ಶ್ರದ್ಧಾ ಕಪೂರ್ ಮೇಲೆ ದಕ್ಷಿಣ ಭಾರತದವರಿಗೆ ಅಪಾರ ಸಿಟ್ಟಿದೆ. ಅದರಲ್ಲೂ ಪ್ರಭಾಸ್ ಫ್ಯಾನ್ಸ್ ಅವರನ್ನು ಹೆಚ್ಚು ಹೇಟ್ ಮಾಡುತ್ತಾರೆ. ಇದಕ್ಕೆ ಕಾರಣವೂ ಇದೆ.
Mar 03, 2023 | 8:36 AM





ತಾಜಾ ಸುದ್ದಿ
Updated on: Mar 03, 2023 | 8:36 AM
Mar 03, 2023 | 8:36 AM
ಶ್ರದ್ಧಾ ಕಪೂರ್ ಅವರು ಇಂದು (ಮಾರ್ಚ್ 3) ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಅವರಿಗೆ ಈಗ 36 ವರ್ಷ ವಯಸ್ಸು. ಚಿತ್ರರಂಗದಲ್ಲಿ ಶ್ರದ್ಧಾಗೆ ಸಾಕಷ್ಟು ಬೇಡಿಕೆ ಇದೆ.
ಶ್ರದ್ಧಾ ಕಪೂರ್ ಮೇಲೆ ದಕ್ಷಿಣ ಭಾರತದವರಿಗೆ ಅಪಾರ ಸಿಟ್ಟಿದೆ. ಅದರಲ್ಲೂ ಪ್ರಭಾಸ್ ಫ್ಯಾನ್ಸ್ ಅವರನ್ನು ಹೆಚ್ಚು ಹೇಟ್ ಮಾಡುತ್ತಾರೆ. ಇದಕ್ಕೆ ಕಾರಣವೂ ಇದೆ.
2019ರಲ್ಲಿ ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್ ನಟನೆಯ ‘ಸಾಹೋ’ ಸಿನಿಮಾ ತೆರೆಗೆ ಬಂತು. ಈ ಚಿತ್ರ ಫ್ಲಾಪ್ ಆಯಿತು. ದಕ್ಷಿಣದಲ್ಲಿ ಶ್ರದ್ಧಾ ನಟಿಸಿದ ಮೊದಲ ಸಿನಿಮಾ ಇದು.
ಈ ಚಿತ್ರ ಸೋಲುತ್ತಿದ್ದಂತೆ ಶ್ರದ್ಧಾ ಪ್ಲೇಟ್ ಬದಲಿಸಿದ್ದರು. ಈ ಚಿತ್ರದ ಬಗ್ಗೆ ಮಾತನಾಡುವುದನ್ನೇ ನಿಲ್ಲಿಸಿದರು. ಇದೇ ಸಂದರ್ಭದಲ್ಲಿ ರಿಲೀಸ್ ಆದ ‘ಚಿಚೋರೆ’ ಬಗ್ಗೆ ಅವರು ಪ್ರಚಾರ ಮಾಡೋಕೆ ಶುರು ಮಾಡಿದ್ದರು. ‘ಸಾಹೋ’ ಬಗ್ಗೆ ಕೇಳಿದ ಪ್ರಶ್ನೆಗೆ ಮೌನವೇ ಉತ್ತರ ಆಗಿತ್ತು.
ಶ್ರದ್ಧಾ ಬರ್ತ್ಡೇ ದಿನ ಪ್ರಭಾಸ್ ಅಭಿಮಾನಿಗಳು ಹಳೆಯ ಘಟನೆ ನೆನಪಿಸಿಕೊಳ್ಳುತ್ತಿದ್ದಾರೆ. ‘ಸಾಹೋ’ ಬಳಿಕ ಅವರು ದಕ್ಷಿಣಕ್ಕೆ ಕಾಲಿಡುವ ಪ್ರಯತ್ನ ಮಾಡಿಲ್ಲ.