5.2 C
Munich
Friday, March 3, 2023

Sri Lanka minister MUM Ali Sabry thanked India on economic recovery in island nation | ದ್ವೀಪ ರಾಷ್ಟ್ರದ ಆರ್ಥಿಕ ಚೇತರಿಕೆಗೆ ಭಾರತ ಬಹಳಷ್ಟು ಸಹಾಯ ಮಾಡಿದೆ: ಶ್ರೀಲಂಕಾ ವಿದೇಶಾಂಗ ಸಚಿವ ಎಂಯುಎಂ ಅಲಿ ಸಬ್ರಿ

ಓದಲೇಬೇಕು

ಶ್ರೀಲಂಕಾದ ಪ್ರಸ್ತುತ ಪರಿಸ್ಥಿತಿಯ ಬಗ್ಗೆಯೂ ಮಾತನಾಡಿದ ಸಚಿವರು, ಹಣದುಬ್ಬರ ನಿಯಂತ್ರಣದಲ್ಲಿದೆ ಮತ್ತು ಸ್ಥಳೀಯ ಕರೆನ್ಸಿ ಸ್ಥಿರವಾಗಿದೆ ಎಂದು ಹೇಳಿದರು.

ಎಂಯುಎಂ ಅಲಿ ಸಬ್ರಿ

ಕಳೆದ ವರ್ಷ ಆರ್ಥಿಕ ಬಿಕ್ಕಟ್ಟಿನಿಂದ(economic crisis) ಚೇತರಿಸಿಕೊಳ್ಳಲು ತಮ್ಮ ದೇಶಕ್ಕೆ ಸಹಾಯ ಮಾಡಿದ ಭಾರತಕ್ಕೆ ಶ್ರೀಲಂಕಾ(Sri Lanka) ಶುಕ್ರವಾರ ಧನ್ಯವಾದಗಳನ್ನು ಅರ್ಪಿಸಿದೆ. ಶ್ರೀಲಂಕಾದ ವಿದೇಶಾಂಗ ಸಚಿವ ಎಂಯುಎಂ ಅಲಿ ಸಬ್ರಿ (MUM Ali Sabry), ಇತರ ಎಲ್ಲಾ ದೇಶಗಳು ಒಟ್ಟಾಗಿ ಭಾರತವು ತನ್ನ ರಾಷ್ಟ್ರಕ್ಕಾಗಿ ಮಾಡಿದ್ದನ್ನು ಮಾಡಿಲ್ಲ ಎಂದು ಹೇಳಿದರು. “ನಮ್ಮ ಚೇತರಿಕೆ ಮತ್ತು ಸ್ಥಿರವಾಗಿ ನಿಲ್ಲುವುದಕ್ಕೆ ಶ್ರೇಷ್ಠ ಪಾಲುದಾರ ಭಾರತ. ಭಾರತವು ನಮಗಾಗಿ ಮಾಡಿದ್ದನ್ನು ಇತರ ಎಲ್ಲ ದೇಶಗಳು ಒಟ್ಟಾಗಿ ಮಾಡಿಲ್ಲ ಎಂದು ನಾನು ಭಾವಿಸುತ್ತೇನೆ.  3.9 ಬಿಲಿಯನ್ ಅಮೆರಿಕನ್ ಡಾಲರ್  ಮೌಲ್ಯದ ಕ್ರೆಡಿಟ್ ಲೈನ್ ನಮಗೆ ಇನ್ನೊಂದು ದಿನ ಹೋರಾಡಲು ಜೀವಸೆಲೆ ನೀಡಿದೆ. ನಾವು ಭಾರತಕ್ಕೆ ತುಂಬಾ ಆಭಾರಿಯಾಗಿದ್ದೇವ ಎಂದು ಸಚಿವರನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

