9 C
Munich
Monday, March 20, 2023

Shruti Haasan Says She is Not drinking alcohol from Past 6 years | Shruti Haasan: ಶ್ರುತಿ ಹಾಸನ್ ಎಷ್ಟು ಮದ್ಯ ಸೇವನೆ ಮಾಡುತ್ತಾರೆ? ಓಪನ್ ಆಗಿ ಹೇಳಿದ ನಟಿ

ಓದಲೇಬೇಕು

ಶ್ರುತಿ ಹಾಸನ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಫನ್ನಿ ಪ್ರಶ್ನೆಗಳನ್ನು ಕೇಳುವಂತೆ ಫ್ಯಾನ್ಸ್ ಬಳಿ
ಅವರು ಕೋರಿಕೊಂಡಿದ್ದರು. ಅನೇಕರು ವಿವಿಧ ರೀತಿಯ ಪ್ರಶ್ನೆಗಳನ್ನು ಮುಂದಿಟ್ಟರು.

ಶ್ರುತಿ ಹಾಸನ್

ನಟಿ ಶ್ರುತಿ ಹಾಸನ್ (Shruti Haasan) ಅವರು ಚಿತ್ರರಂಗದಲ್ಲಿ ತಮ್ಮದೇ ಐಡೆಂಟಿಟಿ ಸೃಷ್ಟಿಸಿಕೊಂಡಿದ್ದಾರೆ. ಕಮಲ್ ಹಾಸನ್ (Kamal Haasan) ಮಗಳಾದ ಕಾರಣ ಅವರಿಗೆ ಚಿತ್ರರಂಗಕ್ಕೆ ಸುಲಭವಾಗಿ ಅವಕಾಶ ಸಿಕ್ಕಿತು. ತಮ್ಮ ವೃತ್ತಿಯನ್ನು ಅವರು ಗಂಭೀರವಾಗಿ ತೆಗೆದುಕೊಂಡ ಅವರು ನಟನೆ ಮೂಲಕ ಎಲ್ಲರ ಗಮನ ಸೆಳೆದರು. ಈ ಕಾರಣಕ್ಕೆ ಅವರಿಗೆ ಯಶಸ್ಸು ಸಿಕ್ಕಿದೆ. ಶ್ರುತಿ ಹಾಸನ್ ಆಗಾಗ ವೈಯಕ್ತಿಕ ವಿಚಾರಕ್ಕೂ ಸುದ್ದಿ ಆಗುತ್ತಿರುತ್ತಾರೆ. ಆಲ್ಕೋಹಾಲ್ ವಿಚಾರದಲ್ಲಿ ಶ್ರುತಿ ಹಾಸನ್ ಹೇಳಿರುವ ವಿಚಾರ ಅನೇಕರಿಗೆ ಅಚ್ಚರಿ ಮೂಡಿಸಿದೆ. ಈ ಬಗ್ಗೆ ಅಭಿಮಾನಿ ಕೇಳಿದ ಪ್ರಶ್ನೆಗೆ ಅವರು ನೇರವಾಗಿ ಉತ್ತರಿಸಿದ್ದಾರೆ.

ಶ್ರುತಿ ಹಾಸನ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗೋಸ್ಕರ ಅವರು ಆಗಾಗ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಅವರು ಇನ್​ಸ್ಟಾಗ್ರಾಮ್​ನಲ್ಲಿ ಪ್ರಶ್ನೋತ್ತರ ಸೆಷನ್ ನಡೆಸಿದ್ದರು. ಫನ್ನಿ ಪ್ರಶ್ನೆಗಳನ್ನು ಕೇಳುವಂತೆ ಫ್ಯಾನ್ಸ್ ಬಳಿ ಕೋರಿಕೊಂಡಿದ್ದರು. ಅನೇಕರು ವಿವಿಧ ರೀತಿಯ ಪ್ರಶ್ನೆಗಳನ್ನು ಮುಂದಿಟ್ಟರು.

