14.7 C
Munich
Tuesday, March 21, 2023

Sophie Devine was walking off the entire RCB dugout gave her a standing ovation in WPL 2023 Match Viral Video | Sophie Devine: 99 ರನ್​ಗೆ ಔಟಾಗಿ ಬಂದ ಸೋಫಿಗೆ ಆರ್​ಸಿಬಿ ಪ್ಲೇಯರ್ಸ್ ಡಗೌಟ್​ನಲ್ಲಿ ಏನು ಮಾಡಿದ್ರು ನೋಡಿ

ಓದಲೇಬೇಕು

WPL 2023, RCB vs GG: ಗುಜರಾತ್ ಗೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 36 ಎಸೆತಗಳಲ್ಲಿ ಸೋಫಿ ಡಿವೈನ್ ಬರೋಬ್ಬರಿ 8 ಸಿಕ್ಸರ್, 9 ಫೋರ್​ನೊಂದಿಗೆ 99 ರನ್​ಗೆ ಔಟಾದರು. ಈ ಸಂದರ್ಭ ಆರ್​ಸಿಬಿ ತಂಡದ ಎಲ್ಲ ಆಟಗಾರರು ಏನು ಮಾಡಿದರು ನೋಡಿ.

sophie devine and RCB Dugout

ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿ (WPL 2023) ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಸತತ ಐದು ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಫಿನಿಕ್ಸ್​ನಂತೆ ಎದ್ದು ಬಂದಿದ್ದು ಇದೀಗ ಒಂದರ ಹಿಂದೆ ಒಂದರಂತೆ ಭರ್ಜರಿ ಗೆಲುವು ಸಾಧಿಸಿ ಪ್ಲೇ ಆಫರ್ ರೇಸ್​ನಲ್ಲಿ ಉಳಿದುಕೊಂಡಿದೆ. ಶನಿವಾರ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಗೈಂಟ್ಸ್ ವಿರುದ್ಧದ ಪಂದ್ಯದಲ್ಲಂತು ಆರ್​ಸಿಬಿ (RCB vs GG) ಮಹಿಳಾ ತಂಡದ ಬ್ಯಾಟರ್​ಗಳು ಅಬ್ಬರಿಸಿದರು. ಮುಖ್ಯವಾಗಿ ಸೋಫಿ ಡಿವೈನ್ (Sophie Devine) ಸ್ಫೋಟಕ ಬ್ಯಾಟಿಂಗ್ ನಡೆಸಿ ರಾಯಲ್ ಚಾಲೆಂಜರ್ಸ್ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸುವಲ್ಲಿ ಮುಖ್ಯ ಪಾತ್ರವಹಿಸಿದರು.

ಕೇವಲ 36 ಎಸೆತಗಳನ್ನು ಎದುರಿಸಿದ ಸೋಫಿ ಡಿವೈನ್ ಬರೋಬ್ಬರಿ 8 ಸಿಕ್ಸರ್, 9 ಫೋರ್​ನೊಂದಿಗೆ 99 ರನ್​ಗೆ ಔಟಾದರು. ಈ ಮೂಲಕ 1 ರನ್​ಗಳಿಂದ ಶತಕ ವಂಚಿತರಾದರು. ಈ ಆಟ ನೋಡಿ ಪುಳಕಗೊಂಡ ಅಭಿಮಾನಿಗಳು ಡಿವೈನ್‌ ಆರ್‌ಸಿಬಿಯ ಕ್ರಿಸ್‌ ಗೇಲ್‌ ಎಂದು ಹೇಳುತ್ತಿದ್ದಾರೆ. ಆರ್​ಸಿಬಿಯಲ್ಲಿ ಗೇಲ್ ಇದ್ದಾಗ ಹೇಗೆ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿದ್ದರೋ ಅದೇರೀತಿ ಸೋಫಿ ಗುಜರಾತ್ ವಿರುದ್ಧ ಅಬ್ಬರಿಸಿದರು. ಇವರು 99 ರನ್​ಗೆ ಔಟಾಗಿ ಡಗೌಟ್​​ನತ್ತ ಬಂದಾಗ ಆರ್​ಸಿಬಿ ತಂಡದ ಬಹುತೇಕ ಎಲ್ಲ ಆಟಗಾರರು ಎದ್ದು ನಿಂತು ತಲೆಬಾಗಿ ವಿಶೇಷವಾಗಿ ಧನ್ಯವಾದ ತಿಳಿಸಿದರು.

