ್ಚರಿಕೆ ಕೊಡುತ್ತಿದ್ದೇವೆ ಎಂದು ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಯಡ್ರಾಮಿ ತಾಲೂಕು ಅಧ್ಯಕ್ಷರಾದ ರವಿ ಡಿ ಗುತ್ತೇದಾರ್ ಹಾಗೂ ಗೌರವ ಅಧ್ಯಕ್ಷರಾದ ಆನಂದ್ ಕುಮಾರ್ ಬಡಿಗೇರ್ ಮಾರಡಗಿ ತಿಳಿಸಿದರು ಮತ್ತು ಈ ಸಂದರ್ಬದಲ್ಲಿ ಬಿಳವಾರ ಹೋಬಳಿ ಘಟಕದ ಅಧ್ಯಕ್ಷರಾದ ಚಾಂದ್ ಪಟೇಲ್ ಮಾಲಿಪಾಟೀಲ್ ಹಾಗೂ ಉಪಾಧ್ಯಕ್ಷರಾದ ಇಬ್ರಾಹಿಂ ಪಟೇಲ್ ಚೌಕಿ ಮತ್ತು ಸಾಮಾಜಿಕ ಹೋರಾಟಗಾರರು ಭೀಮಪ್ಪ ನಾಟೇಕರ ಶಿವಪುರ ಮತ್ತು ಅಮಿತ್ ರೆಡ್ಡಿ ಹಾಗು ರೌತಪ್ಪ ಎಸ್ ಡಿ ಎಂ ಸಿ ಅಧ್ಯಕ್ಷರು ಶರಣು ಪೂಜಾರಿ ಕೃಷ್ಣಪ್ಪ ದೊರೆ ರವಿಕುಮಾರ್ ಚಂದ್ರಶೇಕರ್ ಮೊಹಮ್ಮದ್ ಸಾಬ್ ಮುಲ್ಲಾ ಶೇಕಪ್ಪ ಗುಡಿಮನಿ ಉಪಸ್ಥಿತರಿದ್ದರು….
ವರದಿ ಜೇಟ್ಟೆಪ್ಪ ಎಸ್ ಪೂಜಾರಿ.
ಗಬ್ಬೆದ್ದು ನಾರುತ್ತಿರುವ ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
