-0.2 C
Munich
Tuesday, March 28, 2023

Sidharth Malhotra and Kiara Advani likely to act together in 3 movies with Dharma Productions | Sidharth Malhotra: ಕಿಯಾರಾ-ಸಿದ್ದಾರ್ಥ್​ ಜೊತೆ ದೊಡ್ಡ ಡೀಲ್ ಮಾಡಿದ ಕರಣ್ ಜೋಹರ್; ಬರಲಿದೆ ಮೂರು ಸಿನಿಮಾ?

ಓದಲೇಬೇಕು

Sidharth Malhotra | Kiara Advani: ಕಿಯಾರಾ ಅಡ್ವಾಣಿ ಅವರು ಸದ್ಯ 2 ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ರಾಮ್ ಚರಣ್ ನಟನೆಯ 15ನೇ ಸಿನಿಮಾಗೆ ಅವರು ನಾಯಕಿ. ‘ಸತ್ಯಪ್ರೇಮ್ ಕಿ ಕಥಾ’ ಚಿತ್ರದಲ್ಲೂ ಅವರು ಬಣ್ಣ ಹಚ್ಚುತ್ತಿದ್ದಾರೆ.

ಕಿಯಾರಾ ಅಡ್ವಾಣಿ, ಸಿದ್ದಾರ್ಥ್ ಮಲ್ಹೋತ್ರಾ

ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ (Kiara Advani) ಅವರು ಇತ್ತೀಚೆಗೆ ವಿವಾಹ ಆದರು. ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಸೂರ್ಯಗಢ ಹೋಟೆಲ್​ನಲ್ಲಿ ಇವರ ಮದುವೆ ಅದ್ದೂರಿಯಾಗಿ ನಡೆದಿದೆ. ಈ ಮೂಲಕ ಬಾಲಿವುಡ್​ನ ಕ್ಯೂಟ್ ಕಪಲ್ ಸಾಲಿಗೆ ಇವರು ಸೇರಿದ್ದಾರೆ. ಈಗ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ (Sidharth Malhotra) ಕಡೆಯಿಂದ ಅಭಿಮಾನಿಗಳಿಗೆ ಸರ್​​ಪ್ರೈಸ್ ಸುದ್ದಿ ಸಿಗೋ ಸೂಚನೆ ಸಿಕ್ಕಿದೆ. ಈ ದಂಪತಿ ಮೂರು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆ ಸಿನಿಮಾಗಳಿಗೆ ಕರಣ್ ಜೋಹರ್ (Karan Johar) ಒಡೆತನದ ‘ಧರ್ಮ ಪ್ರೊಡಕ್ಷನ್ಸ್​’ ಬಂಡವಾಳ ಹೂಡುವ ಸಾಧ್ಯತೆ ಇದೆ.

ಕರಣ್ ಜೋಹರ್ ಅವರು ಅನೇಕ ಸೆಲೆಬ್ರಿಟಿಗಳ ಮಕ್ಕಳನ್ನು ಲಾಂಚ್ ಮಾಡಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರಾ ಅವರನ್ನು ‘ಸ್ಟುಡೆಂಟ್ ಆಫ್ ದಿ ಇಯರ್’ ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದರು ಕರಣ್​. ಹೀಗಾಗಿ ಇಬ್ಬರ ಮಧ್ಯೆ ಆಪ್ತತೆ ಇದೆ. ಕಿಯಾರಾ ನಟನೆಯ ‘ಲಸ್ಟ್ ಸ್ಟೋರಿಸ್’ ಸಿನಿಮಾಗೆ ಕರಣ್ ಜೋಹರ್ ಬಂಡವಾಳ ಹೂಡಿದರು. ಅಲ್ಲಿಂದ ಕಿಯಾರಾ ಜೊತೆಗೆ ಕರಣ್ ಒಳ್ಳೆಯ ಫ್ರೆಂಡ್​ಶಿಪ್ ಬೆಳೆಸಿಕೊಂಡರು. ಹೀಗಾಗಿ, ಸಿದ್ದಾರ್ಥ್ ಹಾಗೂ ಕಿಯಾರಾಗೆ ಕರಣ್ ಮೆಂಟರ್ ಕೂಡ ಹೌದು.

ಇದನ್ನೂ ಓದಿ: Kiara Advani Wedding: ಮದುವೆ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಸಿದ್ದಾರ್ಥ್​-ಕಿಯಾರಾ ಅಡ್ವಾಣಿ