ಇದನ್ನೂ ಓದಿ



Kane Williamson: ಸಚಿನ್, ಸೆಹ್ವಾಗ್ ದಾಖಲೆ ಸರಿಗಟ್ಟಿದ ಕೇನ್ ವಿಲಿಯಮ್ಸನ್

ಪಂದ್ಯ ಮುಗಿದ ಬಳಿಕ ಮಾತನಾಡಿದ ಸೋಫಿ ಡಿವೈನ್, ”ನಾವು ಪ್ಲೇ ಆಫ್ ರೇಸ್​ನಲ್ಲಿ ಇನ್ನೂ ಜೀವಂತವಾಗಿದ್ದೇವೆ. ಕೆಲವು ಪಂದ್ಯಗಳನ್ನು ನಾನು ಗಮನಿಸಿದ್ದೇನೆ. ಪ್ರತಿ ದಿನ ಇಲ್ಲಿ ಒಂದೊಂದು ವಿಚಾರಗಳನ್ನು ಕಲಿಯುತ್ತಿದ್ದೇವೆ. ಈ ವಾತಾವರಣ ತುಂಬಾ ಕಷ್ಟಕರವಾಗಿತ್ತು. ಬೌಲರ್​ಗಳು ಹರಸಾಹಸ ಪಟ್ಟರು. 99 ರನ್​ಗೆ ಔಟಾಗಿದ್ದು ಬೇಸರವಿಲ್ಲ. ತಂಡಕ್ಕಾಗಿ ಕೊಡುಗೆ ನೀಡುವುದು ಮುಖ್ಯ,” ಎಂಬುದಾಗಿ ಹೇಳಿದ್ದಾರೆ.

ಗುಜರಾತ್ ನೀಡಿದ 189 ರನ್‌ಗಳ ಕಠಿಣ ‌ಗುರಿ ಬೆನ್ನತ್ತಿದ ಆರ್‌ಸಿಬಿ 15.3 ಓವರ್‌ಗಳಲ್ಲಿ 2 ವಿಕೆಟ್‌ ‌ಕಳೆದುಕೊಂಡು ಗೆಲುವು ಸಾಧಿಸಿತು. ಸೋಫಿ ಹಾಗೂ ನಾಯಕಿ ಸ್ಮೃತಿ ಮಂದಾನ (37) ಮೊದಲ ವಿಕೆಟ್‌ ಜೊತೆಯಾಟದಲ್ಲಿ 125 ರನ್‌ ಗಳಿಸಿದರು. ಚೆಂಡನ್ನು ಮನಬಂದಂತೆ ದಂಡಿಸಿದ ಡಿವೈನ್​ ಅಕ್ಷರಶಃ ಕ್ರೀಡಾಂಗಣದಲ್ಲಿ ಅಲೆ ಎಬ್ಬಿಸಿದರು. ಟಿ20 ಕ್ರಿಕೆಟ್​ನ ರಸದೌತಣ ನೀಡಿದರು. ನ್ಯೂಜಿಲೆಂಡ್​ ತಂಡದಲ್ಲಿ ಬೌಲರ್​ ಆಗಿ ವೃತ್ತಿಜೀವನ ಆರಂಭಿಸಿದ್ದ ಸೋಫಿ, ಬಳಿಕ ಆಲ್​ರೌಂಡರ್ ಆಗಿ ಗುರುತಿಸಿಕೊಂಡರು. ಟಿ20 ಪಂದ್ಯದಲ್ಲಿ ಇದು ಅವರ ಅತ್ಯದ್ಭುತ ಪ್ರದರ್ಶನವಾಗಿದೆ.

ಸ್ಮೃತಿ- ಸೋಫಿ ನಿರ್ಗಮನದ ಬಳಿಕ ಎಲಿಸ್‌ ಪೆರಿ (ಔಟಾಗದೆ 19) ಮತ್ತು ಹೀದರ್ ನೈಟ್‌ (ಔಟಾಗದೆ 22) ತಂಡವನ್ನು ಜಯದ ದಡ ಸೇರಿಸಿದರು. ಈ ಮೂಲಕ ಆರ್​ಸಿಬಿ ತಂಡ 27 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿತು. ಇದಕ್ಕೂ ಮೊದಲು ಬ್ಯಾಟ್​ ಮಾಡಿದ ಗುಜರಾತ್​ ಗೈಂಟ್ಸ್​ ಲಾರಾ ವೊಲ್ವಾರ್ಡ್​ರ (68) ಅರ್ಧಶತಕ, ಗಾರ್ಡ್ನರ್​ರ (41) ಹೋರಾಟದ ಬಲದಿಂದ 20 ಓವರ್​ಗಳಲ್ಲಿ 4 ವಿಕೆಟ್‌ಗೆ 188 ರನ್ ಬೃಹತ್​ ಮೊತ್ತ ಪೇರಿಸಿತು. ಆರ್​ಸಿಬಿ ಪರ ಶ್ರೆಯಾಂಕ ಪಾಟಿಲ್ 2 ವಿಕೆಟ್ ಪಡೆದರು. ಪಂದ್ಯಶ್ರೇಷ್ಠ ಪ್ರಶಸ್ತಿ ಸೋಫಿ ಪಾಲಾಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!