8.3 C
Munich
Friday, March 10, 2023

Skin Cancer: US President Joe Biden had cancerous skin lesion removed in February | Joe Biden: ಅಮೆರಿಕದ ಅಧ್ಯಕ್ಷ ಜೋ ಬೈಡನ್​ಗಿತ್ತು ಕ್ಯಾನ್ಸರ್, ಶಸ್ತ್ರ ಚಿಕಿತ್ಸೆ ಬಳಿಕ ಸಂಪೂರ್ಣ ಗುಣಮುಖ

ಓದಲೇಬೇಕು

ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಇದೀಗ ಕ್ಯಾನ್ಸರ್​ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕ್ಯಾನ್ಸರ್ ಅನ್ನು ತೆಗೆದುಹಾಕಲಾಗಿದೆ.

ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಇದೀಗ ಕ್ಯಾನ್ಸರ್​ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕ್ಯಾನ್ಸರ್ ಅನ್ನು ತೆಗೆದುಹಾಕಲಾಗಿದೆ. ಅವರು ಇದೀಗ ಗುಣಮುಖರಾಗಿದ್ದು, ಹೆಚ್ಚಿನ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಶ್ವೇತಭವನದ ವೈದ್ಯ ಕೆವಿನ್ ಓ ಕಾನರ್ ತಿಳಿಸಿದ್ದಾರೆ. 80 ವರ್ಷ ವಯಸ್ಸಿನ ಅಮೆರಿಕ ಅಧ್ಯಕ್ಷರಿಗೆ (US President) ಎದೆಯಲ್ಲಿ ಚರ್ಮದ ಕ್ಯಾನ್ಸರ್ (Cancer) ಕಾಣಿಸಿಕೊಂಡಿತ್ತು, ಅದನ್ನು ಫೆಬ್ರವರಿ ತಿಂಗಳಿನಲ್ಲಿ ತೆಗೆದುಹಾಕಲಾಗಿದೆ. ಬೈಡನ್‌ಗೆ ಇದ್ದಿದ್ದ ಎಲ್ಲಾ ಕ್ಯಾನ್ಸರ್ ಅಂಗಾಂಶಗಳನ್ನು ಯಶಸ್ವಿಯಾಗಿ ತೆಗೆದುಹಾಕಲಾಗಿದೆ.

ಅವರ ಆರೋಗ್ಯದ ರಕ್ಷಣೆಯ ಭಾಗವಾಗಿ ಅವರ ಮೇಲೆ ನಿಗಾ ಇರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಣ್ಣ ಗಾಯವನ್ನು ಬಾಸಲ್ ಸೆಲ್ ಕಾರ್ಸಿನೋಮ ಎಂದು ಕರೆಯಲಾಗುತ್ತದೆ. ಇದು ಕ್ಯಾನ್ಸರ್ ರೂಪವನ್ನು ತೆಗೆದುಕೊಳ್ಳಬಹುದು. ಯುಎಸ್ ಅಧ್ಯಕ್ಷ ಬೈಡನ್ ಈಗ ಆರೋಗ್ಯವಾಗಿದ್ದಾರೆ ಮತ್ತು ಹೆಚ್ಚಿನ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಮತ್ತಷ್ಟು ಓದಿ: ಹುಳಿ ಮತ್ತು ಖಾರವನ್ನು ಸಿಹಿಮಾಡುವ ಶಕ್ತಿ ಈ ಹಣ್ಣಿಗಿದೆ, ಯಾವುದು ಈ ಹಣ್ಣು?

ಈ ಕ್ಯಾನ್ಸರ್​ಗಳು ಇತರ ಕ್ಯಾನ್ಸರ್​ಗಳಂತೆ ಹರಡುವುದಿಲ್ಲ ಆದರೆ ಗಾತ್ರದಲ್ಲಿ ಹೆಚ್ಚಾಗಬಹುದು, ಅದಕ್ಕಾಗಿಯೇ ಅವುಗಳನ್ನು ತೆಗೆದುಹಾಕಲಾಗುತ್ತದೆ. ಬೈಡನ್ ಅವರ ಎದೆಯಿಂದ ಅದನ್ನು ತೆಗೆದುಹಾಕಲಾಗಿದೆ ಮತ್ತು ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಫೆಬ್ರವರಿ 16ರಂದು ಬೈಡನ್ ಅವರ ವಾರ್ಷಿಕ ವೈದ್ಯಕೀಯ ತಪಾಸಣೆಯ ವೇಳೆ ಎದೆಯ ಮೇಲಿದ್ದ ಗಾಯವನ್ನು ತೆಗೆದುಹಾಕಲಾಗಿತ್ತು. ಜೋ ಬೈಡನ್ ಅವರು 2024ರಲ್ಲಿ 2ನೇ ಬಾರಿ ಅಧ್ಯಕ್ಷರಾಗುವ ನಿರೀಕ್ಷೆಯಲ್ಲಿ ತಯಾರಿ ನಡೆಸುತ್ತಿದ್ದಾರೆ. ಆದರೂ ಅವರ ಪತ್ನಿ ಜಿಲ್ ಬೈಡನ್ ಸ್ಪರ್ಧಿಸಲು ಯೋಜಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗೆಗಿನ ನಿರ್ಧಾರವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!