ಮದುವೆ ಹಾಗೂ ರೆಸೆಪ್ಷನ್ ಸಂದರ್ಭದಲ್ಲಿ ಕರಣ್ ಜೋಹರ್ ಹಾಜರಿದ್ದರು. ಅವರು ಮದುವೆ ಸಂಭ್ರಮದಲ್ಲಿ ಭಾಗಿ ಆಗಿ ಎಂಜಾಯ್ ಮಾಡಿದ್ದಾರೆ. ಅಷ್ಟೇ ಅಲ್ಲ ನವದಂಪತಿ ಜತೆ ಅವರು ದೊಡ್ಡ ಡೀಲ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಿದ್ದಾರ್ಥ್ ಹಾಗೂ ಕಿಯಾರಾ ಒಟ್ಟಾಗಿ ಮೂರು ಸಿನಿಮಾಗಳಲ್ಲಿ ನಟಿಸಲು ಒಪ್ಪಿದ್ದಾರೆ. ಇದಕ್ಕೆ ಧರ್ಮ ಪ್ರೊಡಕ್ಷನ್ ಬಂಡವಾಳ ಹೂಡಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಸದ್ಯ ಈ ವಿಚಾರ ವದಂತಿ ಆಗಿಯೇ ಇದೆ. ಧರ್ಮ ಪ್ರೊಡಕ್ಷನ್ ಕಡೆಯಿಂದ ಅಥವಾ ದಂಪತಿ ಕಡೆಯಿಂದ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇದನ್ನೂ ಓದಿ: ಮದುವೆ ಆದ ಖುಷಿಯಲ್ಲಿ ಕಿಯಾರಾ ಅಡ್ವಾಣಿ ತುಟಿಗೆ ಮುತ್ತಿಟ್ಟ ಸಿದ್ದಾರ್ಥ್​; ಇಲ್ಲಿದೆ ವಿಡಿಯೋ

2021ರಲ್ಲಿ ತೆರೆಗೆ ಬಂದ ‘ಶೇರ್ಷಾ’ ಸಿನಿಮಾ ಸೂಪರ್ ಹಿಟ್ ಆಯಿತು. ನೇರವಾಗಿ ಈ ಚಿತ್ರ ಒಟಿಟಿಗೆ ಕಾಲಿಟ್ಟ ಹೊರತಾಗಿಯೂ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆಯಿತು. ಈ ಚಿತ್ರದಲ್ಲಿ ಸಿದ್ದಾರ್ಥ್ ಹಾಗೂ ಕಿಯಾರಾ ಒಟ್ಟಾಗಿ ನಟಿಸಿದ್ದರು. ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡ ಮೊದಲ ಸಿನಿಮಾ ಇದು. ಈ ಚಿತ್ರದಲ್ಲಿ ಇವರ ಕೆಮಿಸ್ಟ್ರಿ ಕೆಲಸ ಮಾಡಿದೆ. ಈಗ ಇವರು ಪತಿ-ಪತ್ನಿ ಆಗಿದ್ದಾರೆ. ಸೆಲೆಬ್ರಿಟಿ ಜೋಡಿ ಮದುವೆಯಾದರೆ, ಅವರನ್ನು ತೆರೆಮೇಲೆ ಒಟ್ಟಾಗಿ ನೋಡಬೇಕು ಅನ್ನೋದು ಅಭಿಮಾನಿಗಳ ಆಸೆ ಆಗಿರುತ್ತದೆ. ಈಗ ಕಿಯಾರಾ ಹಾಗೂ ಸಿದ್ದಾರ್ಥ್ ಮೂರು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸುತ್ತಿರುವ ವಿಚಾರ ನಿಜವೇ ಆದಲ್ಲಿ ಅವರ ಅಭಿಮಾನಿಗಳಿಗೆ ಈ ವಿಚಾರ ಸಖತ್ ಖುಷಿ ನೀಡಲಿದೆ.

ಇದನ್ನೂ ಓದಿ: ಕಿಯಾರಾ-ಸಿದ್ದಾರ್ಥ್ ಆರತಕ್ಷತೆ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳ ದಂಡು; ಇಲ್ಲಿವೆ ಫೋಟೋಗಳು

ಕಿಯಾರಾ ಅಡ್ವಾಣಿ ಅವರು ಸದ್ಯ 2 ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ರಾಮ್ ಚರಣ್ ನಟನೆಯ 15ನೇ ಸಿನಿಮಾಗೆ ಅವರು ನಾಯಕಿ. ‘ಸತ್ಯಪ್ರೇಮ್ ಕಿ ಕಥಾ’ ಚಿತ್ರದಲ್ಲೂ ಅವರು ಬಣ್ಣ ಹಚ್ಚುತ್ತಿದ್ದಾರೆ. ಸಿದ್ದಾರ್ಥ್ ‘ಯೋಧ’ ಸಿನಿಮಾ ಹಾಗೂ ರೋಹಿತ್ ಶೆಟ್ಟಿ ನಿರ್ದೇಶನದ ‘ಇಂಡಿಯನ್ ಪೊಲೀಸ್ ಫೋರ್ಸ್​’ ವೆಬ್​ ಸೀರಿಸ್​​ನಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಈ ಸೀರಿಸ್​ನಲ್ಲಿ ಶಿಲ್ಪಾ ಶೆಟ್ಟಿ ಮೊದಲಾದವರು ನಟಿಸಿದ್ದಾರೆ.

ಶ್ರೀಲಕ್ಷ್ಮಿ ಎಚ್​.

ಇದನ್ನೂ ಓದಿಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!