2.7 C
Munich
Saturday, February 25, 2023

SS Rajamouli Directorial Movie RRR Won four awards in Hollywood Critics Association awards | ಹಾಲಿವುಡ್​ನಲ್ಲಿ ‘ಆರ್​ಆರ್​ಆರ್​’ ಸಾಧನೆ; ಒಂದೇ ವೇದಿಕೆಯಲ್ಲಿ ನಾಲ್ಕು ಪ್ರಶಸ್ತಿ ಬಾಚಿದ ರಾಜಮೌಳಿ ಸಿನಿಮಾ

ಓದಲೇಬೇಕು

ಪ್ರಶಸ್ತಿ ಗೆದ್ದ ಖುಷಿಯಲ್ಲಿ ರಾಮ್ ಚರಣ್ ಅವರನ್ನು ವೇದಿಕೆ ಮೇಲೆ ಕರೆತಂದರು ರಾಜಮೌಳಿ. ಈ ವೇಳೆ ಮಾತನಾಡಿದ ರಾಮ್ ಚರಣ್ ಒಳ್ಳೊಳ್ಳೆಯ ಸಿನಿಮಾ ಮಾಡುವ ಭರವಸೆಯನ್ನು ನೀಡಿದರು.

‘ಆರ್​ಆರ್​ಆರ್​’ ಸಿನಿಮಾ (RRR Movie) ಭಾರತೀಯ ಚಿತ್ರರಂಗದಲ್ಲಿ ಹೊಸ ಹೊಸ ಸಾಧನೆ ಮಾಡುತ್ತಿದೆ. ಈ ಚಿತ್ರ ಈಗ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ಸ್ ಫಿಲ್ಮ್​ ಅವಾರ್ಡ್ಸ್​ನಲ್ಲಿ ನಾಲ್ಕು ಪ್ರಶಸ್ತಿ ಬಾಚಿಕೊಂಡಿದೆ. ಹಾಲಿವುಡ್​ ಚಿತ್ರಗಳನ್ನು ಹಿಂದಿಕ್ಕಿ ಸಿನಿಮಾ ಅವಾರ್ಡ್ ಗೆದ್ದಿರೋದು ವಿಶೇಷ. ಪ್ರಶಸ್ತಿ ಗೆದ್ದ ಖುಷಿಯಲ್ಲಿ ರಾಜಮೌಳಿ (SS Rajamoli) ಅವರು ವೇದಿಕೆ ಮೇಲೆ ಸಂತಸ ಹಂಚಿಕೊಂಡಿದ್ದಾರೆ. ಈ ಎಲ್ಲಾ ಕಾರಣದಿಂದ ಆಸ್ಕರ್ ಅವಾರ್ಡ್​ ಮೇಲೆ ಭಾರತೀಯರ ದೃಷ್ಟಿ ನೆಟ್ಟಿದೆ.

ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ಸ್ ಫಿಲ್ಮ್​ ಅವಾರ್ಡ್ಸ್​ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು. ಇಲ್ಲಿ, ಅತ್ಯುತ್ತಮ ಆ್ಯಕ್ಷನ್ ಸಿನಿಮಾ, ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ, ಅತ್ಯುತ್ತಮ ಒರಿಜಿನಲ್ ಹಾಡು ಹಾಗೂ ಅತ್ಯುತ್ತಮ ಸ್ಟಂಟ್ಸ್​ ವಿಭಾಗದಲ್ಲಿ ‘ಆರ್​ಆರ್​ಆರ್​’ ಚಿತ್ರ ಗೆಲುವು ಕಂಡಿದೆ. ಭಾರತ ಚಿತ್ರರಂಗದ ಪಾಲಿಗೆ ಈ ಅವಾರ್ಡ್ ವಿಶೇಷ ಎನಿಸಿಕೊಂಡಿದೆ.