ಅಭಿಮಾನಿ ಓರ್ವ ‘ವಿಸ್ಕಿ, ಬಿಯರ್, ಕಾಕ್ಟೇಲ್​, ವೋಡ್ಕಾ ಇವುಗಳಲ್ಲಿ ನಿಮ್ಮಿಷ್ಟದ ಪಾನೀಯ ಯಾವುದು’ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಶ್ರುತಿ ಹಾಸನ್ ಉತ್ತರಿಸಿದ್ದಾರೆ. ‘ನಾನು 6 ವರ್ಷಗಳಿಂದ ಮದ್ಯ ಸೇವನೆ ಮಾಡುತ್ತಿಲ್ಲ. ಹಾಗಾಗಿ ನಾನು ಆಲ್ಕೋಹಾಲ್ ಮುಟ್ಟುವುದಿಲ್ಲ. ಇವುಗಳಲ್ಲಿ ಯಾವುದೂ ನನ್ನ ಮೆಚ್ಚಿನ ಪಾನೀಯ ಅಲ್ಲ. ನಾನು ಕೆಲವೊಮ್ಮೆ ಆಲ್ಕೊಹಾಲ್​ ಇಲ್ಲದ ಬಿಯರ್ ಕುಡಿಯುತ್ತೇನೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ



ಇದನ್ನೂ ಓದಿ: ನಾನು ಚಾನ್ಸ್​ ಗಿಟ್ಟಿಸಿಕೊಳ್ಳಲು ಆ ರೀತಿಯ ಕೆಲಸವನ್ನು ಎಂದಿಗೂ ಮಾಡಿಲ್ಲ ಎಂದ ಶ್ರುತಿ ಹಾಸನ್

ಸಲಾರ್ ಶೂಟಿಂಗ್ ಮುಗಿಸಿದ ಶ್ರುತಿ

ಶ್ರುತಿ ಹಾಸನ್ ಅವರಿಗೆ 2023 ವಿಶೇಷ ಎನಿಸಿಕೊಂಡಿದೆ. ಅವರ ನಟನೆಯ ‘ವಾಲ್ತೇರು ವೀರಯ್ಯ’ ಹಾಗೂ ‘ವೀರ ಸಿಂಹ ರೆಡ್ಡಿ’ ಚಿತ್ರಗಳು ಬ್ಯಾಕ್​ ಟು ಬ್ಯಾಕ್ ರಿಲೀಸ್ ಆದವು. ಎರಡೂ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿತು. ಈ ವರ್ಷ ಅವರು ದೊಡ್ಡ ಯಶಸ್ಸು ಕಾಣುವ ನಿರೀಕ್ಷೆಯಲ್ಲಿದ್ದಾರೆ. ಅವರು ‘ಸಲಾರ್​’ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಇದ್ದರು. ಅವರು ಇತ್ತೀಚೆಗೆ ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಟನೆಯ ಈ ಸಿನಿಮಾಗೆ ಶ್ರುತಿ ಹಾಸನ್ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಭಾಗದ ಶೂಟಿಂಗ್​ನ ಪೂರ್ಣಗೊಳಿಸಿರುವ ಬಗ್ಗೆ ಶ್ರುತಿ ಹಾಸನ್ ಇತ್ತೀಚೆಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಪ್ರಮೋಷನ್​​ಗೆ ಚಕ್ಕರ್​, ಬಾಯ್​ಫ್ರೆಂಡ್ ಜತೆ ಸುತ್ತಾಟಕ್ಕೆ ಹಾಜರ್​; ಶ್ರುತಿ ಹಾಸನ್​ ನಡೆಗೆ ಅಸಮಾಧಾನ

‘ನನ್ನ ಭಾಗದ ಸಲಾರ್ ಶೂಟಿಂಗ್ ಪೂರ್ಣಗೊಂಡಿದೆ. ನನ್ನನ್ನು ಆದ್ಯ ಮಾಡಿದ್ದಕ್ಕೆ ಪ್ರಶಾಂತ್ ನಿಮಗೆ ಧನ್ಯವಾದ. ನೀವು ಅಸಾಧಾರಣ ವ್ಯಕ್ತಿ. ಡಾರ್ಲಿಂಗ್ ರೀತಿ ಇದ್ದಿದ್ದಕ್ಕೆ ಪ್ರಭಾಸ್ ನಿಮಗೂ ಥ್ಯಾಂಕ್ಸ್. ಭುವನ್ ನಿಮಗೂ ಥ್ಯಾಂಕ್ಸ್. ಹೊಂಬಾಳೆ ಫಿಲ್ಮ್ಸ್ ಜೊತೆ ಕೆಲಸ ಮಾಡಿದ್ದು ಖುಷಿ ನೀಡಿದೆ. ಕೊನೆಯಲ್ಲಿ ಇದು ಕುಟುಂಬದಂತೆ ಭಾಸವಾಗಿದೆ’ ಎಂದು ಶ್ರುತಿ ಬರೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!