ಶ್ರೀಲಂಕಾದ ಪ್ರಸ್ತುತ ಪರಿಸ್ಥಿತಿಯ ಬಗ್ಗೆಯೂ ಮಾತನಾಡಿದ ಸಚಿವರು, ಹಣದುಬ್ಬರ ನಿಯಂತ್ರಣದಲ್ಲಿದೆ ಮತ್ತು ಸ್ಥಳೀಯ ಕರೆನ್ಸಿ ಸ್ಥಿರವಾಗಿದೆ ಎಂದು ಹೇಳಿದರು.ಕಳೆದ ಮೇ-ಜೂನ್ ಕುಸಿತದಿಂದ ಶ್ರೀಲಂಕಾ ಬಹಳ ದೂರ ಸಾಗಿದೆ. ನಮ್ಮ ಹಣದುಬ್ಬರವು ನಿಯಂತ್ರಣದಲ್ಲಿದೆ, ರೂಪಾಯಿ ಸ್ಥಿರವಾಗಿದೆ. ಪ್ರವಾಸೋದ್ಯಮ ಪುಟಿದೆದ್ದಿದೆ. ಶ್ರೀಲಂಕಾದವರು ತಮ್ಮ ಹಣವನ್ನು ಸಾಮಾನ್ಯ ಮಾರ್ಗಗಳ ಮೂಲಕ ಹಿಂತಿರುಗಿಸಲು ಪ್ರಾರಂಭಿಸಿದ್ದಾರೆ ಎಂದು ಸಬ್ರಿ ಹೇಳಿದರು.

“ಇದು ಸ್ಥಿರತೆಗೆ ಅಡಿಪಾಯವಾಗಿದೆ. ಅದರೊಂದಿಗೆ ನಾವು IMF EFF ಕಾರ್ಯಕ್ರಮವನ್ನು ಈ ತಿಂಗಳ ಅಂತ್ಯದವರೆಗೆ ನಿರೀಕ್ಷಿಸುತ್ತಿದ್ದೇವೆ. ಆದ್ದರಿಂದ, ಅದರೊಂದಿಗೆ ನಾವು ಚೇತರಿಕೆಯ ಹಾದಿಗೆ ಮರಳಿದ್ದೇವೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು
ಶುಕ್ರವಾರ, ಕೊಲಂಬೊ ತನ್ನ ಆರ್ಥಿಕತೆಯನ್ನು ಸ್ಥಿರವಾಗಿಡಲು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಸಾಲದಿಂದ  2.9 ಶತಕೋಟಿ ಡಾಲರ್ ಸಾಲವನ್ನು ಬಯಸುತ್ತಿರುವುದರಿಂದ ಹಣದುಬ್ಬರವನ್ನು ತಗ್ಗಿಸಲು ಐದು ಸಭೆಗಳಲ್ಲಿ ಮೊದಲ ಬಾರಿಗೆ ಸಾಲದ ವೆಚ್ಚವನ್ನು ಹೆಚ್ಚಿಸಿತು ಎಂದು ಬ್ಲೂಂಬರ್ಗ್ ವರದಿ ಮಾಡಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಬೆಲೆ ಏರಿಕೆ ಬಿಸಿ, 58 ವರ್ಷಗಳ ನಂತರ ದಾಖಲೆ ಮಟ್ಟಕ್ಕೆ ಏರಿದ ಹಣದುಬ್ಬರ

ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ಸ್ಟ್ಯಾಂಡಿಂಗ್ ಲೆಂಡಿಂಗ್ ದರವನ್ನು 100 ಬೇಸಿಸ್ ಪಾಯಿಂಟ್‌ಗಳಿಂದ ಶೇಕಡಾ 16.5 ಕ್ಕೆ ಹೆಚ್ಚಿಸಿದೆ. “ಹಣದುಬ್ಬರ ದೃಷ್ಟಿಕೋನದಲ್ಲಿ CBSL ಮತ್ತು IMF ಸಿಬ್ಬಂದಿಗಳ ನಡುವೆ ಕೆಲವು ವ್ಯತ್ಯಾಸಗಳಿವೆ” ಎಂದು ಸೆಂಟ್ರಲ್ ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!