ಇದನ್ನೂ ಓದಿಅತ್ಯುತ್ತಮ ಆ್ಯಕ್ಷನ್ ಸಿನಿಮಾ ಅವಾರ್ಡ್ ಗೆದ್ದ ಬಳಿಕ ಮಾತನಾಡಿದ ಎಸ್.ಎಸ್. ರಾಜಮೌಳಿ, ‘ನನಗೆ ರೆಕ್ಕೆ ಬೆಳೆಯುತ್ತಿದೆ ಅನಿಸುತ್ತಿದೆ. ನನ್ನ ಖುಷಿಯನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ. ಎಲ್ಲರಿಗೂ ಧನ್ಯವಾದಗಳು. ಬೆಸ್ಟ್​ ಆ್ಯಕ್ಷನ್ ಸಿನಿಮಾ, ಬೆಸ್ಟ್ ಸ್ಟಂಟ್ಸ್​ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ಬಹುಶಃ ಬೆಸ್ಟ್ ಸ್ಟಂಟ್ಸ್ ಸಿನಿಮಾ ಅವಾರ್ಡ್​ ಕೊರಿಯೋಗ್ರಾಫರ್​ಗೆ ಸಲ್ಲಬೇಕು. ಅವರು ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಎಲ್ಲಾ ಮುಖ್ಯ ಪ್ರಶಸ್ತಿ ವಿತರಕರು ಸ್ಟಂಟ್ಸ್​ ಕೋರಿಯೋಗ್ರಾಫರ್​ಗೋಸ್ಕರ ಒಂದು ವಿಭಾಗ ಆರಂಭಿಸಬೇಕು. ನನ್ನ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ನಮ್ಮೆಲ್ಲರನ್ನು ರಂಜಿಸಲು ನಿಜವಾಗಿಯೂ ಶ್ರಮಿಸುವ ಎಲ್ಲಾ ಸ್ಟಂಟ್ ಕೊರಿಯೋಗ್ರಾಫರ್‌ಗಳ ಪರವಾಗಿ ನನ್ನ ಕೋರಿಕೆ’ ಎಂದು ರಾಜಮೌಳಿ ಹೇಳಿದ್ದಾರೆ.

ಪ್ರಶಸ್ತಿ ಗೆದ್ದ ಖುಷಿಯಲ್ಲಿ ರಾಮ್ ಚರಣ್ ಅವರನ್ನು ವೇದಿಕೆ ಮೇಲೆ ಕರೆತಂದರು ರಾಜಮೌಳಿ. ಈ ವೇಳೆ ಮಾತನಾಡಿದ ರಾಮ್ ಚರಣ್ ಒಳ್ಳೊಳ್ಳೆಯ ಸಿನಿಮಾ ಮಾಡುವ ಭರವಸೆಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಜೂ.ಎನ್​ಟಿಆರ್ ಕೂಡ ಭಾಗಿ ಆಗಬೇಕಿತ್ತು. ಆದರೆ, ತಾರಕ ರತ್ನ ನಿಧನ ಹಿನ್ನೆಲೆಯಲ್ಲಿ ಅವರು ಇಲ್ಲಿಗೆ ಆಗಮಿಸೋಕೆ ಸಾಧ್ಯವಾಗಿಲ್ಲ.  

ಇದನ್ನೂ ಓದಿ: ರಾಜಮೌಳಿ ಮಾತು ಕೇಳಿ ನನ್ನ ಹೃದಯ ಒಡೆದಿತ್ತು;ಗೂಳಿ ನಟಿ ಮಮತಾ ಮೋಹನ್​ದಾಸ್

ಈ ಬಾರಿ ಆಸ್ಕರ್ ಅವಾರ್ಡ್ ಭಾರತೀಯರ ಪಾಲಿಗೆ ವಿಶೇಷವಾಗಿದೆ. ಇದಕ್ಕೆ ಕಾರಣ ‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ರೇಸ್​ನಲ್ಲಿರುವುದು. ಮಾರ್ಚ್ 12ರಂದು (ಭಾರತೀಯ ಕಾಲಮಾನ ಮಾರ್ಚ್​ 13 ಮುಂಜಾನೆ 5.30) ಆಸ್ಕರ್ ಅವಾರ್ಡ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ‘ಆರ್​ಆರ್​ಆರ್​’ ತಂಡ ಭಾಗಿ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!